
shimog | ಶಿವಮೊಗ್ಗ ಮಹಾನಗರ ಪಾಲಿಕೆ ವಾರ್ಡ್ ಚುನಾವಣೆ ನಡೆಸಲು ಆಗ್ರಹ!
ಶಿವಮೊಗ್ಗ (shivamogga), ಜ. 2: ಶಿವಮೊಗ್ಗ ಮಹಾನಗರ ಪಾಲಿಕೆ ವಾರ್ಡ್ ಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸುವಂತೆ ಆಗ್ರಹಿಸಿ, ಜ. 2 ರಂದು ಬೆಂಗಳೂರಿನಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ಬಿಜೆಪಿ ನಿಯೋಗ ಮನವಿ ಅರ್ಪಿಸಿತು.
ವಾರ್ಡ್ ಸದಸ್ಯರ ಅವಧಿಯು 2023 ನವೆಂಬರ್ನಲ್ಲಿ ನಲ್ಲಿ ಮುಕ್ತಾಯಗೊಂಡಿದೆ. ಒಂದು ವರ್ಷದಿಂದ ಚುನಾಯಿತ ಆಡಳಿತ ಮಂಡಳಿಯಿಲ್ಲ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ನಿಯೋಗ ಆರೋಪಿಸಿದೆ.
ಜನರ ಸಮಸ್ಯೆಗಳನ್ನು ಪಾಲಿಕೆಯಲ್ಲಿ ಆಲಿಸಿ ಪರಿಹಾರ ಕಂಡುಕೊಳ್ಳಲು ಹಾಗೂ ನಗರದ ಅಭಿವೃದ್ಧಿ ವಿಚಾರಗಳ ಬಗ್ಗೆ ತ್ವರಿತ ಕ್ರಮಕೈಗೊಳ್ಳುವ ಹಿತದೃಷ್ಟಿಯಿಂದ, ತ್ವರಿತವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರ ನೇತೃತ್ವದಲ್ಲಿ ಮನವಿ ಅರ್ಪಿಸಲಾಗಿದೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಡಾ.ಧನಂಜಯ್ ಸರ್ಜಿ, ಭಾರತಿ ಶೆಟ್ಟಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳು, ಶಿವಮೊಗ್ಗ ನಗರ ಮಂಡಲ ಬಿಜೆಪಿ ಮುಖಂಡರುಗಳು, ಕಾರ್ಯಕರ್ತರು ಮೊದಲಾದವರಿದ್ದರು.
Shimoga, J. 2: A BJP delegation submitted a petition to the Chief Election Commissioner in Bengaluru on January 2, demanding that Shimoga Municipal Corporation wards be held within the time limit.
The petition was submitted under the leadership of Shimoga city MLA SN Channabasappa. On this occasion, Vidhan Parishad members DS Arun, Dr. Dhananjay Sarji, Bharti Shetty, former members of Mahanagara Palike, Shimoga Nagar Mandal BJP leaders and activists were present.