Six people, including two young women, have disappeared in different parts of Shimoga Taluk! ಶಿವಮೊಗ್ಗ ತಾಲೂಕಿನ ವಿವಿಧೆಡೆ ಇಬ್ಬರು ಯುವತಿಯರು ಸೇರಿದಂತೆ ಆರು ಜನ ಕಣ್ಮರೆ!

shimoga | ಶಿವಮೊಗ್ಗ ತಾಲೂಕಿನ ವಿವಿಧೆಡೆ ಇಬ್ಬರು ಯುವತಿಯರು ಸೇರಿದಂತೆ ಆರು ಜನ ಕಣ್ಮರೆ!

ಶಿವಮೊಗ್ಗ (shivamogga), ನ. 16: ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ, ಇಬ್ಬರು ಯುವತಿಯರು ಹಾಗೂ ನಾಲ್ವರು ಪುರುಷರು  ಕಾಣೆಯಾಗಿರುವ ಕುರಿತಂತೆ ದೂರು ದಾಖಲಾಗಿದೆ.

ಈ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ನವೆಂಬರ್ 15 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕಾಣೆಯಾದವರ ವಿವರ ನೀಡಿದೆ. ಪತ್ತೆಗೆ ಸಹಕರಿಸುವಂತೆ ಮನವಿ ಮಾಡಿದೆ.

ಕಾಣೆಯಾದವರ ವಿವರ : ಹೊಳಲೂರು ಗ್ರಾಮ ವಾಸಿ 66 ವರ್ಷದ ವಿರೂಪಾಕ್ಷಪ್ಪ ಬಿನ್ ಲೇ ರಂಗಪ್ಪ ಎಂಬುವವರು, ಜೂ. 5 ರಂದು ಮನೆಯಿಂದ ಹೊರಗೆ ಹೋದವರು ಇಲ್ಲಿಯವರೆಗೆ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ – 5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್, ನೀಲಿ ಪಂಚೆ ಮತ್ತು ಕೆಂಪು ಟವೆಲ್ ಧರಿಸಿರುತ್ತಾರೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ.

ತೊಪ್ಪಿನಘಟ್ಟ1 ನೇ ಕ್ರಾಸ್ ಹರಿಗೆ ವಾಸಿ 48 ವರ್ಷದ ಸತೀಶ್ ಡಿ ಬಿನ್ ಲೇ ದೇವರಾಜ್ ಎಂಬ ವ್ಯಕ್ತಿಯು, ಸೆ. 24 ರಂದು ಮನೆಯಿಂದ ಕೆಲಸಕ್ಕೆ ಹೋದವರು ಇಲ್ಲಿಯವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ – 5.6 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಕಪ್ಪು ಕೂದಲು ಹೊಂದಿದ್ದು, ಮನೆಯಿಂದ ಹೋಗುವಾಗ ಕ್ರೀಮ್ ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಕಾಟನ್ ಶರ್ಟ್ ಧರಿಸಿರುತ್ತಾರೆ. ಕನ್ನಡ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ

ಗೊಂದಿಚಟ್ನಹಳ್ಳಿ ಗ್ರಾಮ ವಾಸಿ 20 ವರ್ಷದ ಅಮೃತ ಟಿ ಬಿನ್ ಎಸ್ ತಿಪ್ಪೇಶಪ್ಪ ಎಂಬ ಯುವತಿ ಆ. 21 ರಂದು ಮನೆಯಿಂದ ಸ್ನೇಹಿತೆಯ ಜೊತೆ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಮಹಿಳೆ ಚಹರೆ – 5.1ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಮಿಶ್ರಿತ ಚೂಡಿದಾರ ಧರಿಸಿರುತ್ತಾರೆ. ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ.

ರಾಗಿಗುಡ್ಡ 2 ನೇ ಕ್ರಾಸ್ ವಾಸಿ 69 ವರ್ಷದ ದೇವೇಗೌಡ ಬಿನ್ ಲೇ ಚುಂಚೇಗೌಡ ಎಂಬುವವರು ಅ. 31 ರಂದು ರಾತ್ರಿ ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ವ್ಯಕ್ತಿಯ ಚಹರೆ – 5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.

ಬಿಜಾಪುರ ತಾಲೂಕು ಘಾಳಪೂಜಿ ಗ್ರಾಮ ವಾಸಿ 20 ವರ್ಷದ ಮೀನಾಕ್ಷಿ ಬಿನ್ ರಮೇಶ್ ಹಾರೆದೊಂಬರ ಎಂಬ ಯುವತಿ , ನ. 07 ರಂದು ಶಿವಮೊಗ್ಗ ಕಲ್ಲಾಪುರದ ಸಾವಿತ್ರಮ್ಮ ಮನೆಯಿಂದ ಹೋದವರು ಇಲ್ಲಿಯವರೆಗೂ ವಾಪಸ್ಸಾಗಿರುವುದಿಲ್ಲ. ಮಹಿಳೆ ಚಹರೆ – 5 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಅರಿಶಿಣ ಬಣ್ಣದ ಚೂಡಿದಾರ, ಪ್ಯಾಂಟ್ ಮತ್ತು ಕಪ್ಪು ಬಣ್ಣದ ದುಪ್ಪಟ್ಟ ಧರಿಸಿರುತ್ತಾರೆ. ಕನ್ನಡ, ಹಿಂದಿ ಮತ್ತು ದೊಂಬರ ಭಾಷೆ ಮಾತನಾಡುತ್ತಾರೆ.

ಚಿತ್ರದುರ್ಗ ಜಿಲ್ಲೆ ಕಾಲ್ಕೆರೆ  ಗ್ರಾಮ ವಾಸಿ ನಿಂಗರಾಜ ಕೆ.ಎಸ್ ಬಿನ್ ಲೇ ಶೇಖರಪ್ಪ ಎಂಬ 23 ವರ್ಷದ ಬುದ್ಧಿಮಾಂದ್ಯ ವ್ಯಕ್ತಿ ಅ.11  ರಂದು ಶಿವಮೊಗದ್ಗ ಚೀಲೂರು  ಬಸ್ ನಿಲ್ದಾಣದಿಂದ ಹೋದವರು ಇಲ್ಲಿಯವರೆಗೂ ವಾಪಾಸ್ಸಾಗಿರುವುದಿಲ್ಲ. ವ್ಯಕ್ತಿ  ಚಹರೆ – 5.6ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದಾರೆ. ನಡೆಯುವಾಗ ಎರಡೂ ಕಾಲು ತುದಿಯಲ್ಲಿ ಮಂಗಾಲಿನಲ್ಲಿ ನಡೆಯುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಬರ್ಮೂಡ ಚಡ್ಡಿ ಧರಿಸಿರುತ್ತಾರೆ. ಕನ್ನಡ ಬಾಷೆ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ.

ಕಾಣೆಯಾಗಿರುವ ಈ ವ್ಯಕ್ತಿಗಳ ಸುಳಿವು ದೊರೆಕಿದಲ್ಲಿ ಸಿಪಿಐ ಗ್ರಾಮಾಂತರ ವೃತ್ತ ಶಿವಮೊಗ್ಗ, ಪಿ.ಎಸ್.ಐ ಗ್ರಾಮಾಂತರ ಪೊಲೀಸ್ ಠಾಣೆ ದೂ. ಸಂ. 08182 261400, 261418, ಮೊ. ನಂ 9480803332, 9480803350 ಅಥವಾ ಕಂಟ್ರೋಲ್ ಶಿವಮೊಗ್ಗ 100 ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

In separate incidents in Shimoga rural police station, two young women and four men have been reported missing. In this regard, the district police department issued a press release on November 15. Details of the missing have been given. Requested to cooperate in the search.

A three-year-old boy died after falling into the water tank of a government hospital in Shikaripura town ಶಿಕಾರಿಪುರ ಸರ್ಕಾರಿ ಆಸ್ಪತ್ರೆ ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಬಾಲಕನ ದಾರುಣ ಸಾವು! Previous post shikaripura | ಶಿಕಾರಿಪುರ – ಸರ್ಕಾರಿ ಆಸ್ಪತ್ರೆ ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಬಾಲಕನ ದಾರುಣ ಸಾವು!
Shimoga: Omni car caught fire! ಶಿವಮೊಗ್ಗ : ಧಗಧಗನೆ ಹೊತ್ತಿ ಉರಿದ ಓಮ್ನಿ ಕಾರು! Next post shimoga | ಶಿವಮೊಗ್ಗ : ಧಗಧಗನೆ ಹೊತ್ತಿ ಉರಿದ ಓಮ್ನಿ ಕಾರು!