The tragic end of a 2-year-old who was injured by hot tea falling on me!

hosanagara news | ಮೈಮೇಲೆ ಬಿಸಿ ಟೀ ಬಿದ್ದು ಗಾಯಗೊಂಡಿದ್ದ 2 ವರ್ಷದ ಪುಟಾಣಿಯ ದಾರುಣ ಅಂತ್ಯ..!

ಹೊಸನಗರ (ಶಿವಮೊಗ್ಗ), ನ. 1: ಮೈಮೇಲೆ ಬಿಸಿ ಟೀ ಬಿದ್ದು ಗಂಭೀರವಾಗಿ ಗಾಯಗೊಂಡು, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ 2 ವರ್ಷದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನವೆಂಬರ್ 1 ರಂದು ಬೆಳಿಗ್ಗೆ ನಡೆದಿದೆ.

ಹೊಸನಗರ ತಾಲೂಕಿನ ನಗರ ಸಮೀಪದ ಹಿರಿಮನೆಯ ರಾಜೇಶ್ ಹಾಗೂ ಅಶ್ವಿನಿ ಪಾಟೀಲ್ ಎಂಬುವರ ಪುತ್ರ ಅಥರ್ವ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.

ಕಳೆದ ಅಕ್ಟೋಬರ್ 24 ರ ಗುರುವಾರ ರಾಜೇಶ್ ಅವರ ಪಕ್ಕದ ಮನೆಯ ನಿವಾಸಿಯೋರ್ವರು ಮೃತಪಟ್ಟಿದ್ದರು. ರಾತ್ರಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆಗಮಿಸಿದ್ದವರಿಗಾಗಿ, ರಾಜೇಶ್ ಮನೆಯವರು ಟೀ ಮಾಡಿ ಪಾತ್ರೆಯೊಂದರಲ್ಲಿ ಹಾಕಿ ತಮ್ಮ ಮನೆಯ ಜಗಲಿ ಮೇಲಿಟ್ಟಿದ್ದರು.

ಬಾಲಕ ಅಥರ್ವ ಆಟವಾಡುತ್ತ ಆಕಸ್ಮಿಕವಾಗಿ ಪಾತ್ರೆ ಹಿಡಿದು ಎಳೆದಿದ್ದಾನೆ. ಈ ವೇಳೆ ಬಿಸಿ ಟೀ ಆತನ ಮೈಮೇಲೆ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಥರ್ವನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.

ಪುಟಾಣಿ ಕಂದಮ್ಮನ ದಾರುಣ ಅಂತ್ಯವು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸುವಂತೆ ಮಾಡಿದೆ.

A 2-year-old boy from Hosnagar taluk of Shimoga district, who was being treated at Ven Lock Hospital in Mangalore, was seriously injured after a hot tea fell on him and died on the morning of November 1.

CM Siddaramaiah says BJP-JDS are not satisfied due to implementation of guarantee ಗ್ಯಾರಂಟಿ ಜಾರಿಯಿಂದಾಗಿ ಬಿಜೆಪಿ - ಜೆಡಿಎಸ್ ಗೆ ಸಮಾಧಾನವಿಲ್ಲದಂತಾಗಿದೆ - ಸಿಎಂ ಸಿದ್ದರಾಮಯ್ಯ Previous post ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆಯಿಲ್ಲ : ಸಿಎಂ ಸಿದ್ದರಾಮಯ್ಯ
Waqf dispute - notices given to farmers withdrawn Amendments in Pahani are cancelled Government's important decision! ವಕ್ಫ್ ವಿವಾದ - ರೈತರಿಗೆ ನೀಡಿರುವ ನೋಟೀಸ್ ವಾಪಸ್ ; ಪಹಣಿಯಲ್ಲಿನ ತಿದ್ದುಪಡಿಗಳೂ ರದ್ದು : ಸರ್ಕಾರದ ಮಹತ್ವದ ತೀರ್ಮಾನ Next post ವಕ್ಫ್ ವಿವಾದ – ರೈತರಿಗೆ ನೀಡಿರುವ ನೋಟೀಸ್ ವಾಪಸ್ ; ಪಹಣಿಯಲ್ಲಿನ ತಿದ್ದುಪಡಿಗಳೂ ರದ್ದು : ಸರ್ಕಾರದ ಮಹತ್ವದ ತೀರ್ಮಾನ!