shimoga | ನಿವೇಶನ ಕೊಡಿಸುವುದಾಗಿ ಹಣಕ್ಕೆ ಬೇಡಿಕೆ : ಶಿವಮೊಗ್ಗ– ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಎಚ್ಚರಿಕೆ!
ಶಿವಮೊಗ್ಗ (shivamogga) ಜ. 13: ಕೆಲವು ವ್ಯಕ್ತಿಗಳು ಸೂಡಾ ನಿವೇಶನ ಮಂಜೂರು ಮಾಡಿಕೊಡುವುದಾಗಿ ಹಣದ ಬೇಡಿಕೆಯಿಡುತ್ತಿರುವ ಮಾಹಿತಿಗಳು ಬಂದಿವೆ. ಇಂತಹ ಯಾವುದೇ ಆಮಿಷಕ್ಕೆ ಸಾರ್ವಜನಿಕರು ಒಳಗಾಗದೇ ಇರುವಂತೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ಆಡಳಿತವು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಜ. 13 ರಂದು ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಮತ್ತು ಆಯುಕ್ತರಾದ ವಿಶ್ವನಾಥ ಮುದಜ್ಜಿ ಅವರು ಜಂಟಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದ, ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ಪ್ರಕಟಣೆ ಹೊರಡಿಸಿತ್ತು. ಕಳೆದ 2024 ರ ಡಿಸೆಂಬರ್ 05 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಅವಧಿ ಈಗಾಗಲೇ ಮುಗಿದಿರುತ್ತದೆ. ನಿವೇಶನ ಹಂಚಿಕೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪ್ರಾಧಿಕಾರದಿಂದ ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ನಿವೇಶನ ಹಂಚಿಕೆ ನಿಯಮದಂತೆ ಪರಿಶೀಲಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ಆದರೆ ಕೆಲವು ವ್ಯಕ್ತಿಗಳು ಸಾರ್ವಜನಿಕರಿಗೆ ನಿವೇಶನಗಳನ್ನು ಮಂಜೂರಾತಿ ಮಾಡಿಕೊಡುವುದಾಗಿ ಹಣದ ಬೇಡಿಕೆ ಇಡುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿರುತ್ತದೆ. ಇಂತಹ ಹಣ/ಯಾವುದೇ ಆಮಿಷಗಳಿಗೆ ಒಳಗಾಗದೇ ಇರಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಒಂದು ವೇಳೆ ಇಂತಹ ಯಾವುದೇ ಆಮಿಷಗಳಿಗೆ ತಾವು ಒಳಗಾದಲ್ಲಿ ಈ ಪ್ರಾಧಿಕಾರವು ಜವಾಬ್ದಾರಿಯಾಗಿರುವುದಿಲ್ಲವೆಂದು ಈ ಮೂಲಕ ತಿಳಿಸಲಾಗಿದೆ ಎಂದು ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಮತ್ತು ಆಯುಕ್ತರಾದ ವಿಶ್ವನಾಥ ಮುದಜ್ಜಿ ಸ್ಪಷ್ಟಪಡಿಸಿದ್ದಾರೆ.
Shimoga, January 13 : There have been reports that some persons are demanding money for allotment of commercial plots. Shimoga – Bhadravati Urban Development Authority (SUDA) administration has warned the public not to fall for any such lure.
In this regard, a joint press release was issued by suda President HS Sundaresh and Commissioner Vishwanath Mudajji on January 13.
suda President HS Sundaresh and Commissioner Vishwanath Mudajji have clarified that this authority will not be responsible if they fall for any such lures.
