Shivamogga: Increased traffic congestion at Gopi Circle despite signal lights! ಶಿವಮೊಗ್ಗ : ಸಿಗ್ನಲ್ ಲೈಟ್ ನಡುವೆಯೂ ಗೋಪಿ ಸರ್ಕಲ್ ನಲ್ಲಿ ಹೆಚ್ಚಾದ ಟ್ರಾಫಿಕ್ ಕಿರಿಕಿರಿ!

shimoga traffic news | ಶಿವಮೊಗ್ಗ : ಸಿಗ್ನಲ್ ಲೈಟ್ ನಡುವೆಯೂ ಗೋಪಿ ಸರ್ಕಲ್ ನಲ್ಲಿ ಟ್ರಾಫಿಕ್ ಕಿರಿಕಿರಿ!

ಶಿವಮೊಗ್ಗ (shivamogga), ನವೆಂಬರ್ 6: ಶಿವಮೊಗ್ಗ ನಗರದ ಹೃದಯ ಭಾಗವಾದ ಗೋಪಿ ಸರ್ಕಲ್ (ಶೀನಪ್ಪ ಶೆಟ್ಟಿ ವೃತ್ತ) ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ, ಸುಗಮ ವಾಹನ ಸಂಚಾರಕ್ಕಾಗಿ ಮತ್ತೆ ಸಿಗ್ನಲ್ ಲೈಟ್ ಗಳ ಅಳವಡಿಕೆ ಮಾಡಲಾಗಿದೆ. ಕಳೆದ ಕೆಲ ತಿಂಗಳುಗಳಿಂದ ಸಿಗ್ನಲ್ ಲೈಟ್ ಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಆದರೆ ಸರ್ಕಲ್ ನಲ್ಲಿ ಟ್ರಾಫಿಕ್ ಕಿರಿಕಿರಿ ಮುಂದುವರೆದಿದ್ದು, ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ!

ಹಲವು ದಶಕಗಳ ಹಿಂದಿನಿಂದಲೂ ಸದರಿ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಮಾಡಲಾಗಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಸರ್ಕಲ್ ಅಭಿವೃದ್ದಿಗೊಳಿಸಿದ ವೇಳೆ, ಸಿಗ್ನಲ್ ಲೈಟ್ ತೆರವುಗೊಳಿಸಲಾಗಿತ್ತು. ಆದರೆ ಕಾಲಕ್ರಮೇಣ ವೃತ್ತದಲ್ಲಿ ಜನ – ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಹಾಗೂ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಮತ್ತೆ ಸಿಗ್ನಲ್ ಲೈಟ್ ಗಳ ಅಳವಡಿಕೆ ಮಾಡಲಾಗಿದೆ.

ತೊಂದರೆಯೇನು? : ಸದರಿ ವೃತ್ತದಿಂದ ಕಸ್ತೂರ ಬಾ ಕಾಲೇಜ್ ರಸ್ತೆಯತ್ತ ವಾಹನ ಚಾಲಕರು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಇದು ಟ್ರಾಫಿಕ್ ದಟ್ಟಣೆ ಸೃಷ್ಟಿಸುವುದರ ಜೊತೆಗೆ, ಭಾರೀ ಪ್ರಮಾಣದ ಕಿರಿಕಿರಿಗೆ ಎಡೆ ಮಾಡಿಕೊಡುತ್ತಿದೆ. ಜೊತೆಗೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಪಾದಚಾರಿಗಳು ವೃತ್ತದಲ್ಲಿ ಓಡಾಡುವುದೆ ದುಸ್ತರವಾಗಿದೆ ಎಂದು ಕೆಲ ವಾಹನ ಚಾಲಕರು ತಿಳಿಸುತ್ತಾರೆ.

ಹಾಗೆಯೇ ಜೆಪಿಎನ್ ರಸ್ತೆ ಬಳಿಯು ಅವ್ಯವಸ್ಥೆ ಎದುರಾಗುತ್ತಿದೆ. ಮೊದಲೇ ರಸ್ತೆ ಕಿರಿದಾಗಿದೆ. ಫುಟ್’ಪಾತ್ ಗಳು ಒತ್ತುವರಿಯಾಗಿದೆ. ಈ ನಡುವೆ ರಸ್ತೆ ನಡುವೆ ಬ್ಯಾರಿಕೇಡ್ ಹಾಕಲಾಗಿದ್ದು, ರಸ್ತೆಯು ಮತ್ತಷ್ಟು ಕಿರಿದಾಗುವಂತಾಗಿದೆ. ರೆಡ್ ಸಿಗ್ನಲ್ ಬಿದ್ದ ವೇಳೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಟ್ರಾಫಿಕ್ ದಟ್ಟಣೆ ಹೆಚ್ಚಾಗುತ್ತಿದೆ ಎಂದು ಕೆಲ ನಾಗರೀಕರು ಹೇಳುತ್ತಾರೆ.

ಮತ್ತೊಂದೆಡೆ, ಸದರಿ ವೃತ್ತಕ್ಕೆ ಹೊಂದಿಕೊಂಡಂತೆ ಆಟೋ ನಿಲ್ದಾಣಗಳಿವೆ. ಇನ್ನಾದರೂ ಗೋಪಿ ವೃತ್ತದಲ್ಲಿನ ಟ್ರಾಫಿಕ್ ಕಿರಿಕಿರಿಗೆ ಪರಿಹಾರ ಕಲ್ಪಿಸಲು ಟ್ರಾಫಿಕ್ ಪೊಲೀಸರು ಹಾಗೂ ಪಾಲಿಕೆ ಆಡಳಿತ ಅಗತ್ಯ ಪರಿಹಾರ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ.

*** ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಗಾಡಿಕೊಪ್ಪದ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಸದರಿ ಹೆದ್ದಾರಿಗೆ ಹೊಂದಿಕೊಂಡಂತೆ ಸರ್ಕಾರಿ ಶಾಲೆಗಳಿವೆ. ನೂರಾರು ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಶಾಲೆ ಸಮೀಪದ ಸರ್ಕಲ್ ವಿದ್ಯಾರ್ಥಿಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಹೆದ್ದಾರಿಯಲ್ಲಿ ಮಿತಿಮೀರಿದ ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ಇದರಿಂದ ಹೆದ್ದಾರಿ ದಾಟಿ ಶಾಲೆ ಹಾಗೂ ಮನೆಗೆ ತೆರಳಲು ವಿದ್ಯಾರ್ಥಿಗಳು ಸಂಕಷ್ಟ ಪಡುವಂತಾಗಿದೆ. ಜೀವ ಕೈಯಲ್ಲಿಡಿದು ರಸ್ತೆ ದಾಟುವಂತಹ ದುಃಸ್ಥಿತಿಯಿದೆ.

ಈಗಾಗಲೇ ಕೆಲ ವಿದ್ಯಾರ್ಥಿಗಳು, ನಾಗರೀಕರು ಅಪಘಾತಕ್ಕೀಡಾಗಿದ್ದಾರೆ. ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸದರಿ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಮಾಡಬೇಕು ಅಥವಾ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ಹಾಕಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಿದೆ. ಆದರೆ ಈ ನಿಟ್ಟಿನಲ್ಲಿ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ವಾಹನಗಳ ವೇಗ ನಿಯಂತ್ರಣಕ್ಕೆಂದು ಟ್ರಾಫಿಕ್ ಪೊಲೀಸರು ಹಾಕುವ ಬ್ಯಾರಿಕೇಡ್ ಗಳನ್ನು ಆಗಾಗ್ಗೆ ತೆರವುಗೊಳಿಸಲಾಗುತ್ತಿದೆ. ಇನ್ನಾದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಹಾನಗರ ಪಾಲಿಕೆ ಆಡಳಿತ, ಪೊಲೀಸ್ ಇಲಾಖೆ ಇತ್ತ ಗಮನಹರಿಸಬೇಕಾಗಿದೆ. ಸೂಕ್ತ ಸುರಕ್ಷತಾ ಕ್ರಮಗಳ ಪಾಲನೆ ಮಾಡಬೇಕಾಗಿದೆ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಾರೆ.

Shivamogga: Increased traffic congestion at Gopi Circle despite signal lights! | shimoga, november 06: Under the Smart City project, signal lights have been installed again for smooth vehicular movement in Gopi Circle (Sheenappa Shetty Circle), the heart of Shivamogga city. The signal lights have been functioning for the past few months. But the traffic congestion at the circle continues to be a nuisance, and allegations have begun to be heard from the public that it has become even more dangerous!

Severe shortage of staff at major police stations in Shivamogga city: Will the government take notice? ಶಿವಮೊಗ್ಗ ನಗರದ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ : ಗಮನಿಸುವುದೆ ಸರ್ಕಾರ? Previous post shimoga news | ಶಿವಮೊಗ್ಗ ನಗರದ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ : ಗಮನಿಸುವುದೆ ಸರ್ಕಾರ?