shimoga | Shimoga: The water board has freed the menace of potholes! shimoga | ಶಿವಮೊಗ್ಗ : ಗುಂಡಿ ಗಂಡಾಂತರಕ್ಕೆ ಮುಕ್ತಿ ಕಲ್ಪಿಸಿದ ಜಲ ಮಂಡಳಿ!

shimoga | ಶಿವಮೊಗ್ಗ : ಗುಂಡಿ ಗಂಡಾಂತರಕ್ಕೆ ಮುಕ್ತಿ ಕಲ್ಪಿಸಿದ ಜಲ ಮಂಡಳಿ!

ಶಿವಮೊಗ್ಗ (shivamogga), ಜೂ. 7: ಶಿವಮೊಗ್ಗ ಮಹಾನಗರ ಪಾಲಿಕೆ 1 ನೇ ವಾರ್ಡ್ ಸೋಮಿನಕೊಪ್ಪ ಬಡಾವಣೆ ರಾಜ್ಯ ಹೆದ್ದಾರಿ ಸಮೀಪ, ಕುಡಿಯುವ ನೀರಿನ ಪೈಪ್ ಹೊಡೆದು ಉಂಟಾಗಿದ್ದ ಅವ್ಯವಸ್ಥೆಯನ್ನು ಕೊನೆಗೂ ಜಲ ಮಂಡಳಿ ಪರಿಹರಿಸಿದೆ!

ಕಳೆದ ಕೆಲ ತಿಂಗಳುಗಳಿಂದ, ಪೈಪ್ ಹೊಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಹಾಗೆಯೇ ರಸ್ತೆಯಲ್ಲಿಯೇ ಭಾರೀ ಗಾತ್ರದ ಗುಂಡಿ ಉಂಟಾಗಿತ್ತು. ಇದು ದ್ವಿಚಕ್ರ ವಾಹನ ಸವಾರರ ಪಾಲಿಗೆ ಮಾರಣಾಂತಿಕವಾಗಿ ಪರಿಣಮಿಸಿತ್ತು.

ಆದರೆ ಅವ್ಯವಸ್ಥೆ ಸರಿಪಡಿಸಲು ಸಂಬಂಧಿಸಿದವರು ಗಮನಹರಿಸಿರಲಿಲ್ಲ. ಸ್ಥಳೀಯ ನಾಗರೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತಂತೆ ‘ಉದಯ ಸಾಕ್ಷಿ’ www.udayasaakshi.com ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ನಲ್ಲಿ 1/6/2025 ರಂದು  ಸುದ್ದಿ ಪ್ರಕಟವಾಗಿತ್ತು.

ವರದಿ ಪ್ರಕಟಗೊಂಡ ಬೆನ್ನಲ್ಲೆ, ಜಲ ಮಂಡಳಿ ಆಡಳಿತ ಹೊಡೆದು ಹೋಗಿದ್ದ ಪೈಪ್ ಲೈನ್ ದುರಸ್ತಿಗೊಳಿಸಿದೆ. ವ್ಯರ್ಥವಾಗಿ ಹರಿಯುತ್ತಿದ್ದ ನೀರಿನ ಪೋಲು ತಡೆಗಟ್ಟಿದೆ.

Shivamogga, June 5: The water board has finally resolved the mess caused by a broken drinking water pipe near the state highway in Sominakoppa Layout, Ward 1 of the Shivamogga Municipal Corporation!

Inclusion in Shivamogga Municipal Corporation : What was the decision taken in the special meeting of Abbalagere Gram Panchayat? ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಅಬ್ಬಲಗೆರೆ ಗ್ರಾಪಂ ವಿಶೇಷ ಸಭೆಯಲ್ಲಿ ಕೈಗೊಂಡ ನಿರ್ಣಯವೇನು? Previous post shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಅಬ್ಬಲಗೆರೆ ಗ್ರಾಪಂ ವಿಶೇಷ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?
Caste abuse, assault case : Bhadravati man sentenced to 4 years rigorous imprisonment! ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ! Next post bhadravati | ಭದ್ರಾವತಿ : ಹೊಳೆಹೊನ್ನೂರು ಭದ್ರಾಪುರದಲ್ಲಿ ಕೊಲೆ ಪ್ರಕರಣ – 7 ಜನರಿಗೆ ಜೀವಾವಧಿ ಶಿಕ್ಷೆ!