naxal | ಭೂಗತ ನಕ್ಸಲ್ ಕೋಟೆ ಹೊಂಡ ರವಿ ಬೆನ್ನಲ್ಲೇ ನಾಳೆ ಮತ್ತೋರ್ವ ಮಹಿಳಾ ನಕ್ಸಲ್ ಶರಣಾಗತಿ – 22 ಪೊಲೀಸರಿಗೆ ಸಿಎಂ ಪದಕ ಘೋಷಣೆ!
ಶಿವಮೊಗ್ಗ (shivamogga), ಫೆ. 1: ಭೂಗತ ನಕ್ಸಲ್ ಕೋಟೆ ಹೊಂಡ ರವಿ (ಯುಜಿ ನಕ್ಸಲ್), ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ 4 ಕಿ.ಮೀ. ದೂರದಲ್ಲಿರುವ ನೆಮ್ಮಾರು ಫಾರೆಸ್ಟ್ ಐಬಿಯಲ್ಲಿ ಶರಣಾಗಿದ್ದಾನೆ.
ಕೋಟೆ ಹೊಂಡ ರವಿಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೆ ಕರೆತರಲಾಗುತ್ತಿದ್ದು, ಕಚೇರಿಯಲ್ಲಿ ಅಧಿಕೃತವಾಗಿ ಶರಣಾಗತಿ ಪ್ರಕ್ರಿಯೆಗಳು ನಡೆಯಲಿವೆ. ತದನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರುಪಡಿಸಲಿದ್ದಾರೆ ಎಂದು ಹೇಳಲಾಗಿದೆ.
ಇದರ ಬೆನ್ನಲ್ಲೆ, ಕಳೆದ ವರ್ಷದಿಂದ ಭೂಗತರಾಗಿದ್ದ ಮತ್ತೋರ್ವ ನಕ್ಸಲ್ ತೊಂಬೆಟ್ಟು ಲಕ್ಷ್ಮೀ ಕೂಡ ಶರಣಾಗಲು ನಿರ್ಧರಿಸಿದ್ದಾರೆ. ನಾಳೆ ಚಿಕ್ಕಮಗಳೂರು ಅಥವಾ ಉಡುಪಿಯಲ್ಲಿ ಅವರ ಶರಣಾಗತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ವಿಕ್ರಂಗೌಡ ಎನ್’ಕೌಂಟರ್ ಬಳಿಕ ನಡೆದ ಬೆಳವಣಿಗೆಯಲ್ಲಿ, ಮುಂಡಗಾರು ಲತಾ ನೇತೃತ್ವದ 6 ನಕ್ಸಲೀಯರು ಬೆಂಗಳೂರಿನಲ್ಲಿ ಸಿಎಂ ಎದುರು ಶರಣಾಗಿದ್ದರು. ವಿಕ್ರಂಗೌಡ ಎನ್’ಕೌಂಟರ್ ನಂತರ ಕೋಟೆ ಹೊಂಡ ರವಿ ಯಾರ ಸಂಪರ್ಕಕ್ಕೂ ಸಿಗದೆ ಭೂಗತರಾಗಿದ್ದರು ಎನ್ನಲಾಗಿದೆ.
ಕೋಟೆ ಹೊಂಡ ರವಿ ಹಾಗೂ ತೊಂಬೆಟ್ಟು ಲಕ್ಷ್ಮೀ ಶರಣಾಗತಿಯಿಂದ, ಕರ್ನಾಟಕವೂ ಸಂಪೂರ್ಣವಾಗಿ ನಕ್ಸಲ್ ಮುಕ್ತ ರಾಜ್ಯವಾಗಲಿದೆ. ಮಲೆನಾಡಿನಲ್ಲಿ ಕಳೆದ ಕೆಲ ದಶಕಗಳಿಂದ ಬೇರೂರಿದ್ದ ನಕ್ಸಲ್ ಚಟುವಟಿಕೆಯ ಅಧ್ಯಾಯಕ್ಕೆ ಪೂರ್ಣ ವಿರಾಮ ಬೀಳಲಿದೆ.
ಪದಕ ಘೋಷಣೆ : ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ನಿರಂತರ ಪ್ರಯತ್ನ ನಡೆಸಿದ, 22 ಪೊಲೀಸ್ ಅಧಿಕಾರಿ – ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಪದಕವನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
Shimoga, February 1: Underground Naxal kote Honda Ravi (UG Naxal), surrendered on February 1 morning at Nemmaru Forest IB, 4 km from Sringeri in Chikmagalur district.
Another underground Naxal Tombettu Lakshmi has also decided to surrender. It is learned that his surrender process will be held in Chikmagalur or Udupi tomorrow.
In a development after the Vikrangowda encounter, 6 Naxalites led by Mundagaru Lata surrendered before the CM in Bengaluru. After the Vikrangowda encounter, Kote Honda Ravi is said to have gone underground without being in touch with anyone.
Announcement of Medal: CM Siddaramaiah has announced the Chief Minister’s Medal to 22 police officers and personnel who have made continuous efforts to make Karnataka a Naxal-free state.
