
bhadravati | ಆಂಧ್ರಪ್ರದೇಶದಲ್ಲಿ ನಾಪತ್ತೆಯಾದ ಭದ್ರಾವತಿ ವ್ಯಕ್ತಿ : ಪತ್ತೆಗೆ ಸಹಕರಿಸಲು ಪೊಲೀಸರ ಮನವಿ
ಶಿವಮೊಗ್ಗ (shivamogga), ಮಾ. 1: ಕಣ್ಮರೆಯಾಗಿರುವ ವ್ಯಕ್ತಿಯೋರ್ವರ ಪತ್ತೆಗೆ ಸಹಕರಿಸುವಂತೆ, ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮಾರ್ಚ್ 1 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಭದ್ರಾವತಿ ಖಾಜಿ ಮೊಹಲ್ಲಾದ ನಿವಾಸಿ ಸಿರಾಜ್ (40) ನಾಪತ್ತೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಸಿರಾಜ್ ಅವರು ಲಾರಿಯೊಂದರಲ್ಲಿ ಕ್ಲೀನರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಇತ್ತೀಚೆಗೆ ಸದರಿ ಲಾರಿಯಲ್ಲಿ ಚಾಲಕನೊಂದಿಗೆ ಅವರು ಆಂಧ್ರಪ್ರದೇಶಕ್ಕೆ ತೆರಳಿದ್ದರು. ಫೆ. 15 ರ ಸಂಜೆ 5 ಗಂಟೆ ಸುಮಾರಿಗೆ, ಸಿರಾಜ್ ಅವರು ಕಣ್ಮರೆಯಾಗಿದ್ದಾರೆ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ.
ಕಾಣೆಯಾದ ಸಿರಾಜ್ ಅವರು ಸಾಧಾರಣ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ ಹೊಂದಿದ್ದಾರೆ. ಸುಮಾರು 5.6 ಅಡಿ ಎತ್ತರವಿದ್ದಾರೆ. ನಾಪತ್ತೆಯಾದ ಸಂದರ್ಭದಲ್ಲಿ ಪ್ಯಾಂಟ್, ಶರ್ಟ್ ಧರಿಸಿರುತ್ತಾರೆ.
ಇವರ ಸುಳಿವು ಪತ್ತೆಯಾದಲ್ಲಿ ಸಮೀಪದ ಪೊಲೀಸ್ ಠಾಣೆಗೆ ನೀಡುವಂತೆ, ಸಾರ್ವಜನಿಕರಿಗೆ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Shimoga, March 1: The Bhadravati old town police station has appealed to the public to help find a missing person. A press release was issued on March 1 in this regard. Siraj (40), a resident of Bhadravati Qazi Mohalla, has been identified as the missing person.