MP BY Raghavendra appeals for implementation of national highway projects in Shivamogga constituency Will the delayed Shivamogga Outer Ring Road get speed in Phase 2? ನೆನೆಗುದಿಗೆ ಬಿದ್ದ ಶಿವಮೊಗ್ಗ ಹೊರವರ್ತುಲ ರಸ್ತೆ 2 ನೇ ಹಂತಕ್ಕೆ ಸಿಗಲಿದೆಯೇ ವೇಗ?

shimoga outer ring road | ನೆನೆಗುದಿಗೆ ಬಿದ್ದ ಶಿವಮೊಗ್ಗ ಹೊರ ವರ್ತುಲ ರಸ್ತೆ 2 ನೇ ಹಂತಕ್ಕೆ ಸಿಗಲಿದೆಯೇ ವೇಗ?

ಶಿವಮೊಗ್ಗ (shivamogga), ಡಿಸೆಂಬರ್ 19: ಶಿವಮೊಗ್ಗ ನಗರದ ಹೊರವಲಯದಲ್ಲಿ 35 ಕಿ.ಮೀ. ಫೆರಿಫೆರಲ್ ವರ್ತುಲ ರಸ್ತೆ ನಿರ್ಮಾಣ ಯೋಜನೆಯ ಮೊದಲ ಹಂತ ಈಗಾಗಲೇ ಪೂರ್ಣ ಹಂತಕ್ಕೆ ಬಂದಿದೆ. ಎರಡನೇ ಹಂತ (ಉತ್ತರ ಭಾಗ) ದ ಯೋಜನೆ ಸಂಪೂರ್ಣ ನೆನೆಗುದಿಗೆ ಬಿದ್ದಿದ್ದು, ಇಲ್ಲಿಯವರೆಗೂ ಕಾರ್ಯಗತಗೊಂಡಿಲ್ಲ!

ಈ ನಡುವೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ – ಹೆದ್ದಾರಿ ಸಚಿವಾಲಯದ ನಿರ್ದೇಶಕರಾದ ವಿನಯ್ ಕುಮಾರ್ ರಾಜವತ್ ಅವರನ್ನು ಭೇಟಿಯಾಗಿ ಚರ್ಚಿಸಿದ ವೇಳೆ, ಶಿವಮೊಗ್ಗದ ಉತ್ತರ ಭಾಗದ ಫರಿಫೆರಲ್ ವರ್ತುಲ್ ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

‘ಒಟ್ಟಾರೆ 35 ಕಿ.ಮೀ. ವರ್ತುಲ ರಸ್ತೆ ನಿರ್ಮಿಸಲಾಗುತ್ತಿದೆ. ಉತ್ತರ ಭಾಗದ 16 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಬಾಕಿಯಿದೆ. ರಾಜ್ಯ ಸರ್ಕಾರವು ಭೂ ಸ್ವಾದೀನಕ್ಕೆ 100 ಕೋಟಿ ರೂ. ನೀಡಲು ಒಪ್ಪಿಕೊಂಡಿದೆ.

ಎನ್.ಹೆಚ್. 13 ಹಾಗೂ ಎನ್.ಹೆಚ್. 206 ಕ್ಕೆ ಬೈಪಾಸ್ ರಸ್ತೆಯಾಗಿ ಫೆರಿಫೆರಲ್ ವರ್ತುಲ ರಸ್ತೆ ನಿರ್ಮಿಸಲಾಗುತ್ತಿದೆ. ಒಟ್ಟಾರೆ ಕಾಲಮಿತಿಯೊಳಗೆ 35 ಕಿ.ಮೀ. ರಸ್ತೆ ಪೂರ್ಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸಂಸದರು ಕೇಂದ್ರ ರಸ್ತೆ ಸಾರಿಗೆ – ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ಮೊದಲ ಹಂತದ ಯೋಜನೆ : ಶಿವಮೊಗ್ಗ ನಗರದ ಹೊರವಲಯದಲ್ಲಿ ಮೊದಲ ಹಂತದ 200 ಅಡಿ ಅಗಲದ ಹೊರವರ್ತುಲ ರಸ್ತೆ ಕಾಮಗಾರಿ ಬಿರುಸುಗೊಂಡಿದೆ. ಸುಮಾರು 9 ಕಿ.ಮೀ. ರಸ್ತೆಯು ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆಯಿದೆ.

