Cattle theft in Fortuner car: Sagara police operation - two arrested! ಫಾರ್ಚೂನರ್ ಕಾರಿನಲ್ಲಿ ದನಗಳ ಕಳವು : ಸಾಗರ ಪೊಲೀಸರ ಕಾರ್ಯಾಚರಣೆ – ಇಬ್ಬರ ಬಂಧನ!

sagara crime news | ಫಾರ್ಚೂನರ್ ಕಾರಿನಲ್ಲಿ ದನಗಳ ಕಳವು : ಸಾಗರ ಪೊಲೀಸರ ಕಾರ್ಯಾಚರಣೆ – ಇಬ್ಬರ ಬಂಧನ!

ಸಾಗರ (sagar), ನ. 9: ಫಾರ್ಚೂನರ್ ಕಾರಿನಲ್ಲಿ ಆಗಮಿಸಿ ಎರಡು ದನ ಕಳವು ಮಾಡಿ ಕೊಂಡೊಯ್ದಿದ್ದ ಆರೋಪದ ಮೇರೆಗೆ, ಶಿವಮೊಗ್ಗ ನಗರದ ಇಬ್ಬರು ಯುವಕರನ್ನು ಸಾಗರ ಪೇಟೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನ. 8 ರಂದು  ನಡೆದಿದೆ.

ಶಿವಮೊಗ್ಗದ ಬೈಪಾಸ್ ರಸ್ತೆ ಬಳಿಯ ಮೆಹಬೂಬ್ ನಗರದ ನಿವಾಸಿಯಾದ ಗುಜರಿ ವ್ಯಾಪಾರಿ ಮೊಹಮ್ಮದ್ ಸಲ್ಮಾನ್ (19) ಹಾಗೂ ವಾದಿ ಎ ಹುದಾ ನಿವಾಸಿಯಾದ ಸ್ಟಿಕ್ಕರ್ ಕಟಿಂಗ್ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಮುಶೀರ್ (25) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಇವರ ಸಹಚರ ಮಂಗಳೂರು ಮೂಲದ ವ್ಯಕ್ತಿಯೋರ್ವ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಬಂಧಿತ ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ ಫಾರ್ಚೂನರ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ ಸಂತೋಷ್ ಶೆಟ್ಟಿ ನೇತೃತ್ವದ ಸಬ್ ಇನ್ಸ್’ಪೆಕ್ಟರ್ ಯಲ್ಲಪ್ಪ ಟಿ ಹಿರೇಗಣ್ಣನವರ್, ನಾಗರಾಜ್ ಟಿ ಎಂ ಮತ್ತವರ ಸಿಬ್ಬಂದಿಗಳಾದ ಶೇಕ್ ಫೈರೋಜ್, ಸನಾವುಲ್ಲಾ, ವಿಕಾಸ್, ರವಿಕುಮಾರ್, ಕೃಷ್ಣಮೂರ್ತಿ, ವಿಶ್ವನಾಥ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : ಸಾಗರ ಪಟ್ಟಣದ ಶಿವಪ್ಪನಾಯಕ ನಗರದ ಆಶ್ರಮ ಶಾಲೆ ಹಿಂಭಾಗದಲ್ಲಿ, 27-5-2024 ರಂದು ರಾತ್ರಿ ಮಲಗಿದ್ದ ಎರಡು ದನಗಳನ್ನು, ಕಾರಿನಲ್ಲಿ ಆಗಮಿಸಿ ಕಳವು ಮಾಡಿದ ಕುರಿತಂತೆ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ 6 ತಿಂಗಳ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.  

The incident took place on November 8 when the police arrested two young men of Shimoga city, Sagara Pete Station, on the charge of stealing two cows by arriving in a Fortuner car.

Shimoga: Terrible accident - two students died! ಶಿವಮೊಗ್ಗ : ಭೀಕರ ಅಪಘಾತ – ಇಬ್ಬರು ವಿದ್ಯಾರ್ಥಿಗಳ ದುರ್ಮರಣ! Previous post shimoga accident news | ಶಿವಮೊಗ್ಗ : ಭೀಕರ ಅಪಘಾತ – ಇಬ್ಬರು ವಿದ್ಯಾರ್ಥಿಗಳ ದುರ್ಮರಣ!
Caste abuse, assault case : Bhadravati man sentenced to 4 years rigorous imprisonment! ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ! Next post ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ, ಪೋಟೋಗಳ ಮೂಲಕ ಬ್ಲಾಕ್’ಮೇಲ್ ಮಾಡಿದ್ದವನಿಗೆ ಜೈಲು ಶಿಕ್ಷೆ!