Special train service between Yeshwantpur and Thalaguppa on the occasion of Dussehra festival ದಸರಾ ಹಬ್ಬದ ಪ್ರಯುಕ್ತ ಯಶವಂತಪುರ –ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

shimoga news | ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಣೆ!

ಶಿವಮೊಗ್ಗ (shivamogga), ಸೆಪ್ಟೆಂಬರ್ 3: ನೈಋತ್ಯ ರೈಲ್ವೆಯು ನವೆಂಬರ್ 2, 2025 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16221 ತಾಳಗುಪ್ಪ– ಮೈಸೂರು ಕುವೆಂಪು ಡೈಲಿ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಿಸಲು ನಿರ್ಧರಿಸಿದೆ.

ಹೊಸ ವೇಳಾಪಟ್ಟಿಯ ಪ್ರಕಾರ, ಸದರಿ ರೈಲು ತಾಳಗುಪ್ಪದಿಂದ ಬೆಳಿಗ್ಗೆ 5.50 ಕ್ಕೆ ಹೊರಡಲಿದೆ. ಪ್ರಸ್ತುತ ನಿರ್ಗಮನ ಸಮಯವಾದ ಬೆಳಿಗ್ಗೆ 6.15 ರಿಂದ 25 ನಿಮಿಷಗಳಷ್ಟು ಮುಂಚಿತವಾಗಿ ಈ ರೈಲು ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಬದಲಾವಣೆಯಿಂದಾಗಿ, ರೈಲು ಸಂಖ್ಯೆ 16227 ಮೈಸೂರು – ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ ರೈಲು ತಾಳಗುಪ್ಪ ತಲುಪುವ ಸಮಯವನ್ನೂ ಸಹ ಅದೇ ದಿನಾಂಕದಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. ಈ ರೈಲು ಬೆಳಿಗ್ಗೆ 7.15 ರ ಬದಲಿಗೆ 7.50 ಕ್ಕೆ ತಾಳಗುಪ್ಪ ತಲುಪಲಿದೆ.

ರೈಲು ಸಂಖ್ಯೆ 16221ರ ಪರಿಷ್ಕೃತ ವೇಳಾಪಟ್ಟಿ ವಿವರಗಳು ಹೀಗಿವೆ: ಈ ರೈಲು ತಾಳಗುಪ್ಪದಿಂದ ಬೆಳಿಗ್ಗೆ 5.50ಕ್ಕೆ ಹೊರಡಲಿದ್ದು, ವಿವಿಧ ನಿಲ್ದಾಣಗಳಿಗೆ ಆಗಮನ ಮತ್ತು ನಿರ್ಗಮನ ಸಮಯ ಈ ಕೆಳಗಿನಂತಿವೆ:

ಸಾಗರ ಜಂಬಗಾರು-ಬೆಳಿಗ್ಗೆ 6.08/6.10, ಅಡ್ಡೇರಿ-ಬೆಳಿಗ್ಗೆ 6.26/6.27, ಆನಂದಪುರಂ-ಬೆಳಿಗ್ಗೆ 6.40/6.42, ಕೆಂಚನಾಲ ಹಾಲ್ಟ್-ಬೆಳಿಗ್ಗೆ 6.54/6.55, ಅರಸಾಳು-ಬೆಳಿಗ್ಗೆ 7.00/7.01, ಕುಂಸಿ-ಬೆಳಿಗ್ಗೆ 7.17/7.18, ಹಾರನಹಳ್ಳಿ-ಬೆಳಿಗ್ಗೆ 7.25/7.26, ಕೊನಗವಳ್ಳಿ-ಬೆಳಿಗ್ಗೆ 7.31/7.32, ಶಿವಮೊಗ್ಗ ಟೌನ್-ಬೆಳಿಗ್ಗೆ 7.50/7.55, ಶಿವಮೊಗ್ಗ-ಬೆಳಿಗ್ಗೆ 8.01/8.02,

ಭದ್ರಾವತಿ-ಬೆಳಿಗ್ಗೆ 8.18/8.20, ಮಸರಹಳ್ಳಿ-ಬೆಳಿಗ್ಗೆ 8.26/8.27, ತರೀಕೆರೆ-ಬೆಳಿಗ್ಗೆ 8.42/8.43, ಕೋರನಹಳ್ಳಿ-ಬೆಳಿಗ್ಗೆ 8.53/8.54, ಶಿವಪುರ-ಬೆಳಿಗ್ಗೆ 9.01/9.02, ಬೀರೂರು-ಬೆಳಿಗ್ಗೆ 9.33/9.35, ಕಡೂರು-ಬೆಳಿಗ್ಗೆ 9.45/9.47, ಬಳ್ಳೇಕೆರೆ ಹಾಲ್ಟ್-ಬೆಳಿಗ್ಗೆ 9.56/9.57, ದೇವನೂರು-ಬೆಳಿಗ್ಗೆ 10.08/10.09,

ಬಾಣಾವರ-ಬೆಳಿಗ್ಗೆ 10.19/10.20, ಅರಸೀಕೆರೆ-ಬೆಳಿಗ್ಗೆ 10.40/10.50, ಹಬ್ಬನಘಟ್ಟ-ಬೆಳಿಗ್ಗೆ 11.05/11.06, ಬಾಗೇಶಪುರ-ಬೆಳಿಗ್ಗೆ 11.23/11.24, ಹಾಸನ-ಬೆಳಿಗ್ಗೆ 11.45/11.47, ಮಾವಿನಕೆರೆ-ಮಧ್ಯಾಹ್ನ 12.09/12.10, ಹೊಳೆನರಸೀಪುರ-ಮಧ್ಯಾಹ್ನ 12.25/12.27,

ಮಂದಗೆರೆ-ಮಧ್ಯಾಹ್ನ 12.55/12.57, ಬೀರಹಳ್ಳಿ-ಮಧ್ಯಾಹ್ನ 1.07/1.08, ಅಕ್ಕಿಹೆಬ್ಬಾಳು-ಮಧ್ಯಾಹ್ನ 1.15/1.16, ಹೊಸ ಅಗ್ರಹಾರ-ಮಧ್ಯಾಹ್ನ 1.26/1.27, ಕೃಷ್ಣರಾಜನಗರ-ಮಧ್ಯಾಹ್ನ 1.50/1.52, ಸಾಗರಕಟ್ಟೆ-ಮಧ್ಯಾಹ್ನ 2.30/2.32, ಬೆಳಗುಳ-ಮಧ್ಯಾಹ್ನ 2.58/3.00, ಹಾಗೂ ಮೈಸೂರು ಜಂಕ್ಷನ್’ಗೆ ಪ್ರಸ್ತುತ ಆಗಮನ ಸಮಯವಾದ ಮಧ್ಯಾಹ್ನ 3.30ಕ್ಕೆ ತಲುಪಲಿದೆ.

Shivamogga, September 3: South Western Railway has decided to revise the schedule of train number 16221 Talaguppa – Mysore Kuvempu Daily Express train with effect from November 2, 2025. According to the new schedule, the train will depart from Talaguppa at 5.50 am, 25 minutes earlier than the current departure time of 6.15 am, the release said.

'No Shivamogga Corporation elections, no area revision..!': Will the CM and ministers take note? ‘ಶಿವಮೊಗ್ಗ ಪಾಲಿಕೆ ಚುನಾವಣೆಯೂ ಇಲ್ಲ, ವ್ಯಾಪ್ತಿ ಪರಿಷ್ಕರಣೆಯೂ ಇಲ್ಲ..!’ : ಗಮನಿಸುವರೆ ಸಿಎಂ, ಸಚಿವರು? Previous post shimoga palike news | ‘ಶಿವಮೊಗ್ಗ ಪಾಲಿಕೆ ಚುನಾವಣೆಯೂ ಇಲ್ಲ, ವ್ಯಾಪ್ತಿ ಪರಿಷ್ಕರಣೆಯೂ ಇಲ್ಲ..!’ : ಗಮನಿಸುವರೆ ಸಿಎಂ, ಸಚಿವರು?
After Bangalore – Mysore and Hubballi special treatment facilities will also be available to patients at the Government Meggan Hospital in Shivamogga! ಬೆಂಗಳೂರು ಮೈಸೂರು ಹುಬ್ಬಳ್ಳಿ ನಂತರ ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿಯೂ ರೋಗಿಗಳಿಗೆ ಲಭ್ಯವಾಗಲಿದೆ ವಿಶೇಷ ಚಿಕಿತ್ಸಾ ಸೌಲಭ್ಯ! Next post shimoga news | ಬೆಂಗಳೂರು, ಮೈಸೂರು, ಹುಬ್ಬಳ್ಳಿ ನಂತರ ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿಯೂ ರೋಗಿಗಳಿಗೆ ಲಭ್ಯವಾಗಲಿದೆ ವಿಶೇಷ ಚಿಕಿತ್ಸಾ ಸೌಲಭ್ಯ!