shimoga | Shivamogga: What is the minister's instruction? What is the reason for the MLC and Commissioner's visit to Bommanakkatte? shimoga | ಶಿವಮೊಗ್ಗ : ಸಚಿವರ ಸೂಚನೆಯೇನು? ಬೊಮ್ಮನಕಟ್ಟೆಗೆ ಎಂಎಲ್ಸಿ ಆಯುಕ್ತರ ಭೇಟಿಗೆ ಕಾರಣವೇನು?

shimoga | ಶಿವಮೊಗ್ಗ : ಸಚಿವರ ಸೂಚನೆಯೇನು? ಬೊಮ್ಮನಕಟ್ಟೆಗೆ ಎಂಎಲ್ಸಿ, ಆಯುಕ್ತರ ಭೇಟಿಗೆ ಕಾರಣವೇನು?

ಶಿವಮೊಗ್ಗ (shivamogga), ಮೇ 13: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 1 ನೇ ವಾರ್ಡ್ ಬೊಮ್ಮನಕಟ್ಟೆ ಬಡಾವಣೆಯಲ್ಲಿನ ಸ್ಮಶಾನಕ್ಕೆ, ಮೇ 13 ರಂದು ವಿಧಾನ ಪರಿಷತ್ ಶಾಸಕಿ ಬಲ್ಕೀಷ್ ಬಾನು ಹಾಗೂ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಭೇಟಿ ನೀಡಿ ಪರಿಶೀಲಿಸಿದರು.

ಈ ಕುರಿತಂತೆ ಎಸ್ ಬಂಗಾರಪ್ಪ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಬೊಮ್ಮನಕಟ್ಟೆ ಮಾಲತೇಶ್ ಅವರು ಮಾತನಾಡಿ, ‘ಬೊಮ್ಮನಕಟ್ಟೆಯಲ್ಲಿರುವ ಸ್ಮಶಾನವು ಕೆರೆಯ ಸಮೀಪವಿದ್ದು, ಅವ್ಯವಸ್ಥೆಯ ಆಗರವಾಗಿದೆ,. ಯಾವುದೇ ಮೂಲಸೌಕರ್ಯಗಳ ವ್ಯವಸ್ಥೆಯಿಲ್ಲ. ಮಳೆಗಾಲದ ವೇಳೆ ಶವ ಸಂಸ್ಕಾರ ಮಾಡಲು ಪರದಾಡುವಂತಹ ದುಃಸ್ಥಿತಿಯಿದೆ. ಸ್ಮಶಾನಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಕಳೆದ ಕೆಲ ತಿಂಗಳುಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರಿಗೆ ಮನವಿ ಮಾಡಲಾಗಿತ್ತು.

ಈ ಕುರಿತಂತೆ ಪಾಲಿಕೆ ಆಡಳಿತಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸಚಿವರು ಸೂಚಿಸಿದ್ದರು. ಇತ್ತೀಚೆಗೆ ಬಲ್ಕೀಷ್ ಬಾನು ಅವರಿಗೂ ಸಂಘದಿಂದ ಮನವಿ ಮಾಡಲಾಗಿದ್ದು, ಅವರು ಸಚಿವರ ಜೊತೆ ಸಮಾಲೋಚಿಸಿದ್ದರು. ಸಚಿವರ ಸೂಚನೆಯಂತೆ ಮಂಗಳವಾರ ಬೊಮ್ಮನಕಟ್ಟೆ ಸ್ಮಶಾನಕ್ಕೆ ಪಾಲಿಕೆ ಆಯುಕ್ತರ ಜೊತೆ ಭೇಟಿ ನೀಡಿ ಪರಿಶೀಲಿಸಿದರು’ ಎಂದು ಮಾಹಿತಿ ನೀಡಿದ್ದಾರೆ.

‘ಕಾಲಮಿತಿಯೊಳಗೆ ಸ್ಮಶಾನಕ್ಕೆ ಅಗತ್ಯವಿರುವ ಸೌಲಭ್ಯ ಕಲ್ಪಸಲು ಕ್ರಮಕೈಗೊಳ್ಳುವಂತೆ ಎಂ.ಎಲ್.ಸಿ ಅವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಆಯುಕ್ತರು ಕೂಡ ಸ್ಮಶಾನ ಅಭಿವೃದ್ದಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ’ ಎಂದು ಬೊಮ್ಮನಕಟ್ಟೆ ಮಾಲತೇಶ್ ಅವರು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯರಾದ ವಸಂತ್, ಶ್ರೀಕಾಂತ್, ಮೋಹನ್, ಅನಂತ, ಮಹೇಶ್, ಮಲ್ಲಿಕಾರ್ಜುನ ನಾಯಕ್, ಸುನೀತಾ, ಶೃತಿ, ಜ್ಯೋತಿ, ಮೈಲಾರಿ, ಸಂತೋಷ, ಅವಿನಾಶ್, ಬಸಪ್ಪ, ಗಣೇಶಪ್ಪ, ಪರಮೇಶಪ್ಪ, ಯುವರಾಜ, ಪ್ರಕಾಶ್ ಯು ಕೆ, ವಜೀರ್ ಬೇಗ್ ಮೊದಲಾದವರಿದ್ದರು.  

Shivamogga, May 13: On May 13, Legislative Council MLA Balkish Banu and Municipal Commissioner Kavita Yogappanavar visited and inspected the cemetery in Bommanakatte Layout, Ward 1, under the jurisdiction of Shivamogga Municipal Corporation.

shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 13 ರ ತರಕಾರಿ ಬೆಲೆಗಳ ವಿವರ
Arrival of monsoon: Heavy rains in the Western Ghats! ಮುಂಗಾರು ಆಗಮನ : ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ! Next post shimoga | ಶಿವಮೊಗ್ಗ ನಗರದ ವಿವಿಧೆಡೆ ಧಾರಾಕಾರ ಮಳೆ!