
shimoga | ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ದಿಢೀರ್ ಮುಷ್ಕರ!
ಶಿವಮೊಗ್ಗ (shivamogga), ಜ. 4: ಪೌರ ಕಾರ್ಮಿಕ ಮೂರ್ತಿ ಎಂಬುವರಿಗೆ ಕಿರುಕುಳ ನೀಡಿದ ಮಾಜಿ ಕಾರ್ಪೋರೇಟರ್ ಪ್ರಭು ಎಂಬುವರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ಜ. 4 ರ ಶನಿವಾರ ಮಹಾನಗರ ಪಾಲಿಕೆ ನೌಕರರು ಕರ್ತವ್ಯ ಬಹಿಷ್ಕರಿಸಿ ದಿಢೀರ್ ಮುಷ್ಕರ ನಡೆಸಿದ ಘಟನೆ ನಡೆಯಿತು.
ಪಾಲಿಕೆ ಕಚೇರಿ ಆವರಣದಲ್ಲಿ ನೌಕರರು ಧರಣಿ ನಡೆಸಿದರು. ಮಾಜಿ ಕಾರ್ಪೋರೇಟರ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತತ್’ಕ್ಷಣವೇ ನೌಕರನಿಗೆ ಕಿರುಕುಳ ನೀಡಿದ ಮಾಜಿ ಕಾರ್ಪೋರೇಟರ್ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಬೇಕು.
ತೊಂದರೆಗೊಳಗಾದ ನೌಕರನಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕು. ಹಾಗೆಯೇ ಪಾಲಿಕೆ ನೌಕರರು ಸುರಕ್ಷಿತವಾಗಿ ಕಾರ್ಯನಿರ್ವಹಣೆ ಮಾಡುವ ವಾತಾವರಣ ಕಲ್ಪಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ಸ್ಥಗಿತಗೊಳಿಸುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ.
ನೌಕರರ ದಿಢೀರ್ ಪ್ರತಿಭಟನೆಯಿಂದ ಪಾಲಿಕೆಯ ದೈನಂದಿನ ಆಡಳಿತ ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲ ವಿಭಾಗಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದು, ನಾಗರೀಕರ ಕೆಲಸಕಾರ್ಯಗಳು ಅಸ್ತವ್ಯಸ್ತವಾಗುವಂತಾಗಿತ್ತು. ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಏನೀದು ಘಟನೆ? : ಪಾಲಿಕೆ ಸ್ವಚ್ಛತಾ ಕೆಲಸದ ಮೇಸ್ತ್ರಿಯಾಗಿರುವ ಮೂರ್ತಿ ಎಂಬುವರು, ಜ. 3 ರಂದು ವೀಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ತಮಗೆ ವಿನಾ ಕಾರಣ ತೊಂದರೆ ಕೊಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ವಿಷದ ಬಾಟಲಿ ತೋರ್ಪಿಡಿಸಿದ್ದರು.
ನಂತರ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಣ್ಮರೆಯಾಗಿದ್ದರು. ಅವರಿಗಾಗಿ ಸಾಕಷ್ಟು ಶೋಧ ನಡೆಸಲಾಗಿತ್ತು. ತದನಂತರ ಅವರ ಸುಳಿವು ಭದ್ರಾವತಿ ಸಮೀಪ ಪತ್ತೆಯಾಗಿದ್ದು, ಅವರನ್ನು ಕರೆತರಲಾಗಿತ್ತು. ಆಸ್ಪತ್ರೆಗೆ ದಾಖಲಿಸಲಾಗಿತ್ತು.
Shimoga, Janauary 4: On Saturday, January 4, Mahanagara Corporation employees boycotted duty and went on a sudden strike, demanding action against former corporator Prabhu who harassed a civic worker named Murthy.
The employees staged a sit-in at the corporation office premises. raised slogans against the former corporator and expressed outrage. A case should be registered against the former corporator who harassed the employee immediately and demand arrested.