shimoga news | ಬೆಂಬಲ ಬೆಲೆಯಡಿ ಭತ್ತ ಖರೀದಿ : ಶಿವಮೊಗ್ಗ ಡಿಸಿ ಪ್ರಕಟಣೆಯೇನು?
ಶಿವಮೊಗ್ಗ (shivamogga), ಸೆಪ್ಟೆಂಬರ್ 27: ಪ್ರಸಕ್ತ ಸಾಲಿನ 2025-26 ರ ಮುಂಗಾರು ಹಂಗಾಮಿನಲ್ಲಿ, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಕೇಂದ್ರ ಸರ್ಕಾರವು ಭತ್ತ ಖರೀದಿಸಲು ಮುಂದಾಗಿದೆ.
ಅದರಂತೆ ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ 2369 ರೂ. ಹಾಗೂ ಗ್ರೇಡ್ ಎ ಭತ್ತ ಪ್ರತಿ ಕ್ವಿಂಟಾಲ್‌ಗೆ 2389 ರೂ. ದರ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಜಿಲ್ಲಾ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮತ್ತು ನಿಗಮದ ವತಿಯಿಂದ TAPCMS/PACS/FPOs/ಉಪ ಏಜೆನ್ಸಿಗಳನ್ನು ನೇಮಿಸಲಾಗಿದೆ.
ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಭತ್ತವನ್ನು ಖರೀದಿಸಲಿದ್ದು, ಜಿಲ್ಲೆಯ ಎಲ್ಲಾ 7 ತಾಲ್ಲೂಕುಗಳ ಎಪಿಎಂಸಿ ಯಾರ್ಡ್ ಗಳಲ್ಲಿರುವ ಕೆಎಫ್‌ಸಿಎಸ್‌ಸಿ (KFCSC) ಸಗಟು ಮಳಿಗೆಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ.
ಭತ್ತವನ್ನು ನೊಂದಾಯಿಸಿಕೊಳ್ಳಲು ಅ.31 ಕೊನೆಯ ದಿನಾಂಕವಾಗಿದ್ದು, ರೈತರು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ಐಡಿಯೊಂದಿಗೆ ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಬೇಕು. ನ.1 ರಿಂದ ಫೆ 28 ರವರೆಗೆ ಭತ್ತವನ್ನು ಖರೀದಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
shivamogga, September 27 : The Central Government has decided to purchase paddy from the farmers of the state under the Minimum Support Price Scheme for the 2025-26 monsoon season, at a price of Rs. 2369 per quintal for normal paddy and Rs. 2389 per quintal for Grade A paddy.
More Stories
shimoga news | ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ಶಾಸಕರ ಭೇಟಿ
Shivamogga: Houses damaged due to cylinder explosion – MLA visits
ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ಶಾಸಕರ ಭೇಟಿ
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 26 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for December 26 in shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 26 ರ ತರಕಾರಿ ಬೆಲೆಗಳ ವಿವರ
shimoga | ಶಿವಮೊಗ್ಗದ ಜೆಪಿಎನ್ ರಸ್ತೆ ನಿವಾಸಿ ಸುಲೋಚನಮ್ಮ ವಿಧಿವಶ
Sulochanamma a resident of JPN Road Shimoga passed away
ಶಿವಮೊಗ್ಗದ ಜೆಪಿಎನ್ ರಸ್ತೆ ನಿವಾಸಿ ಸುಲೋಚನಮ್ಮ ವಿಧಿವಶ
shimoga news | ಶಿವಮೊಗ್ಗ : ಗ್ಯಾಸ್ ಸಿಲಿಂಡರ್ ಸ್ಪೋಟ – ಮನೆ ಸಂಪೂರ್ಣ ಜಖಂ!
Shimoga: Gas cylinder explosion – the house is completely damaged!
ಶಿವಮೊಗ್ಗ : ಗ್ಯಾಸ್ ಸಿಲಿಂಡರ್ ಸ್ಪೋಟ – ಮನೆ ಸಂಪೂರ್ಣ ಜಖಂ!
hiriyur bus accident | shimoga | ಹಿರಿಯೂರು ಬಸ್ ದುರಂತ : ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಬಗ್ಗೆ ಸಿಗದ ಸುಳಿವು!
Hiriyur bus tragedy: No clue found about two passengers from Shimoga!
ಹಿರಿಯೂರು ಬಸ್ ದುರಂತ : ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಬಗ್ಗೆ ಸಿಗದ ಸುಳಿವು!
shimoga | power cut news | ಶಿವಮೊಗ್ಗ ನಗರದ ವಿವಿಧೆಡೆ ಡಿಸೆಂಬರ್ 26 ರಂದು ವಿದ್ಯುತ್ ವ್ಯತ್ಯಯ!
Power outages in various parts of Shivamogga city on December 26th!
ಶಿವಮೊಗ್ಗ ನಗರದ ವಿವಿಧೆಡೆ ಡಿಸೆಂಬರ್ 26 ರಂದು ವಿದ್ಯುತ್ ವ್ಯತ್ಯಯ!
