shimoga | Shimoga: Lion Safari's only male tiger dies - what is the reason? shimoga | ಶಿವಮೊಗ್ಗ : ಲಯನ್ ಸಫಾರಿಯ ಏಕೈಕ ಗಂಡು ಹುಲಿ ಸಾವು – ಕಾರಣವೇನು?

shimoga | ಶಿವಮೊಗ್ಗ : ಲಯನ್ ಸಫಾರಿಯ ಏಕೈಕ ಗಂಡು ಹುಲಿ ಸಾವು – ಕಾರಣವೇನು?

ಶಿವಮೊಗ್ಗ (shivamogga), ಫೆ. 26: ಶಿವಮೊಗ್ಗ ನಗರದ ಹೊರವಲಯ ತ್ಯಾವರೆಕೊಪ್ಪ ಹುಲಿ – ಸಿಂಹಾಧಾಮದಲ್ಲಿದ್ದ, ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂಧುವಾಗಿದ್ದ ಏಕೈಕ ಗಂಡು ಹುಲಿ ‘ವಿಜಯ್’ ಫೆ. 25 ರಂದು ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.

ವಿಜಯ್ ಹುಲಿಗೆ 17 ವರ್ಷ ವಯಸ್ಸಾಗಿತ್ತು. ಲಯನ್ ಸಫಾರಿಯಲ್ಲಿಯೇ ಹುಟ್ಟಿ ಬೆಳೆದಿತ್ತು. ಕಳೆದೊಂದು ತಿಂಗಳಿನಿಂದ, ವಯೋಸಹಜ ಸ್ನಾಯು ಸೆಳೆತ ಹಾಗೂ ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು.

ತದನಂತರ ಅದರ ಚಟುವಟಿಕೆ ಕುಂಠಿತವಾಗಿತ್ತು. ಆಹಾರ ಸೇವನೆ ಕೂಡ ಸ್ಥಗಿತಗೊಳಿಸಿತ್ತು. ವೈದ್ಯರು ಚಿಕಿತ್ಸೆ ನೀಡುತ್ತಿದ್ದರು ಎಂದು ಲಯನ್ ಸಫರಿ ಮೂಲಗಳು ಮಾಹಿತಿ ನೀಡುತ್ತವೆ.

ಮಂಗಳವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಅರಣ್ಯ ಇಲಾಖೆ ವನ್ಯಜೀವಿ ನಿಯಮಾವಳಿ ಅನುಸಾರ ಲಯನ್ ಸಫಾರಿ ಆಡಳಿತವು, ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಿದೆ ಎಂದು ತಿಳಿದುಬಂದಿದೆ.  

ಕಳೆದ ಜನವರಿ  ತಿಂಗಳಲ್ಲಿ ಅಂಜನಿ ಎಂಬ ಹುಲಿ ಸಾವು ಕಂಡಿತ್ತು. ಪ್ರಸ್ತುತ ಲಯನ್ ಸಫಾರಿಯಲ್ಲಿ 17 ವರ್ಷದ ದಶಮಿ, 16 ವರ್ಷದ ಸೀತಾ, 12 ವರ್ಷದ ಪೂರ್ಣಿಮಾ ಮತ್ತು ನಿವೇದಿತಾ ಸೇರಿ 4 ಹೆಣ್ಣು ಹುಲಿಗಳಿವೆ.

Shimoga, Feb 26: An incident took place on Feb 25, where the only male tiger ‘Vijay’, who was the center point of attraction for tourists, died of illness in the Tyawarekoppa Tiger – lion safari on the outskirts of Shimoga city. #thevarakoppa,

Last January, a tiger named Anjani died. At present Lion Safari has 4 female tigresses including 17-year-old Dashami, 16-year-old Sita, 12-year-old Purnima and Nivedita.

'she was dead in the hospital, she started breathing when she was brought home!' An amazing incident in Bhadravati!! bhadravati | ‘ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು… ಮನೆಗೆ ತಂದಾಗ ಕಣ್ತೆರೆದರು..!’ : ಭದ್ರಾವತಿಯಲ್ಲೊಂದು ವಿಸ್ಮಯಕಾರಿ ಘಟನೆ!! Previous post bhadravati | ‘ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು… ಮನೆಗೆ ತಂದಾಗ ಕಣ್ತೆರೆದರು..!’ : ಭದ್ರಾವತಿಯಲ್ಲೊಂದು ವಿಸ್ಮಯಕಾರಿ ಘಟನೆ!!
Shimoga: Farmer's Association's outrage against the finance that locked the house! shimoga : ಮನೆಗೆ ಬೀಗ ಹಾಕಿದ್ದ ಫೈನಾನ್ಸ್ ವಿರುದ್ದ ರೈತ ಸಂಘದ ಆಕ್ರೋಶ! Next post shimoga : ಮನೆಗೆ ಬೀಗ ಹಾಕಿದ್ದ ಫೈನಾನ್ಸ್ ವಿರುದ್ದ ರೈತ ಸಂಘದ ಆಕ್ರೋಶ!