accident news | Head-on collision between bus and tanker lorry: 15 people injured! accident news | ಬಸ್ – ಟ್ಯಾಂಕರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ : 15 ಜನರಿಗೆ ಗಾಯ!

accident news | ಬಸ್ – ಟ್ಯಾಂಕರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ : 15 ಜನರಿಗೆ ಗಾಯ!

ಹೊಸನಗರ (hosanagara), ಮಾ. 26: ಕೆಎಸ್ಆರ್’ಟಿಸಿ ಬಸ್ ಹಾಗೂ ಟ್ಯಾಂಕರ್ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸುಮಾರು 15 ಪ್ರಯಾಣಿಕರು ಗಾಯಗೊಂಡ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮಾಸ್ತಿಕಟ್ಟೆ ಬಳಿಯ ಹುಲಿಕಲ್ ಘಾಟ್ ನಲ್ಲಿ ಮಾರ್ಚ್ 25 ರ ರಾತ್ರಿ ಸಂಭಸಿದೆ.

ಅಪಘಾತದಲ್ಲಿ 8 ಜನರಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗ ದಾಖಲಿಸಲಾಗಿದೆ. ಉಳಿದಂತೆ 7 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಕೆಎಸ್ಆರ್’ಟಿಸಿ ಬಸ್ ಮಂಗಳೂರಿನಿಂದ ಹೊಸಪೇಟೆಗೆ ಕಡೆಗೆ ಹಾಗೂ ಟ್ಯಾಂಕರ್ ಲಾರಿ ಸ್ವಾಮಿಹಳ್ಳಿಯಿಂದ ಮಂಗಳೂರಿನ ಕಡೆಗೆ ತೆರಳುತ್ತಿದ್ದ ವೇಳೆ, ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಟ್ಯಾಂಕರ್ ಲಾರಿಯಲ್ಲಿದ್ದ ಕ್ಲೀನರ್ ಗೂ ಗಾಯವಾಗಿದೆ. ಉಳಿದ ಗಾಯಾಳುಗಳೆಲ್ಲರೂ ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರಾಗಿದ್ದಾರೆ. ಟ್ಯಾಂಕರ್ ಲಾರಿ ಚಾಲಕನ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆರವಿನಹಸ್ತ : ಅಪಘಾತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬಸ್ ಪ್ರಯಾಣಿಕರಿಗೆ ಕಾಂಗ್ರೆಸ್ ಮುಖಂಡ ಆರ್ ಎಂ ಮಂಜುನಾಥ ಗೌಡ ಮಾರ್ಗದರ್ಶನದಲ್ಲಿ ಸ್ಥಳೀಯ ಕೊಡಚಾದ್ರಿ ಯುವಕರ ಪಡೆ ಸದಸ್ಯರು ನೆರವಿಹಸ್ತ ಚಾಚಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಊಟೋಪಚಾರದ ವ್ಯವಸ್ಥೆ ಕಲ್ಪಿಸಿದ್ದಾರೆ.

Hosanagar, Mar 26: Around 15 passengers were injured in a head-on collision between a KSRTC bus and a tanker lorry on the night of March 25 at Hulikal Ghat near Mastikatte in Hosanagar taluk of Shivamogga district.

The accident occurred when the KSRTC bus was heading from Mangalore to Hospet and the tanker lorry was heading from Swamihalli to Mangalore. A case has been registered at the nagara police station.

Shikaripur: Selling marijuana - Four youths arrested! shikaripur | ಶಿಕಾರಿಪುರ : ಗಾಂಜಾ ಮಾರಾಟ - ನಾಲ್ವರು ಯುವಕರು ಅರೆಸ್ಟ್! Previous post shikaripur | ಶಿಕಾರಿಪುರ : ಗಾಂಜಾ ಮಾರಾಟ – ನಾಲ್ವರು ಯುವಕರು ಅರೆಸ್ಟ್!
Shivamogga: Power outage in various places on July 20 th! ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga |ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ಮಾ. 28 ರಂದು ವಿದ್ಯುತ್ ವ್ಯತ್ಯಯ