Application invitation for establishment of Village One Center in various places of Shimoga district ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಶಿವಮೊಗ್ಗ (shivamogga), ಜ. 13: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ತಮ್ಮ ಸಮೀಪದಲ್ಲಿ ಸರ್ಕಾರದ ಹಲವು ಸೇವೆಗಳು ತಮ್ಮ ಮನೆ ಬಾಗಿಲಿಗೆ ತಲುಪಿಸುತ್ತಿದೆ. 

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೂತನ ಯೋಜನೆಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಭದ್ರಾವತಿ ತಾಲೂಕಿನ ಕಲ್ಲಹಳ್ಳಿ, ಹೊಸನಗರ ತಾಲೂಕಿನ ಚಿಕ್ಕಜೇನಿ, ಸಾಗರ ತಾಲೂಕಿನ ಖಂಡಿಕ, ಆವಿನಹಳ್ಳಿ ಮತ್ತು ಹಿರೇನೆಲ್ಲೂರು, 

ಶಿಕಾರಿಪುರ ತಾಲೂಕಿನ ಚುರ್ಚಿಗುಂಡಿ, ಕೊರಟಿಗೆರೆ, ಶಿವಮೊಗ್ಗ ತಾಲೂಕಿನ ಸೋಗಾನೆ, ತೀರ್ಥಹಳ್ಳಿ ತಾಲೂಕಿನ ನಾಲೂರು (ಕೊಲಗಿ), ಬಸವಾನಿ, ದೇಮ್ಲಾಪುರ, ಅರಗ, ಮುಳಬಾಗಿಲು ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 

ಆಸಕ್ತಿಯುಳ್ಳವರು ಅರ್ಜಿಗಳನ್ನು https://www.karnatakaone.gov.in/Public/GramaOneFranchisee1crms ರಲ್ಲಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Gram One Centers have been set up at Gram Panchayat level to provide the services of various departments of the State Government under one roof, thereby bringing many government services to the people of rural areas at their doorsteps.

In this regard, the new projects of the state government are being implemented through the Sewasindhu portal, and applications have been invited for setting up centers in various parts of Shimoga district.

shimoga | CA Site Allotment : Shimoga-Bhadravati Urban Development Authority Announcement? shimoga | ಸಿಎ ನಿವೇಶನ ಹಂಚಿಕೆ : ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಪ್ರಕಟಣೆಯೇನು? Previous post shimoga | ನಿವೇಶನ ಕೊಡಿಸುವುದಾಗಿ ಹಣಕ್ಕೆ ಬೇಡಿಕೆ : ಶಿವಮೊಗ್ಗ– ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಎಚ್ಚರಿಕೆ!
What did MPs say about Bhadravati-Chikkajazur railway line, Sigandur Bridge, Shimoga-Hagaribommanahalli Hedhari? ಭದ್ರಾವತಿ–ಚಿಕ್ಕಜಾಜೂರು ರೈಲ್ವೆ ಮಾರ್ಗ, ಸಿಗಂದೂರು ಸೇತುವೆ, ಶಿವಮೊಗ್ಗ–ಹಗರಿಬೊಮ್ಮನಹಳ್ಳಿ ಹೆದ್ಧಾರಿ ಬಗ್ಗೆ ಸಂಸದರು ಹೇಳಿದ್ದೇನು? Next post ಭದ್ರಾವತಿ–ಚಿಕ್ಕಜಾಜೂರು ರೈಲ್ವೆ ಮಾರ್ಗ, ಸಿಗಂದೂರು ಸೇತುವೆ, ಶಿವಮೊಗ್ಗ–ಹಗರಿಬೊಮ್ಮನಹಳ್ಳಿ ಹೆದ್ಧಾರಿ ಬಗ್ಗೆ ಸಂಸದರು ಹೇಳಿದ್ದೇನು?