Shikaripur: Selling marijuana - Four youths arrested! shikaripur | ಶಿಕಾರಿಪುರ : ಗಾಂಜಾ ಮಾರಾಟ - ನಾಲ್ವರು ಯುವಕರು ಅರೆಸ್ಟ್!

shikaripur | ಶಿಕಾರಿಪುರ : ಗಾಂಜಾ ಮಾರಾಟ – ನಾಲ್ವರು ಯುವಕರು ಅರೆಸ್ಟ್!

ಶಿಕಾರಿಪುರ (shikaripura), ಮಾ. 26: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ನಾಲ್ವರು ಯುವಕರನ್ನು ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ ತಂಡ ಬಂಧಿಸಿದ ಘಟನೆ, ಮಾರ್ಚ್ 24 ರಂದು ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ.

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ, ಕೆಸರಗಟ್ಟಿ ಮೀಸಲು ಅರಣ್ಯ ಪ್ರದೇಶದ ಸೇತುವೆ ಸಮೀಪದ ಸಾರ್ವಜನಿಕ ಸ್ಥಳದಲ್ಲಿ, ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತಂತೆ ಲಭ್ಯವಾದ ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಶಿಕಾರಿಪುರ ತಾಲೂಕು ಮಲ್ಲಾಪುರ ಗ್ರಾಮದ ನಿವಾಸಿಗಳಾದ ಮೊಹಮ್ಮದ್ ಮುಸೇಬ್ (23), ಹಜರತ್ ಉಸ್ಮಾನ್ (26) ಶಿವಮೊಗ್ಗದ ಅಣ್ಣಾ ನಗರ 7 ನೇ ಕ್ರಾಸ್ ನಿವಾಸಿ ಸಲ್ಮಾನ್ ಇ (28) ಹಾಗೂ ಶಿಕಾರಿಪುರ ಪಟ್ಟಣದ ಜಟ್’ಪಟ್ ನಗರದ ನಿವಾಸಿದ ಮೊಹಮ್ಮದ್ ಕೈಫ್ (21) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಬಂಧಿತರಿಂದ 70 ಸಾವಿರ ರೂ. ಮೌಲ್ಯದ 2 ಕೆಜಿ 52 ಗ್ರಾಂ ತೂಕದ ಒಣ ಗಾಂಜಾ, ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಡಿಜೈರ್ ಕಾರು, ಹೊಂಡಾ ಶೈನ್ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಕೃಷ್ಣಮೂರ್ತಿ ಕೆ ನೇತೃತ್ವದ ಪೊಲೀಸ್ ತಂಡ ಸದರಿ ಕಾರ್ಯಾಚರಣೆ ನಡೆಸಿದೆ ಎಂದು ಮಾ. 26 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸದರಿ ಪೊಲೀಸ್ ತಂಡದ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಶ್ಲಾಘಿಸಿದ್ದಾರೆ.

Shikaripura, Mar. 26: An incident took place on March 24 in Shikaripura taluk where four people were arrested by the Shivamogga CEN Police Station team on charges of selling ganja in a public place.

The accused were selling ganja at a public place near the bridge in the Kesaragatti Reserve Forest Area under the jurisdiction of Shikaripura Rural Police Station. The police conducted a raid based on the information received in this regard.

A police team led by Shivamogga CEN Police Station Inspector Krishnamurthy K conducted the operation, according to a statement issued by the police department on March 26. shimoga District SP have praised the successful operation of the police team.

shimoga | Bhadravati - Channagiri - Chikkajajur new railway line: Railway Board approves final survey! shimoga | ಭದ್ರಾವತಿ - ಚನ್ನಗಿರಿ - ಚಿಕ್ಕಜಾಜೂರು ನೂತನ ರೈಲು ಮಾರ್ಗ : ಅಂತಿಮ ಸಮೀಕ್ಷೆಗೆ ರೈಲ್ವೆ ಮಂಡಳಿ ಒಪ್ಪಿಗೆ! Previous post shimoga | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ರೈಲ್ವೆ ಹಳಿಗಳ ಬಳಿ ಮಹಿಳೆ, ಇಬ್ಬರು ಯುವಕರ ಶವ ಪತ್ತೆ!
accident news | Head-on collision between bus and tanker lorry: 15 people injured! accident news | ಬಸ್ – ಟ್ಯಾಂಕರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ : 15 ಜನರಿಗೆ ಗಾಯ! Next post accident news | ಬಸ್ – ಟ್ಯಾಂಕರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ : 15 ಜನರಿಗೆ ಗಾಯ!