shimoga | Call to farmers from anonymous persons: Agriculture department advice to be careful! shimoga | ಅನಾಮಧೇಯ ವ್ಯಕ್ತಿಗಳಿಂದ ರೈತರಿಗೆ ಕರೆ : ಎಚ್ಚರಿಕೆಯಿಂದಿರಲು ಕೃಷಿ ಇಲಾಖೆ ಸಲಹೆ!

shimoga | ಅನಾಮಧೇಯ ವ್ಯಕ್ತಿಗಳಿಂದ ರೈತರಿಗೆ ಕರೆ : ಎಚ್ಚರಿಕೆಯಿಂದಿರಲು ಕೃಷಿ ಇಲಾಖೆ ಸಲಹೆ!

ಶಿವಮೊಗ್ಗ (shivamogga), ಜ. 4: ಇತ್ತೀಚೆಗೆ ಅನಾಮಧೇಯ ಮತ್ತು ಅನಧಿಕೃತ ವ್ಯಕ್ತಿಗಳು, ಕೃಷಿ ಇಲಾಖೆಯವರೆಂದು ಹೇಳಿಕೊಂಡು ಶಿವಮೊಗ್ಗ ತಾಲೂಕಿನ ಹಲವು ರೈತರ ಮೊಬೈಲ್ ಫೋನ್ ಗೆ ಕರೆ ಮಾಡುತ್ತಿದ್ದಾರೆ. ಇಂತಹ ಕರೆಗಳನ್ನು ನಂಬದಂತೆ ಕೃಷಿ ಇಲಾಖೆ ಮನವಿ ಮಾಡಿದೆ.

ರೈತರ ಮೊಬೈಲ್ ಪೋನ್ ಗೆ ಕರೆ ಮಾಡುತ್ತಿರುವ ಅನಾಮಧೇಯ ವ್ಯಕ್ತಿಗಳು, ಕೃಷಿ ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಸ್ಪ್ರಿಂಕ್ಲರ್ ಸೆಟ್ ಮತ್ತು ಟಾರ್ಪಾಲಿನ್ ಅನ್ನು ನಿಮಗೆ ನೀಡಲಾಗುತ್ತದೆ, ಇದಕ್ಕೆ ನೀವು ಫೋನ್‌ಪೇ, ಅಥವಾ ಗೂಗಲ್ ಪೇ ಮೂಲಕ ಹಣ ಪಾವತಿಸಲು ಸೂಚಿಸುತ್ತಿರುತ್ತಾರೆ.

ಆದರೆ ವಾಸ್ತವವಾಗಿ ಕೃಷಿ ಇಲಾಖೆಯಿಂದ ಯಾವುದೇ ಸವಲತ್ತು ಪಡೆಯಬೇಕಾದರೆ,  ರೈತ ಸಂಪರ್ಕ ಕೇಂದ್ರಗಳಿಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.  

ಜೊತೆಗೆ ಅರ್ಹರಿದ್ದಲ್ಲಿ ಇಲಾಖೆಯಿಂದ ಹಣ ವರ್ಗಾವಣೆಗೆ ಪತ್ರವನ್ನು ಪಡೆದು, ರೈತರು ತಮ್ಮ ಖಾತೆಯಿಂದ ನೇರವಾಗಿ ಸಂಸ್ಥೆಯ ಖಾತೆಗೆ ರೈತರ ವಂತಿಕೆ ಮೊತ್ತ ಪಾವತಿಸಬೇಕು. ನಂತರ ಪಾವತಿಸಿದ ದಾಖಲೆ ಸಲ್ಲಿಸಿದ ನಂತರ ಸೌಲಭ್ಯವನ್ನು ರೈತ ಸಂಪರ್ಕ ಕೇಂದ್ರದಲ್ಲಿಯೇ ವಿತರಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ, ಅನುಮಾನಾಸ್ಪದ ಕರೆಗಳು ಬಂದಾಗ ಯಾವುದೇ ರೀತಿ ಹಣ ವರ್ಗಾವಣೆ ಮಾಡಬಾರದು. ಹಾಗೂ ಅಂತಹವರ ಕರೆಯನ್ನು ರೆಕಾರ್ಡ್ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಜೊತೆಗೆ ಪೊಲೀಸ್ ಇಲಾಖೆಯ ಸೈಬರ್ ಕ್ರೈಮ್ ವಿಭಾಗಕ್ಕೆ (ಸಂಪರ್ಕ ಸಂಖ್ಯೆ 1930) ಕರೆಮಾಡಿ ದೂರನ್ನು ಸಲ್ಲಿಸಬೇಕೆಂದು ಶಿವಮೊಗ್ಗ ಸಹಾಯಕ ಕೃಷಿ ನಿರ್ದೇಶಕರು ಜ. 4 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Shimoga, January 4: Recently, anonymous and unauthorized persons have been calling the mobile phones of many farmers in Shimoga taluk, claiming to be from the agriculture department. The Department of Agriculture has appealed not to believe such calls.

Anonymous persons calling the farmers’ mobile phones are claiming to be calling from the Agriculture Department. You will be given a sprinkler set and a tarpaulin, for which you will be instructed to pay via PhonePay, or Google Pay.

In this context, no money transfer should be done when suspicious calls are received. And it has been advised to record the call of such persons.

In addition, in a press release issued on January 4, the Assistant Director of Agriculture, Shimoga, appealed to the Cyber ​​Crime Division of the Police Department (contact number 1930) to file a complaint.

Why did Siddaramaiah say that 'Politicians will be painted if they join for dinner'? ‘ರಾಜಕಾರಣಿಗಳು ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತದೆ…’ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ? Previous post ‘ರಾಜಕಾರಣಿಗಳು ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತದೆ…’ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ?
holehonnuru | Beware of fake police..! : Thieves snatched Woman's mangalasutra!! holehonnuru | ನಕಲಿ ಪೊಲೀಸರಿದ್ದಾರೆ ಎಚ್ಚರ..! : ಮಹಿಳೆಯ ಮಾಂಗಲ್ಯ ಸರ ಅಪಹರಿಸಿದ ಐನಾತಿ ಕಳ್ಳರು!! Next post holehonnuru | ನಕಲಿ ಪೊಲೀಸರಿದ್ದಾರೆ ಎಚ್ಚರ..! : ಮಹಿಳೆಯ ಮಾಂಗಲ್ಯ ಸರ ಅಪಹರಿಸಿದ ಐನಾತಿ ಕಳ್ಳರು!!