
shimoga | ಅಂತೂ ಇಂತೂ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆಗೆ ಸಿಕ್ತು ಜಾಗ..!
ಶಿವಮೊಗ್ಗ (shivamogga), ಜ. 4: ಶಿವಮೊಗ್ಗ ನಗರದ ಎಂಆರ್’ಎಸ್ ವೃತ್ತದ ಬಳಿ ಧೂಳು ಹಿಡಿಯುತ್ತಿದ್ದ ಯುದ್ದ ಟ್ಯಾಂಕರ್ ನ್ನು, ನಗರದ ಫ್ರೀಡಂ ಪಾರ್ಕ್ ( ಅಲ್ಲಮಪ್ರಭು ಉದ್ಯಾನವನ ) ಗೆ ಸ್ಥಳಾಂತರಿಸಲಾಗುತ್ತಿದೆ.
ಈಗಾಗಲೇ ಫ್ರೀಡಂ ಪಾರ್ಕ್ ನಲ್ಲಿ ಟ್ಯಾಂಕರ್ ಪ್ರತಿಷ್ಠಾಪನೆಗೆ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಜನವರಿ 26 ರಂದು ಸಾರ್ವಜನಿಕ ವೀಕ್ಷಣೆಗೆ ಯುದ್ಧ ಟ್ಯಾಂಕರ್ ಮುಕ್ತವಾಗಲಿದೆ.
ಭಾರತ – ಪಾಕ್ – ಬಾಂಗ್ಲಾ ಯುದ್ಧದಲ್ಲಿ ಟಿ – 55 ಮಾದರಿಯ ಟ್ಯಾಂಕರ್ ಬಳಕೆಯಾಗಿತ್ತು. ಕಾಲಾಂತರದಲ್ಲಿ ಸೇನೆಯ ಸೇವೆಯಿಂದ ಸದರಿ ಟ್ಯಾಂಕರ್ ನ್ನು ನಿವೃತ್ತಗೊಳಿಸಲಾಗಿತ್ತು. ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರ ಪ್ರಯತ್ನ ಫಲವಾಗಿ, ಕೇಂದ್ರ ರಕ್ಷಣಾ ಇಲಾಖೆಯು ಸದರಿ ಟ್ಯಾಂಕರ್ ನ್ನು ಶಿವಮೊಗ್ಗ ನಗರಕ್ಕೆ ಮಂಜೂರುಗೊಳಿಸಿತ್ತು.
2023 ರ ಆಗಸ್ಟ್ 12 ರಂದು ಮಹಾರಾಷ್ಟ್ರದ ಪುಣೆಯ ಕಿರ್ಕಿ ಸೇನಾ ಕಂಟೋನ್ಮೆಂಟ್ ಬೋರ್ಡ್ ನಿಂದ ಟ್ಯಾಂಕರ್ ನ್ನು ಶಿವಮೊಗ್ಗ ನಗರಕ್ಕೆ ತರಲಾಗಿತ್ತು. ಇದಕ್ಕೆ ಭರ್ಜರಿ ಸ್ವಾಗತ ಕೋರಲಾಗಿತ್ತು.
ಎಂಆರ್’ಎಸ್ ಸರ್ಕಲ್ ನಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿತ್ತು. ಆದರೆ ಸದರಿ ವೃತ್ತದ ಮೂಲಕ ಫ್ಲೈ ಓವರ್, ರಾಷ್ಟ್ರೀಯ ಹೆದ್ಧಾರಿ ಕಾಮಗಾರಿಗಳು ನಡೆಯುವ ಹಿನ್ನೆಲೆಯಲ್ಲಿ, ಸದರಿ ವೃತ್ತದಲ್ಲಿ ಟ್ಯಾಂಕರ್ ಪ್ರತಿಷ್ಠಾಪಿಸದಿರುವ ನಿರ್ಧಾರ ಕೈಗೊಳ್ಳಲಾಗಿತ್ತು. ಬದಲಿ ಜಾಗದ ಹುಡುಕಾಟ ನಡೆಸಲಾಗುತ್ತಿತ್ತು.
ಆದರೆ ಕಳೆದ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಸೂಕ್ತ ಸ್ಥಳಾವಕಾಶ ಗುರುತಿಸದ ಕಾರಣದಿಂದ, ಎಂಆರ್’ಎಸ್ ಸರ್ಕಲ್ ನ ಮೆಸ್ಕಾಂ ವಸತಿ ಗೃಹಗಳ ಸಮೀಪ ಟ್ಯಾಂಕರ್ ನಿಲ್ಲಿಸಲಾಗಿತ್ತು. ಸೂಕ್ತ ನಿರ್ವಹಣೆಯಿಲ್ಲದೆ ಟ್ಯಾಂಕ್ ಧೂಳಿನಿಂದ ಆವೃತವಾಗಿತ್ತು. ಇದಕ್ಕೆ ನಿವೃತ್ತ ಸೈನಿಕರು ಬೇಸರ ವ್ಯಕ್ತಪಡಿಸಿದ್ದರು.
ಈ ನಡುವೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಾ ಸಿ ಎ ಹಿರೇಮಠ ಅವರ ನಿರಂತರ ಪ್ರಯತ್ನದ ಫಲವಾಗಿ, ಅಲ್ಲಮಪ್ರಭು ಉದ್ಯಾನವನದಲ್ಲಿ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆಗೆ ಸ್ಥಳ ಗುರುತಿಸಲಾಗಿದೆ. ಈಗಾಗಲೇ ಪೂರ್ವಭಾವಿ ಕಾಮಗಾರಿ ಕೂಡ ನಡೆಸಲಾಗುತ್ತಿದೆ.
Shimoga, J. 4: The war tanker that was gathering dust near MR’S circle in Shimoga city is being moved to Freedom Park (Allama Prabhu Park) in the city.
Preliminary preparations are already being made for the installation of the tanker at Freedom Park. If all goes as planned, the war tanker will be open for public viewing on January 26.
T-55 type of tanker was used in Indo-Pak-Bangla war. Over time, the said tanker was retired from the service of the army. As a result of the efforts of Lok Sabha Member B Y Raghavendra, the Central Defense Department allotted the said tank to Shimoga city.