ಮೊದಲ ಹಂತದಲ್ಲಿ ಒಟ್ಟಾರೆ 15 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. ಸದ್ಯ ಹರಕೆರೆಯಿಂದ ಕಾನೇಹಳ್ಳ, ರಾಮಿನಕೊಪ್ಪ, ಅನುಪಿನಕಟ್ಟೆ ಮಾರ್ಗವಾಗಿ ಶ್ರೀರಾಂಪುರದವರೆಗೆ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದರಲ್ಲಿ ಈಗಾಗಲೇ ಅನುಪಿನಕಟ್ಟೆಯಿಂದ ಶ್ರೀರಾಂಪುರದ ನಡುವಿನ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅನುಪಿನಕಟ್ಟೆಯಿಂದ ಹರಕೆರೆ ನಡುವೆ ಅಂತಿಮ ಹಂತದ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಉಳಿದಂತೆ ಮೊದಲ ಹಂತದಲ್ಲಿ ಎಂಆರ್’ಎಸ್ ವೃತ್ತದಿಂದ ಊರುಗಡೂರು ಮಾರ್ಗವಾಗಿ ನಿರ್ಮಿಸಲು ಉದ್ದೇಶಿಸಿದ್ದ ಸುಮಾರು 5. 36 ಕಿ.ಮೀ. ರಸ್ತೆಯನ್ನು ಡಿ ಸ್ಕೋಪ್ (ರಸ್ತೆ ನಿರ್ಮಾಣದಿಂದ ಹಿಂದಕ್ಕೆ) ಮಾಡಲಾಗಿದೆ. ಹರಿಗೆ, ವಡ್ಡಿನಕೊಪ್ಪ ಮಾರ್ಗವಾಗಿ (ವಿಮಾನ ನಿಲ್ದಾಣ ಸಮೀಪ) ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ.

ಈಗಾಗಲೇ ಸದರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇದಕ್ಕೆ ಇನ್ನಷ್ಟೆ ಅನುಮತಿ ದೊರಕಬೇಕಾಗಿದೆ. ಇದಕ್ಕೆ ಅನುಮತಿ ದೊರಕಿದರೆ ಭೂ ಸ್ವಾದೀನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.

The first phase of the 35 km Peripheral Ring Road construction project on the outskirts of Shivamogga city has already reached its completion stage. The project for the second phase (northern part) has completely stalled and has not been implemented till now!

MP BY Raghavendra appeals for implementation of national highway projects in Shivamogga constituency
ಶಿವಮೊಗ್ಗ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅನುಷ್ಠಾನಕ್ಕೆ ಸಂಸದ ಬಿ ವೈ ರಾಘವೇಂದ್ರ ಮನವಿ
MP B Y Raghavendra

ಶಿವಮೊಗ್ಗ, ಡಿಸೆಂಬರ್ 19: ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾರ್ಯಗತಕ್ಕೆ ಸಂಸದ ಬಿ ವೈ ರಾಘವೇಂದ್ರರವರು ಕೇಂದ್ರ ರಸ್ತೆ ಸಾರಿಗೆ – ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಸಂಸದರು ನವದೆಹಲಿಯಲ್ಲಿ ಸಚಿವಾಲಯದ ಮಹಾ ನಿರ್ದೇಶಕರಾದ ವಿನಯ್ ಕುಮಾರ್ ರಾಜವತ್ ಅವರನ್ನು ಭೇಟಿಯಾಗಿ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತಂತೆ ಸಮಾಲೋಚನೆ ನಡೆಸಿ ಮನವಿ ಅರ್ಪಿಸಿದ್ದಾರೆ.

ಮನವಿಯೇನು? : ರಾಷ್ಟ್ರೀಯ ಹೆದ್ದಾರಿ 169 – ಎ ನಲ್ಲಿ ಬರುವ ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಘೋಷಣೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ಧಾರೆ. ಸದರಿ ಯೋಜನೆ ಕಾರ್ಯಗತಕ್ಕೆ ಕಾರ್ಯಸಾಧ್ಯತಾ ವರದಿ ಮತ್ತು ಡಿಪಿಆರ್ ಸಿದ್ದಪಡಿಸಲು ತಜ್ಞರ ನೇಮಿಸಬೇಕು.

ಶಿವಮೊಗ್ಗ ನಗರದಲ್ಲಿ 35 ಕಿ.ಮೀ. ಫೆರಿಫೆರಲ್ ವರ್ತುಲ ರಸ್ತೆ ಪೂರ್ಣಗೊಳಿಸಲು, ಉತ್ತರ ಭಾಗದ 16 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು.

ಶಿವಮೊಗ್ಗ – ಆನಂದಪುರ ನಡುವೆ ನಾಲ್ಕು ಪಥಗಳ ರಸ್ತೆ ಅಭಿವೃದ್ದಿ ಆರಂಭಿಸಬೇಕು. ಬೈಂದೂರಿನಿಂದ ನಾಗೋಡಿ ನಡುವಿನ 37.85 ಕಿ.ಮೀ. ದ್ವಿಪಥ ಮಾರ್ಗ ಅಗಲೀಕರಣ ಯೋಜನೆಯನ್ನು ತ್ವರಿತಗೊಳಿಸಬೇಕು.

ನೆಲ್ಲಿಸರ – ತೀರ್ಥಹಳ್ಳಿ ನಡುವಿನ ಹೆದ್ದಾರಿ ಅಗಲೀಕರಣ ಕೆಲಸವನ್ನು ಆದ್ಯತೆಯ ಮೇಲೆ ಅನುಷ್ಠಾನಗೊಳಿಸಬೇಕು. ತೀರ್ಥಹಳ್ಳಿ ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಾಣ.

ಎನ್ ಹೆಚ್ – 369 ಇ (ಸಾಗರದಿಂದ ಮರಕುಟುಕ), ಎನ್ ಹೆಚ್ 766 ಸಿ (ಬೈಂದೂರು – ರಾಣೆಬೆನ್ನೂರು) ಮತ್ತು ಎನ್. ಹೆಚ್. 69 (ಚೂರಿಕಟ್ಟೆಯಿಂದ ಆನಂದಪುರ) ಜೋಡಣೆ ಯೋಜನೆಗಳಿಗೆ ತಕ್ಷಣ ಅನುಮೋದನೆ ನೀಡಬೇಕು.

ತೀರ್ಥಹಳ್ಳಿ ಮತ್ತು ಮೇಗರವಳ್ಳಿ ನಡುವಿನ ಹೆದ್ದಾರಿಯ ದುರಸ್ತಿ ಕಾರ್ಯಕ್ಕೆ ಅನುಮೋದನೆ ನೀಡಬೇಕು. ರಾಜ್ಯ ಹೆದ್ದಾರಿ 25 ಹಾಗೂ 254 ಆದ ಹೊಸಪೇಟೆ – ಮರಿಯಮ್ಮನಹಳ್ಳಿ – ಹಗರಿಬೊಮ್ಮನಹಳ್ಳಿ – ಇಟ್ಟಿಗೆ – ಹರಪನಹಳ್ಳಿ – ಹರಿಹರ – ಹೊನ್ನಾಳ್ಳಿ – ಶಿವಮೊಗ್ಗ – ಮುಡುಬ – ಕುದುರೆಗುಂಡಿ – ಬಾಳೆಹೊನ್ನೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ದಿಗೊಳಿಸಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.

Shivamogga, December 19: MP BY Raghavendra has appealed to the Union Ministry of Road Transport and Highways for the implementation of various national highway projects in the Shivamogga Lok Sabha constituency.

Police constable shows loyalty to duty by returning cash and jewelry belonging to a deceased woman to her daughter! ಮೃತ ಮಹಿಳೆಯ ಬಳಿಯಿದ್ದ ನಗದು - ಚಿನ್ನಾಭರಣ ಮಗಳಿಗೆ ಹಿಂದಿರುಗಿಸಿ ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಪೇದೆ Previous post shimoga news | ಮೃತ ಮಹಿಳೆಯ ಬಳಿಯಿದ್ದ ನಗದು, ಚಿನ್ನಾಭರಣ ಮಗಳಿಗೆ ಹಿಂದಿರುಗಿಸಿ ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಪೇದೆ!
Shivamogga: Request to the Water Board Engineer to supply drinking water to the areas around Press Colony ಶಿವಮೊಗ್ಗ : ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಎಂಜಿನಿಯರ್’ಗೆ ಮನವಿ Next post shimoga news | ಶಿವಮೊಗ್ಗ : ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಎಂಜಿನಿಯರ್’ಗೆ ಮನವಿ