BREAKING NEWS | ಮುಡಾ ಪ್ರಕರಣ - ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ರದ್ದು ಕೋರಿ ಸಿಎಂ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್!

BREAKING NEWS | ಮುಡಾ ಪ್ರಕರಣ – ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ರದ್ದು ಕೋರಿ ಸಿಎಂ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್!

ಬೆಂಗಳೂರು (bengaluru), ಸೆ.24: ಮೂಡಾ ಪ್ರಕರಣಕ್ಕೆ (muda case) ಸಂಬಂಧಿಸಿದಂತೆ, ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಿರುವ ಪೂವಾನುಮತಿ ರದ್ದು ಪಡಿಸಲು ಕೋರಿ, ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿ ತೀರ್ಪು ನೀಡಿದೆ.

ಹೈಕೋರ್ಟ್ (high court) ಏಕ ಸದಸ್ಯ ಪೀಠದ ನ್ಯಾಯಾಧೀಶರಾದ ಎಂ ನಾಗಪ್ರಸನ್ನ ಅವರು ಸೆ.24 ರ ಮಂಗಳವಾರ ತೀರ್ಪು ಪ್ರಕಟಿಸಿದ್ದಾರೆ. ಸಿಎಂ ಸಲ್ಲಿಸಿದ್ದ ತಕರಾರು ಅರ್ಜಿಯ ಕುರಿತಂತೆ, ಇತ್ತೀಚಿಗೆ ಹಿರಿಯ ವಕೀಲರು ಸುದೀರ್ಘ ವಾದ – ಪ್ರತಿವಾದ ಮಂಡಿಸಿದ್ದರು. ವಾದ -ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ತೀರ್ಪನ್ನು ಕಾಯ್ದರಿಸಿದ್ದರು.

ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪು ಸಿಎಂ ಸಿದ್ದರಾಮಯ್ಯ ಅವರಿಗೆ ಭಾರೀ ಹಿನ್ನಡೆ ಉಂಟು ಮಾಡಿದೆ. ಏಕ ಸದಸ್ಯ ಪೀಠದ ತೀರ್ಪಿನ ವಿರುದ್ಧ, ಹೈಕೋರ್ಟ್ ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ( prosecution) ಪ್ರಕರಣದ ವಿಚಾರಣೆಯು ಇಡೀ ದೇಶದ ಗಮನ ಸೆಳೆದಿತ್ತು. ಪ್ರಸ್ತುತ ಹೈಕೋರ್ಟ್ ಸಿಎಂ ಅರ್ಜಿಯನ್ನು ವಜಾ ಗೊಳಿಸಿರುವುದರಿಂದ, ರಾಜಕೀಯವಾಗಿ ಯಾವೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

MUDA case : Karnataka High Court dismisses CM Siddaramaiah’s petition – upholds Governor’s sanction for prosecution

agumbe woman missing | Agumbe : The old woman who left the house has disappeared! ಆಗುಂಬೆ : ಮನೆಯಿಂದ ಹೊರಹೋದ ವೃದ್ದೆ ಕಣ್ಮರೆ – ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ Previous post agumbe woman missing | ಆಗುಂಬೆ : ಮನೆಯಿಂದ ಹೊರಹೋದ ವೃದ್ದೆ ಕಣ್ಮರೆ!
BREAKING NEWS | High Court Verdict: What was CM Siddaramaiah's first reaction? ಹೈಕೋರ್ಟ್ ತೀರ್ಪು : ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಏನು? Next post BREAKING NEWS | ಹೈಕೋರ್ಟ್ ತೀರ್ಪು : ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಏನು?