Police constable shows loyalty to duty by returning cash and jewelry belonging to a deceased woman to her daughter! ಮೃತ ಮಹಿಳೆಯ ಬಳಿಯಿದ್ದ ನಗದು - ಚಿನ್ನಾಭರಣ ಮಗಳಿಗೆ ಹಿಂದಿರುಗಿಸಿ ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಪೇದೆ

shimoga news | ಮೃತ ಮಹಿಳೆಯ ಬಳಿಯಿದ್ದ ನಗದು, ಚಿನ್ನಾಭರಣ ಮಗಳಿಗೆ ಹಿಂದಿರುಗಿಸಿ ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಪೇದೆ!

ಶಿವಮೊಗ್ಗ (shivamogga), ಡಿಸೆಂಬರ್ 18: ಅನಾರೋಗ್ಯದಿಂದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯೋರ್ವರ ಬಳಿಯಿದ್ದ ಸಾವಿರಾರು ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು, ಮೃತ ಮಹಿಳೆಯ ಮಗಳಿಗೆ ಹಿಂದಿರುಗಿಸಿ ಶಿವಮೊಗ್ಗದ ಪೊಲೀಸ್ ಪೇದೆಯೋರ್ವರು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಶಿವಮೊಗ್ಗ ಎ ಉಪ ವಿಭಾಗದ ಪೊಲೀಸ್ ಪೇದೆ ಚೌಡಪ್ಪ ಕಮತರ ಕರ್ತವ್ಯ ನಿಷ್ಠೆ ಮೆರೆದವರು. ಇವರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದೆ.

ಏನೀದು ಪ್ರಕರಣ? : 17/12/2025 ರಂದು ಮಹಿಳೆಯೋರ್ವರು ಅನಾರೋಗ್ಯದ ಹಿನ್ನೆಲೆಯಲ್ಲಿ, ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮೈಸೂರು ಊರಿನವರೆಂದು ತಿಳಿಸಿದ್ದು, ಹೆಸರು ಹೇಳಿರಲಿಲ್ಲ.

ದಾಖಲಾದ ದಿನದಂದೇ ಉಸಿರಾಟದ ತೊಂದರೆಯಿಂದ ಮಹಿಳೆ ಮೃತಪಟ್ಟಿದ್ದರು. ಮೃತರ ವಾರಸುದಾರರ ಯಾವುದೇ ಕುರುಹುಗಳು ಲಭ್ಯವಾಗಿರಲಿಲ್ಲ. ಮೃತ ಮಹಿಳೆಯ ಬಳಿ ಚೀಟಿಯೊಂದು ಲಭ್ಯವಾಗಿದ್ದು, ಅದರಲ್ಲಿ ಮೊಬೈಲ್ ಪೋನ್ ಸಂಖ್ಯೆ ಬರೆದಿದ್ದು ಬೆಳಕಿಗೆ ಬಂದಿತ್ತು.

ಸದರಿ ನಂಬರ್ ಗೆ ಕರೆ ಮಾಡಿದಾಗ ಮೃತ ಮಹಿಳೆಯ ಮಗಳ ಸುಳಿವು ಲಭ್ಯವಾಗಿತ್ತು. ಮೃತ ಮಹಿಳೆಯ ಬಳಿ ಸಿಕ್ಕಿದ್ದ 34 ಸಾವಿರ ನಗದು, ಚಿನ್ನದ 1 ಕೊರಳ ಚೈನ್ ಹಾಗೂ 2 ಉಂಗುರಗಳನ್ನು  ಪೇದೆ ಚೌಡಪ್ಪ ಕಮತರ ಅವರು ಮಗಳಿಗೆ ಹಸ್ತಾಂತರಿಸಿದ್ದರು.

A police constable from Shivamogga has shown his loyalty by returning thousands of rupees worth of cash and gold jewellery worth lakhs of rupees to the daughter of a woman who died of illness at the Government Megan Hospital.

Legislative Council MLA DS Arun urges Revenue Minister to rectify division letter confusion! ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ! Previous post news update | ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ!
MP BY Raghavendra appeals for implementation of national highway projects in Shivamogga constituency Will the delayed Shivamogga Outer Ring Road get speed in Phase 2? ನೆನೆಗುದಿಗೆ ಬಿದ್ದ ಶಿವಮೊಗ್ಗ ಹೊರವರ್ತುಲ ರಸ್ತೆ 2 ನೇ ಹಂತಕ್ಕೆ ಸಿಗಲಿದೆಯೇ ವೇಗ? Next post shimoga outer ring road | ನೆನೆಗುದಿಗೆ ಬಿದ್ದ ಶಿವಮೊಗ್ಗ ಹೊರ ವರ್ತುಲ ರಸ್ತೆ 2 ನೇ ಹಂತಕ್ಕೆ ಸಿಗಲಿದೆಯೇ ವೇಗ?