budget | Central Budget: Permission for Bhadravati-Chikkajajur new railway line! budget | ಕೇಂದ್ರ ಬಜೆಟ್ : ಭದ್ರಾವತಿ – ಚಿಕ್ಕಜಾಜೂರು ನೂತನ ರೈಲ್ವೆ ಮಾರ್ಗಕ್ಕೆ ಅನುಮತಿ!

budget | ಕೇಂದ್ರ ಬಜೆಟ್ : ಭದ್ರಾವತಿ – ಚಿಕ್ಕಜಾಜೂರು ನೂತನ ರೈಲ್ವೆ ಮಾರ್ಗಕ್ಕೆ ಅನುಮತಿ!

ಶಿವಮೊಗ್ಗ (shivamogga), ಫೆ. 1: ಬಹು ನಿರೀಕ್ಷಿತ ಭದ್ರಾವತಿ – ಚಿಕ್ಕಜಾಜೂರು ನಡುವೆ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ, ಪ್ರಸ್ತುತ ಕೇಂದ್ರ ಬಜೆಟ್ ನಲ್ಲಿ ಅನುಮತಿ ನೀಡಲಾಗಿದೆ.

ಹಾಗೆಯೇ ಶಿಕಾರಿಪುರ – ರಾಣೆಬೆನ್ನೂರು ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ 68 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಈ ವಿಷಯವನ್ನು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ತಿಳಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದ ರೈಲ್ವೆ ಯೋಜನೆಗಳಿಗೆ ಬಜೆಟ್ ನಲ್ಲಿ ಪ್ರಾತಿನಿಧ್ಯ ಕಲ್ಪಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗು ವಿ ಸೋಮಣ್ಣ ಅವರಿಗೆ ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ.

ನೂತನ ಮಾರ್ಗ : ಭದ್ರಾವತಿ – ಚಿಕ್ಕಜಾಜೂರು ನಡುವೆ ಸುಮಾರು 75 ರಿಂದ 80 ಕಿ.ಮೀ. ಅಂತರವಿದೆ. ಈ ಎರಡೂ ಪ್ರದೇಶಗಳ ನಡುವೆ ರೈಲ್ವೆ ಮಾರ್ಗ ನಿರ್ಮಾಣವಾದರೆ, ರೈಲ್ವೆ ಸಂಪರ್ಕ ಮಾತ್ರವಲ್ಲದೆ ಆರ್ಥಿಕ, ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಸಾಕಷ್ಟು ಅನುಕೂಲವಾಗಲಿದೆ.

ವಿಶೇಷವಾಗಿ ಮಲೆನಾಡು, ಕರಾವಳಿ ಭಾಗದವರಿಗೆ ಚಿತ್ರದುರ್ಗ, ಬಳ್ಳಾರಿ, ಗುಂತಕಲ್, ಹೈದ್ರಾಬಾದ್, ಮಂತ್ರಾಲಯ ಸಂಪರ್ಕಕ್ಕೆ ಅನುಕೂಲವಾಗಲಿದೆ. ಸದ್ಯ ಚಿತ್ರದುರ್ಗ ಭಾಗಕ್ಕೆ ಮಲೆನಾಡು, ಕರಾವಳಿ ಭಾಗದಿಂದ ನೇರ ರೈಲ್ವೆ ಸಂಪರ್ಕವಿಲ್ಲವಾಗಿದೆ.

ಹಾಗೆಯೇ ಭದ್ರಾವತಿ ವಿಶ್ವೇಶ್ವರಯ್ಯ ಉಕ್ಕು ಕಬ್ಬಿಣ ಕಾರ್ಖಾನೆ (ವಿಐಎಸ್’ಎಲ್) ಪುನಾರಾರಂಭದ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಮತ್ತೊಂದೆಡೆ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ, ಕಾರ್ಖಾನೆಗೆ ಕಬ್ಬಿಣದ ಅದಿರು ಪೂರೈಕೆಗಾಗಿ ಗಣಿ ಪ್ರದೇಶ ಕೂಡ ಗುರುತಿಸಲಾಗಿದೆ.

