shimoga | hindu mahasabha ganapati | ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ – ಭದ್ರತೆಗೆ ಸಾವಿರಾರು ಪೊಲೀಸರ ನಿಯೋಜನೆ!

Shimoga : Hindu Mahasabha Ganapati Procession - Thousands of Police Deployed for Security! ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ - ಭದ್ರತೆಗೆ ಸಾವಿರಾರು ಪೊಲೀಸರ ನಿಯೋಜನೆ!

ಶಿವಮೊಗ್ಗ (shivamogga), ಸೆ. 16: ಶಿವಮೊಗ್ಗ ನಗರದಲ್ಲಿ ಸೆ. 17 ರಂದು ನಡೆಯಲಿರುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ (hindu mahasabha ganapati procession) ಗೆ, ಭಾರೀ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ.

3 ಎಎಸ್ಪಿ, 25 ಡಿವೈಎಸ್ಪಿ, 60 ಇನ್ಸ್’ಪೆಕ್ಟರ್ ಗಳು, 110 ಸಬ್ ಇನ್ಸ್’ಪೆಕ್ಟರ್ ಗಳು, 200 ಎಎಸ್ಐ, 3500 ಹೆಡ್ ಕಾನ್ಸ್’ಟೇಬಲ್ – ಕಾನ್ಸ್’ಟೇಬಲ್, ಗೃಹ ರಕ್ಷಕ ದಳ ಸಿಬ್ಬಂದಿಗಳು,

1 ಕಂಪೆನಿ ಕ್ಷಿಪ್ರ ಕಾರ್ಯಾಚರಣೆ ಪಡೆ, 8 ಡಿಎಆರ್ ತುಕುಡಿ, 1 ಓಆರ್’ಟಿ ತುಕುಡಿ, 1 ಡಿ.ಎಸ್.ಡಬ್ಲ್ಯೂಎಟಿ ತುಕುಡಿ, 5 ಡ್ರೋಣ್ ಕ್ಯಾಮರಾಗಳು, 100 ವೀಡಿಯೋಗ್ರಾಫರ್ ಗಳನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿ – ಸಿಬ್ಬಂದಿಗಳ (police officers – staff) ಸಭೆಯನ್ನು, ಸೆ. 16 ರ ಸೋಮವಾರ ಮಧ್ಯಾಹ್ನ ಡಿಎಆರ್ ಮೈದಾನದಲ್ಲಿ ಎಸ್ಪಿ (sp) ಜಿ.ಕೆ.ಮಿಥುನ್ ಕುಮಾರ್ ಅವರು ನಡೆಸಿದರು. ಸಲಹೆ – ಸೂಚನೆಗಳನ್ನು ನೀಡಿದರು.

ಮಾರ್ಗ ವಿವರ : ಭೀಮೇಶ್ವರ ದೇವಾಲಯ ಆವರಣದಿಂದ ಮೆರವಣಿಗೆ ಆರಂಭವಾಗಲಿದೆ. ಎಸ್.ಪಿ.ಎಂ ರಸ್ತೆ, ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಎಎ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ ರಸ್ತೆ, ಜೈಲ್ ಸರ್ಕಲ್, ಕುವೆಂಪು ರಸ್ತೆ,

ಶಿವಮೂರ್ತಿ ಸರ್ಕಲ್, ಸವಳಂಗ ರಸ್ತೆ, ಡಿವಿಎಸ್ ಕಾಲೇಜ್ ರಸ್ತೆ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ, ಬಿ.ಹೆಚ್.ರಸ್ತೆ, ಕೋಟೆ ರಸ್ತೆ ಮಾರ್ಗವಾಗಿ ಸಾಗಿ ಭೀಮೇಶ್ವರ ದೇವಾಲಯ ಸಮೀಪದ ತುಂಗಾ ನದಿಯಲ್ಲಿ ಗಣಪತಿಯ ವಿಸರ್ಜನೆ ಮಾಡಲಾಗುತ್ತದೆ.

ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಗಳಿವೆ. ಬೆಳಿಗ್ಗೆ 9. 30 ರ ನಂತರ ಮೆರವಣಿಗೆ ಆರಂಭವಾಗಲಿದ್ದು, ಗಣಪತಿಯ ವಿಸರ್ಜನಾ ಕಾರ್ಯವು ತಡರಾತ್ರಿಯ ನಂತರ ನಡೆಯಲಿದೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →