A three-year-old boy died after falling into the water tank of a government hospital in Shikaripura town ಶಿಕಾರಿಪುರ ಸರ್ಕಾರಿ ಆಸ್ಪತ್ರೆ ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಬಾಲಕನ ದಾರುಣ ಸಾವು!

shikaripura | ಶಿಕಾರಿಪುರ – ಸರ್ಕಾರಿ ಆಸ್ಪತ್ರೆ ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಬಾಲಕನ ದಾರುಣ ಸಾವು!

ಶಿಕಾರಿಪುರ (shikaripur), ನ. 16: ಮೂರು ವರ್ಷದ ಬಾಲಕನೋರ್ವ, ಸರ್ಕಾರಿ ಆಸ್ಪತ್ರೆಯ ನೀರು ಸಂಗ್ರಹಣಾ ತೊಟ್ಟಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ, ನ. 15 ರಂದು ಶಿಕಾರಿಪುರ ಪಟ್ಟಣದಲ್ಲಿ ನಡೆದಿದೆ.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್ ಸಮೀಪ ಘಟನೆ ನಡೆದಿದೆ. ಶಿಕಾರಿಪುರ ತಾಲೂಕು ಮತ್ತಿಕೋಟೆ ಗ್ರಾಮದ ನಿವಾಸಿ ಇಮ್ರಾನ್ ಎಂಬುವರ ಪುತ್ರ ಮಹಮ್ಮದ್ ಅಯಾನ್ (3) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.

ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ, ಸಂಬಂಧಿಯೋರ್ವರ ಯೋಗಕ್ಷೇಮ ವಿಚಾರಿಸಲು ಇಮ್ರಾನ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದರು. ಈ ವೇಳೆ ಮಹಮ್ಮದ್ ಅಯಾನ್ ಆಟವಾಡುತ್ತಾ ಹೊರಬಂದಿದ್ದಾನೆ.

ಈ ವೇಳೆ ತೆರೆದ ಸ್ಥಿತಿಯಲ್ಲಿದ್ದ ನೆಲದ ನೀರು ಸಂಗ್ರಹಣಾ ತೊಟ್ಟಿಗೆ ಬಾಲಕ ಬಿದ್ದಿದ್ದಾನೆ. ಬಾಲಕ ಕಾಣದಿದ್ದಾಗ ಪೋಷಕರು ಆಸ್ಪತ್ರೆಯ ಎಲ್ಲೆಡೆ ಹುಡುಕಾಡಿದ್ದಾರೆ. ಈ ವೇಳೆ ತೆರೆದ ಸ್ಥಿತಿಯಲ್ಲಿದ್ದ ನೀರಿನ ತೊಟ್ಟಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಈ ಕುರಿತಂತೆ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಪ್ರಕರಣದಡಿ ಕೇಸ್ ದಾಖಲಾಗಿದೆ.

A tragic incident in which a three-year-old boy fell into the water storage tank of a government hospital and died, took place on November 15 in Shikaripura town. The incident took place in the maternity ward of the Women and Child Welfare Hospital. The dead boy has been identified as Mohammed Ayan (3), son of Imran, resident of Mattikote village, Shikaripura taluk.

Shimoga : Protest in front of SP office demanding cancellation of FIR against KS Eshwarappa! ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ವಿರುದ್ಧದ ಎಫ್ಐಆರ್ ರದ್ದತಿಗೆ ಆಗ್ರಹಿಸಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ! Previous post shimoga | ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ವಿರುದ್ಧದ FIR ರದ್ದತಿಗೆ ಆಗ್ರಹಿಸಿ SP ಕಚೇರಿ ಎದುರು ಪ್ರತಿಭಟನೆ!
Six people, including two young women, have disappeared in different parts of Shimoga Taluk! ಶಿವಮೊಗ್ಗ ತಾಲೂಕಿನ ವಿವಿಧೆಡೆ ಇಬ್ಬರು ಯುವತಿಯರು ಸೇರಿದಂತೆ ಆರು ಜನ ಕಣ್ಮರೆ! Next post shimoga | ಶಿವಮೊಗ್ಗ ತಾಲೂಕಿನ ವಿವಿಧೆಡೆ ಇಬ್ಬರು ಯುವತಿಯರು ಸೇರಿದಂತೆ ಆರು ಜನ ಕಣ್ಮರೆ!