ಭದ್ರಾವತಿ – ಚಿಕ್ಕಜಾಜೂರು ನೂತನ ರೈಲ್ವೆ ಮಾರ್ಗದಿಂದ, ಬಳ್ಳಾರಿಯಿಂದ ವಿಐಎಸ್ಎಲ್ ಕಾರ್ಖಾನೆಗೆ ಅದಿರು ಸಾಗಾಣೆಗೆ ಅನುಕೂಲವಾಗಲಿದೆ. ಕಾರ್ಖಾನೆ ಪುನಾರಾರಂಭಕ್ಕೂ ಈ ಮಾರ್ಗ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನೂತನ ಮಾರ್ಗ ಹಾದು ಹೋಗುವ ಸ್ಥಳಗಳ ಸಮೀಕ್ಷೆ ನಡೆಯಬೇಕು. ಇದಕ್ಕೆ ಕೇಂದ್ರದಿಂದ ಅನುಮತಿ ಪಡೆದು, ಭೂ ಸ್ವಾದೀನ ಪ್ರಕ್ರಿಯೆ ನಡೆದು, ತದನಂತರ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಬೇಕು. ಈ ಎಲ್ಲ ಪ್ರಕ್ರಿಯೆಗಳು ನಡೆಯಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ.

ಅನುದಾನ : ಉಳಿದಂತೆ ಈಗಾಗಲೇ ಕಾಮಗಾರಿ ನಡೆಯುತ್ತಿರುವ ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ಮಾರ್ಗಕ್ಕೆ ಪ್ರಸ್ತುತ ಬಜೆಟ್ ನಲ್ಲಿ ಅನುದಾನ ಕಲ್ಪಿಸಲಾಗಿದೆ. ಪ್ರಸ್ತುತ ಶಿವಮೊಗ್ಗ – ಶಿಕಾರಿಪುರ ನಡುವೆ ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಶಿಕಾರಿಪುರ – ರಾಣೆಬೆನ್ನೂರು ನಡುವೆ ಮಾರ್ಗ ನಿರ್ಮಾಣ ಕಾರ್ಯ ಇನ್ನಷ್ಟೆ ಆರಂಭವಾಗಬೇಕಾಗಿದೆ. ಸದ್ಯ ಭೂ ಸ್ವಾದೀನ ಪ್ರಕ್ರಿಯೆ ಹಂತದಲ್ಲಿದೆ. ಸದರಿ ಮಾರ್ಗ ನಿರ್ಮಾಣಕ್ಕೆ ಬಜೆಟ್ ನಲ್ಲಿ 68 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ಉಳಿದಂತೆ ಜಿಲ್ಲೆಯ ಇತರೆ ರೈಲ್ವೆ ಯೋಜನೆಗಳಿಗೆ ಬಜೆಟ್ ನಲ್ಲಿ ಪ್ರಾತಿನಿಧ್ಯ ಲಭ್ಯವಾಗಿದೆಯೇ? ಎಂಬುವುದರ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

The much awaited construction of new railway line between Bhadravati – Chikkajajur has been sanctioned in the current Union Budget. Also, a grant of 68 crore rupees has been earmarked for the construction of railway line between Shikaripura – Ranebennur. Lok Sabha member B Y Raghavendra said this.

About 75 to 80 km between Bhadravati – Chikkajajur. There is a gap. If the railway line is constructed between these two regions, not only the railway connectivity but also the growth of the economic and industrial sector will be greatly facilitated.

Underground Naxal kote Honda Ravi surendered - tomorrow another female Naxal Surrender - 22 policemen announced CM medal! naxal | ಭೂಗತ ನಕ್ಸಲ್ ಕೋಟೆ ಹೊಂಡ ರವಿ ಬೆನ್ನಲ್ಲೇ ನಾಳೆ ಮತ್ತೋರ್ವ ಮಹಿಳಾ ನಕ್ಸಲ್ ಶರಣಾಗತಿ – 22 ಪೊಲೀಸರಿಗೆ ಸಿಎಂ ಪದಕ ಘೋಷಣೆ! Previous post naxal | ಭೂಗತ ನಕ್ಸಲ್ ಕೋಟೆ ಹೊಂಡ ರವಿ ಬೆನ್ನಲ್ಲೇ ನಾಳೆ ಮತ್ತೋರ್ವ ಮಹಿಳಾ ನಕ್ಸಲ್ ಶರಣಾಗತಿ – 22 ಪೊಲೀಸರಿಗೆ ಸಿಎಂ ಪದಕ ಘೋಷಣೆ!
Shivamogga, Jul. 22: Water will be released from the main canal of the Bhadra Upper River Project under the Visvesvaraya Jal Nigam Limited to Vani Vilas Sagar from 27-07-2025 as per the government's directive, the announcement said. Next post bhadra dam | ಭದ್ರಾ ಡ್ಯಾಂನಿಂದ ನದಿಗೆ ನೀರು : ಯಾವಾಗ? ಕಾರಣವೇನು?