A woman's body was found in a partially decomposed state ಶಿವಮೊಗ್ಗ | ಅಪಾರ್ಟ್’ಮೆಂಟ್ ನಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ!

shimoga | ಶಿವಮೊಗ್ಗ – ಅಪಾರ್ಟ್’ಮೆಂಟ್ ನಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ!

ಶಿವಮೊಗ್ಗ (shivamogga), ಸೆ. 5 : ಅಪಾರ್ಟ್’ಮೆಂಟ್ (apartment) ವೊಂದರಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ, ಮಹಿಳೆಯೋರ್ವರ ಶವ ಪತ್ತೆಯಾದ ಘಟನೆ, ಶಿವಮೊಗ್ಗ ನಗರದ ಗೋಪಾಳ ಬಡಾವಣೆ (goapala extension) ಯಲ್ಲಿ ನಡೆದಿದೆ.

ಸುಧಾ (48) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಇವರು ತಂಗಿದ್ದ ಅಪಾರ್ಟ್’ಮೆಂಟ್ ಮನೆ ಬಾಗಿಲಿಗೆ, ಒಳಗಿನಿಂದ ಚಿಲಕ ಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ, ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಮುರಿದು ಪರಿಶೀಲಿಸಿದಾಗ, ಮನೆಯ ಬಾತ್ ರೂಂನಲ್ಲಿ ಭಾಗಶಃ ಕೊಳತೆ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ (woman’s body was found in a partially decomposed state) ಯಾಗಿದೆ.

ಸುಧಾರವರು ವಿವಾಹಿತರಾಗಿದ್ದು, ಪತಿ ತೊರೆದಿದ್ದರು. ಅಪಾರ್ಟ್’ಮೆಂಟ್ ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇವರ ಪುತ್ರ ಬೋರ್ಡಿಂಗ್ ಶಾಲೆಯೊಂದರಲ್ಲಿ ಅಭ್ಯಾಸ ಮಾಡುತ್ತಿದ್ದಾನೆ ಎನ್ನಲಾಗಿದೆ.

ಸುಧಾರವರು ಏಕಾಂಗಿಯಾಗಿ  ನೆಲೆಸಿದ್ದರು. ಅವರ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಇನ್ಸ್’ಪೆಕ್ಟರ್ (inspector) ಕೆ.ಟಿ.ಗುರುರಾಜ್ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆ (tunga nagara police station) ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

A one-and-a-half-year-old child died after swallowing a juice bottle cap! ಜ್ಯೂಸ್ ಬಾಟಲಿ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗುವಿನ ದಾರುಣ ಸಾವು! Previous post shikaripur | ಶಿಕಾರಿಪುರ – ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗುವಿನ ದಾರುಣ ಸಾವು!
MP B. Y. Raghavendra appeals to Union Petroleum Minister for establishment of fuel farm at Shimoga airport ಶಿವಮೊಗ್ಗ ವಿಮಾನ ನಿಲ್ದಾಣ ಇಂಧನ ಫಾರ್ಮ್ ಸ್ಥಾಪನೆಗೆ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಸಂಸದ ಬಿ.ವೈ.ರಾಘವೇಂದ್ರ ಮನವಿ Next post shimoga | ಶಿವಮೊಗ್ಗ ವಿಮಾನ ನಿಲ್ದಾಣ : ಕೇಂದ್ರ ಸಚಿವರಿಗೆ ಸಂಸದ ಬಿ.ವೈ.ರಾಘವೇಂದ್ರ ಸಲ್ಲಿಸಿದ ಮನವಿಯೇನು?