
shimoga | Dharmasthala case | ಶಿವಮೊಗ್ಗ | ಧರ್ಮಸ್ಥಳ ಪ್ರಕರಣ – ವಿಶೇಷ ತನಿಖಾ ತಂಡ ರಚನೆಗೆ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ (shivamogga), ಜುಲೈ 17: ಧರ್ಮಸ್ಥಳ ವ್ಯಾಪ್ತಿಯಲ್ಲಿನ ನಿಗೂಢ ಸಾ**ವಿನ ಪ್ರಕರಣಗಳ ಕುರಿತಂತೆ, ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಸಂಘಟನೆ ಆಗ್ರಹಿಸಿದೆ.
ಈ ಸಂಬಂಧ ಜುಲೈ 17 ರಂದು ಸಂಘಟನೆಯು ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿತು.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಜನರ ಹ**ಕಾಂಡ ಪ್ರಕರಣವು, ದೇಶ ಕಂಡ ಅತ್ಯಂತ ಗಂಭೀರ ಪ್ರಕರಣವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕಾದ ರಾಜ್ಯ ಸರ್ಕಾರ, ಯಾವುದೇ ಕ್ರಮಕೈಗೊಳ್ಳದೆ ಮೌನವಾಗಿರುವುದು ಖಂಡನಾರ್ಹವಾದುದಾಗಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ಕೆಲ ದಶಕಗಳ ಅವಧಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೃ**ತದೇ**ಹಗಳನ್ನು ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದೆನೆ ಎಂದು ಅನಾಮಧೇಯ ವ್ಯಕ್ತಿಯೋರ್ವ ಸ್ವಯಂಪ್ರೇರಿತ ದೂರು ದಾಖಲಿಸಿ ಸ್ವಯಂ ಹೇಳಿಕೆ ದಾಖಲಿಸಿದ್ದಾನೆ.
ಆದಾಗ್ಯೂ ಕೂಡ ರಾಜ್ಯ ಸರ್ಕಾರ ತನಿಖೆ ನಡೆಸಲು ಮೀನಮೇಷ ಎಣಿಸುತ್ತಿದೆ. ಸರ್ಕಾರದ ಈ ನಡೆಯು ಸಾಕಷ್ಟು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಕೂಡಲೇ ಧರ್ಮಸ್ಥಳದ #Dharmasthala, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಬೇಕು. ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮೊಹಮ್ಮದ್ ಜೀಲಾನ್ ಖಾನ್, ಉಪಾಧ್ಯಕ್ಷ ಸಲೀಂ ಖಾನ್, ಸದಸ್ಯರಾದ ಇಸಾಕ್ ಅಹಮದ್, ಮನ್ಸೂರ್ ಖಾನ್, ಜಮೀರ್, ವಜೀರ್ ಅಹ್ಮದ್ ಸೇರಿದಂತೆ ಮೊದಲಾದವರಿದ್ದರು.
Shivamogga, July 17: The Social Democratic Party of India (SDPI) has demanded the formation of a special investigation team into the death cases in Dharmasthala area. #dharmasthala, #dharmasthalcase, #ಸೌಜನ್ಯ, #ಧರ್ಮಸ್ಥಳ, #sowjanyacase, #sowjanya, #dharmasthalanews, #ಸೌಜನ್ಯಪ್ರಕರಣ, #ಸೌಜನ್ಯ,