shimoga | bhadravati | Huge human chain in Shimoga – Bhadravati Taluk: Thousands of people involved! ಶಿವಮೊಗ್ಗ – ಭದ್ರಾವತಿ ತಾಲೂಕು ವ್ಯಾಪ್ತಿಯಲ್ಲಿ ಬೃಹತ್ ಮಾನವ ಸರಪಳಿ : ಸಾವಿರಾರು ಜನ ಭಾಗಿ!

shimoga | bhadravati | ಶಿವಮೊಗ್ಗ – ಭದ್ರಾವತಿ ತಾಲೂಕು ವ್ಯಾಪ್ತಿಯಲ್ಲಿ ಬೃಹತ್ ಮಾನವ ಸರಪಳಿ : ಸಾವಿರಾರು ಜನ ಭಾಗಿ!

ಶಿವಮೊಗ್ಗ (shivamogga), ಸೆ. 15: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ (international democracy day) ಯನ್ನು, ಶಿವಮೊಗ್ಗ – ಭದ್ರಾವತಿ ತಾಲೂಕು (bhadravati – shimoga taluks) ವ್ಯಾಪ್ತಿಯಲ್ಲಿ ಬೃಹತ್ ಮಾನವ ಸರಪಳಿ ರಚನೆ ಮಾಡುವ ಮೂಲಕ, ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.

ದಿನಾಚರಣೆ ಅಂಗವಾಗಿ ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ (human chain bidar to chamarajanagar) ರಚನೆ ಮಾಡಲಾಗಿತ್ತು. ಅದರಂತೆ ಶಿವಮೊಗ್ಗ ಜಿಲ್ಲೆ (shimoga district) ಯಲ್ಲಿಯೂ ಬೃಹತ್ ಮಾನವ ಸರಪಳಿ ರಚಿಸಲಾಗಿತ್ತು.

ಭದ್ರಾವತಿ (bhadravati) ತಾಲೂಕಿನ ಕಾರೇಹಳ್ಳಿ ಗ್ರಾಮದಿಂದ ಮಾನವ ಸರಪಳಿ ರಚನೆ ಪ್ರಾರಂಭವಾಯಿತು. ಭದ್ರಾವತಿ ಹಾಗೂ ಶಿವಮೊಗ್ಗ ನಗರಗಳ ಮೂಲಕ ಹಾದು, ಶಿವಮೊಗ್ಗ (shimoga) ತಾಲೂಕಿನ ಮಡಿಕೆ ಚೀಲೂರು ಗ್ರಾಮದವರೆಗೆ ಸುಮಾರು 60 ಕಿ.ಮೀ. ಮಾನವ ಸರಪಳಿ (human chain) ರಚನೆ ಮಾಡಲಾಗಿತ್ತು.

ಸದರಿ ಮಾನವ ಸರಪಳಿಯಲ್ಲಿ ಎರಡೂ ತಾಲೂಕು ವ್ಯಾಪ್ತಿಯ ಶಾಲಾ – ಕಾಲೇಜು ವಿದ್ಯಾರ್ಥಿಗಳು (schools – college students), ನಾಗರೀಕರು, ವಿವಿಧ ಸಂಘಸಂಸ್ಥೆಗಳ ಸದಸ್ಯರು ಭಾಗಿಯಾಗಿದ್ದುದು ಕಂಡುಬಂದಿತು.

ಬೆಳಗ್ಗೆ 8.30 ರಿಂದ ಮಾನವ ಸರಪಳಿ ರಚನೆ ಪ್ರಕ್ರಿಯೆ ಆರಂಭಗೊಂಡಿತು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ (international democracy day) ಜಿಲ್ಲಾ ಮಟ್ಟದ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿ (shimoga dc office) ಆವರಣದಲ್ಲಿ ಆಯೋಜಿಸಲಾಗಿತ್ತು.

ಮಾರ್ಗಗಳು : ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮ (karehalli village) ದಿಂದ ಮಾನವ ಸರಪಳಿ ಆರಂಭವಾಯಿತು. ಕೆಂಪೇಗೌಡನಗರ – ಬಾರಂದೂರು – ಮೊಸರಳ್ಳಿ – ಸುಣ್ಣದಹಳ್ಳಿ – ಮಾರುತಿನಗರ – ಭದ್ರಾವತಿ ಬಸ್ ನಿಲ್ದಾಣ – ಕಡದಕಟ್ಟೆ – ಜೇಡಿಕಟ್ಟೆ – ಮಾಚೇನಹಳ್ಳಿ ಕೆ.ಎಂ.ಎಫ್ ಡೈರಿ (kmf dairy) ಯ ಮೂಲಕ ಶಿವಮೊಗ್ಗ ತಾಲೂಕು (shimoga taluk) ಗಡಿ ತಲುಪಿತು.

Shivamogga: The body of an unidentified woman was found near a bar! ಶಿವಮೊಗ್ಗ : ಬಾರ್ ಸಮೀಪ ಅಪರಿಚಿತ ಮೃತ ಮಹಿಳೆಯ ಮೃತದೇಹ ಪತ್ತೆ! Previous post shimoga railway police | ಶಿವಮೊಗ್ಗ – ರೈಲ್ವೆ ಹಳಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆ!
shimoga | onam festival | Shimoga : Onam celebration by Kerala society ಶಿವಮೊಗ್ಗ : ಕೇರಳ ಸಮಾಜದಿಂದ ಓಣಂ ಹಬ್ಬ ಆಚರಣೆ Next post shimoga | onam festival | ಶಿವಮೊಗ್ಗ : ಕೇರಳ ಸಮಾಜದಿಂದ ಓಣಂ ಹಬ್ಬ ಆಚರಣೆ