ಶಿವಮೊಗ್ಗ (shivamogga), ನವೆಂಬರ್ 25: ಕಿಯಾ ಕಾರಿನಲ್ಲಿ ಅಡಗಿದ್ದ ನಾಗರಹಾವನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ನವೆಂಬರ್ 24 ರ ರಾತ್ರಿ ಸಂರಕ್ಷಣೆ ಮಾಡಿದ ಘಟನೆ ಶಿವಮೊಗ್ಗ ನಗರದ ಗಾಂಧಿಬಜಾರ್ ನಲ್ಲಿ ನಡೆದಿದೆ.
ಸಚಿನ್ ಎಂಬುವರಿಗೆ ಸದರಿ ಕಾರು ಸೇರಿದ್ದಾಗಿದೆ. ಇವರು ಸಿಗಂದೂರಿಗೆ ತೆರಳಿದ್ದು, ರಾತ್ರಿ ಸಾಗರದಿಂದ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಶಿವಮೊಗ್ಗಕ್ಕೆ ಹೊರಟಿದ್ದಾರೆ.
ಕಾರು ಚಲಾಯಿಸುತ್ತಿದ್ದ ವೇಳೆಯೇ ಮುಂಭಾಗದ ಗಾಜಿನ ಬಳಿ ಹಾವು ಕಾಣಿಸಿಕೊಂಡು ಮರೆಯಾಗಿದೆ. ಕಾರಿನಲ್ಲಿದ್ದವರು ಗಾಬರಿಗೊಂಡಿದ್ದು, ಹಾಗೆಯೇ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಮನೆಗೆ ಆಗಮಿಸಿ ಪರಿಶೀಲಿಸಿದಾಗ ಕಾರಿನ ಮುಂಭಾಗದ ಚಕ್ರದ ಸಮೀಪ ಹಾವು ಓಡಾಡುತ್ತಿರುವುದು ಕಂಡುಬಂದಿದೆ.
ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕಾಗಮಿಸಿದ ಕಿರಣ್ ಅವರು ಕಾರಿನ ಎಂಜಿನ್ ಬಳಿ ಅಡಗಿದ್ದ ಹಾವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿದ್ದಾರೆ.
Shivamogga, November 25: Snake Kiran rescued a cobra hiding in a Kia car on the night of November 24 in Gandhi Bazaar, Shivamogga city.

