
shimoga | ಶಿವಮೊಗ್ಗ : ಶಾಸಕ ಡಿ ಎಸ್ ಅರುಣ್ ಪ್ರಯತ್ನದಿಂದ ಬಗೆಹರಿದ ಸಮಸ್ಯೆ!
ಶಿವಮೊಗ್ಗ (shivamogga), ಮಾ. 5: ಶಿವಮೊಗ್ಗ ತಾಲೂಕು ಹೊಳಲೂರು ಹೋಬಳಿ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತ್ತೋಡು ಗ್ರಾಮದ ಕೆಲ ನಿವಾಸಿಗಳು, ತಮ್ಮ ಸ್ವತ್ತುಗಳಿಗೆ ಸಂಬಂಧಿಸಿದಂತೆ ಎದುರಿಸುತ್ತಿದ್ದ ಆಡಳಿತಾತ್ಮಕ ಗೊಂದಲವನ್ನು ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಅವರು ಪರಿಹರಿಸಿ ಕೊಟ್ಟಿದ್ದಾರೆ!
ಮತ್ತೋಡು ಗ್ರಾಮದ ಒಟ್ಟು 84 ಸ್ವತ್ತುಗಳು, ಈ ಹಿಂದೆ ಅಬ್ಬಲಗೆರೆ ಗ್ರಾಮಕ್ಕೆ ಸೇರ್ಪಡೆಯಾಗಿದ್ದವು. ಇದರಿಂದ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಇ-ಸ್ವತ್ತು ದಾಖಲೆ ಪಡೆಯಲು ಸದರಿ ಸ್ಥಿರಾಸ್ತಿ ಮಾಲೀಕರಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ನಾನಾ ಸಂಕಷ್ಟು ಎದುರಿಸುವಂತಾಗಿತ್ತು.
ಸದರಿ 84 ಸ್ವತ್ತುಗಳನ್ನು, ಅಬ್ಬಲಗೆರೆ ಗ್ರಾಮದಿಂದ ಮತ್ತೊಡು ಗ್ರಾಮಕ್ಕೆ ವರ್ಗಾವಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಬದಲಾವಣೆಯಾಗಿರಲಿಲ್ಲ. ಈ ನಡುವೆ ಸದರಿ ವಿಷಯದ ಬಗ್ಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಅವರ ಗಮನಕ್ಕೆ ಕೆಲ ಸ್ವತ್ತು ಮಾಲೀಕರು ತಂದಿದ್ದರು.
ಡಿ ಎಸ್ ಅರುಣ್ ಅವರು ಸರ್ಕಾರದ ಹಂತದ ಸಂಬಂಧಿಸಿದ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಅತ್ಯಂತ ಕಡಿಮೆ ಸಮಯದಲ್ಲಿಸಮಸ್ಯೆ ಪರಿಹರಿಸಿ ಕೊಟ್ಟಿದ್ದಾರೆ. ಸದರಿ 84 ಸ್ವತ್ತುಗಳನ್ನು ಅಬ್ಬಲಗೆರೆ ಗ್ರಾಮದಿಂದ ಮತ್ತೋಡು ಗ್ರಾಮಕ್ಕೆ ವರ್ಗಾವಣೆ ಮಾಡಿಸಿಕೊಟ್ಟಿದ್ದಾರೆ.
ದಾಖಲೆ ವಿತರಣೆ : ಈ ಕುರಿತಂತೆ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಗ್ರೇಡ್ – 1 ಕಾರ್ಯದರ್ಶಿ ಶಿವಾನಾಯ್ಕ್ ಅವರು ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ‘ಮತ್ತೋಡು ಗ್ರಾಮದ ಸದರಿ ಸ್ವತ್ತುಗಳ ಮಾಲೀಕರಿಗೆ ಇ – ಸ್ವತ್ತು ವಿತರಣೆ ಮಾಡಲಾಗುತ್ತಿದೆ. ಆಡಳಿತಾತ್ಮಕ ಗೊಂದಲ ಪರಿಹಾರವಾಗಿದೆ’ ಎಂದು ತಿಳಿಸಿದ್ದಾರೆ.
Shimoga, March 5: Legislative Council MLA DS Arun has resolved the administrative confusion faced by some residents of Mattodu village under Abbalagere Gram Panchayat of Shimoga taluk regarding their properties!
A total of 84 properties of Mattodu village, which were earlier included in Abbalagere village. Due to this, the owner of the said immovable property was not able to get the e-property record at the gram panchayat office. Due to this, many problems were faced.