Shimoga : Gram panchayat secretary caught with bribe money! ಶಿವಮೊಗ್ಗ : ಲಂಚದ ಹಣದ ಸಮೇತ ಸಿಕ್ಕಿಬಿದ್ದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ!

shimoga lokayukta raid | ಶಿವಮೊಗ್ಗ : ಲಂಚದ ಹಣದ ಸಮೇತ ಸಿಕ್ಕಿಬಿದ್ದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ!

ಶಿವಮೊಗ್ಗ (shivamogga), ಜು. 17: ಲಂಚ ಸ್ವೀಕರಿಸುವ ವೇಳೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯೋರ್ವರನ್ನು, ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದ ಘಟನೆ ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಜುಲೈ 17 ರಂದು ನಡೆದಿದೆ.

ಕುಮಾರನಾಯ್ಕ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಗ್ರಾಪಂ ಕಾರ್ಯದರ್ಶಿ ಎಂದು ಗುರುತಿಸಲಾಗಿದೆ. ಅವರ ವಿರುದ್ದ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ : ಶ್ರೀರಾಂಪುರ ಗ್ರಾಮದ 1 ನೇ ಕ್ರಾಸ್ ನಿವಾಸಿ ವಿನೋದ ಎಂಬುವರು, ತಾಯಿಯ ಹೆಸರಿನಲ್ಲಿರುವ ನಿವೇಶನದಲ್ಲಿ ಆರ್’ಸಿಸಿ ಮನೆ ಕಟ್ಟಿದ್ದರು. ಇದಕ್ಕೆ ಇ – ಸ್ವತ್ತು ಮಾಡಿಕೊಡುವಂತೆ ಗ್ರಾಪಂಗೆ ಅವರ ತಾಯಿ ಮನವಿ ಸಲ್ಲಿಸಿದ್ದರು.

ಆದರೆ ಇ – ಸ್ವತ್ತು ಮಾಡಿಕೊಟ್ಟಿರಲಿಲ್ಲ. ಈ ನಡುವೆ ಕಾರ್ಯದರ್ಶಿ ಕುಮಾರನಾಯ್ಕ್ ಅವರು 3000 ರೂ. ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ಕುರಿತಂತೆ ವಿನೋದ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇದರ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜುಲೈ 17 ರ ಮಧ್ಯಾಹ್ನ ಗ್ರಾಪಂ ಕಚೇರಿ ಕೊಠಡಿಯಲ್ಲಿ ಕಾರ್ಯದರ್ಶಿಯು 3 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Shimoga, Ju. 17: An incident where a village panchayat secretary was arrested by the Lokayukta police while accepting a bribe took place on July 17 at Muddinakoppa panchayat office in Shimoga taluk.

Shimoga : Dharamsthala case – protest demanding formation of special investigation team ಶಿವಮೊಗ್ಗ : ಧರ್ಮಸ್ಥಳ ಪ್ರಕರಣ – ವಿಶೇಷ ತನಿಖಾ ತಂಡ ರಚನೆಗೆ ಆಗ್ರಹಿಸಿ ಪ್ರತಿಭಟನೆ Previous post shimoga | Dharmasthala case | ಶಿವಮೊಗ್ಗ | ಧರ್ಮಸ್ಥಳ ಪ್ರಕರಣ – ವಿಶೇಷ ತನಿಖಾ ತಂಡ ರಚನೆಗೆ ಆಗ್ರಹಿಸಿ ಪ್ರತಿಭಟನೆ
shimoga APMC vegetable prices | Details of vegetable prices for September 26 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