ಶಿವಮೊಗ್ಗ (shivamogga), ಜ. 16: ಗುತ್ತಿಗೆದಾರರೋರ್ವರಿಂದ ಲಂಚ ಪಡೆಯುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ಓರ್ವರನ್ನು, ಲೋಕಾಯುಕ್ತ ಪೊಲೀಸ್ ತಂಡ ವಶಕ್ಕೆ ಪಡೆದ ಘಟನೆ ಜ. 16 ರಂದು ನಡೆದಿದೆ.
ಪಾಲಿಕೆ ಎಂಜಿನಿಯರಿಂಗ್ – ಅಕೌಂಟ್ ವಿಭಾಗದ ಅಧಿಕಾರಿ ಸಿದ್ದೇಶ್ ಲೋಕಾಯುಕ್ತ ಬಲೆಗೆ ಬಿದ್ದವರೆಂದು ಗುರುತಿಸಲಾಗಿದೆ.
ಭದ್ರಾವತಿ ಮೂಲದ ಗುತ್ತಿಗೆದಾರರೋರ್ವರಿಂದ ಕಚೇರಿಯಲ್ಲಿಯೇ 10 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ತಂಡ ದಾಳಿ ನಡೆಸಿ, ಲಂಚದ ಹಣದ ಸಮೇತ ಎಂಜಿನಿಯರ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ, ಇನ್ಸ್’ಪೆಕ್ಟರ್ ಗಳಾದ ಸುರೇಶ್, ಪ್ರಕಾಶ್ ಸೇರಿದಂತೆ ಮತ್ತವರ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ದಾಳಿಯ ಕುರಿತಂತೆ ಅಧಿಕೃತ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಸಂಜೆ ಕೂಡ ಪಾಲಿಕೆ ಕಚೇರಿಯಲ್ಲಿಯೇ ಲೋಕಾಯುಕ್ತ ತಂಡ ಬೀಡುಬಿಟ್ಟು ಮಾಹಿತಿ ಕಲೆ ಹಾಕುತ್ತಿದೆ.
ಲೋಕಾಯುಕ್ತ ದಾಳಿ ವಿಚಾರವು, ಪಾಲಿಕೆ ಆಡಳಿತದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಕೆಲ ಭ್ರಷ್ಟ ಅಧಿಕಾರಿ, ಸಿಬ್ಬಂದಿಗಳಲ್ಲಿ ನಡುಕ ಸೃಷ್ಟಿಸಿತ್ತು.
An incident took place on January 16 when a Lokayukta police team arrested an officer of Shimoga Municipal Corporation who was taking bribe from a contractor.
It is said that Lokayukta SP Manjunath Chaudhary, inspectors Suresh, Prakash and other staff were involved in the raid.

