ಶಿವಮೊಗ್ಗ : ತುಂಗಾ ನದಿಯಲ್ಲಿ ಈಜಲು ಹೋದ ಕಾಲೇಜು ವಿದ್ಯಾರ್ಥಿ ನೀರುಪಾಲು!

Bhadravati: Four Missing in Bhadra Canal near Holehonnur–Arebilachi! ಭದ್ರಾವತಿ : ಹೊಳೆಹೊನ್ನೂರು ಅರೆಬಿಳಚಿ ಸಮೀಪದ ಭದ್ರಾ ನಾಲೆಯಲ್ಲಿ ನಾಲ್ವರು ನಾಪತ್ತೆ!

ಶಿವಮೊಗ್ಗ (Shivamogga), ಡಿಸೆಂಬರ್ 22:  ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯೋರ್ವ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಗರದ ಹೊರವಲಯ ಪಿಳ್ಳಂಗೆರೆ ಗ್ರಾಮದ ಸಮೀಪ ಡಿಸೆಂಬರ್ 21 ರಂದು ನಡೆದಿದೆ. 

ಶಿವಮೊಗ್ಗ ನಗರದ ಕಾಮಾಕ್ಷಿ ಬೀದಿ ನಿವಾಸಿ ಪ್ರೇಮ್ ಕುಮಾರ್ (17) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರೇಮ್ ಕುಮಾರ್ ಸ್ನೇಹಿತರೊಂದಿಗೆ ನಿನ್ನೆ ಮಧ್ಯಾಹ್ನ ಪಿಳ್ಳಂಗಿರಿ ದೇವಸ್ಥಾನಕ್ಕೆ ತೆರಳಿದ್ದು, ದೇವರ ದರ್ಶನದ ಬಳಿಕ ಸಮೀಪದಲ್ಲಿರುವ ತುಂಗಾ ನದಿಯಲ್ಲಿ ಈಜಲು ಇಳಿದಿದ್ದಾರೆ. 

ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ ಪ್ರೇಮ್ ಕುಮಾರ್ ಈಜಲಾಗದೆ ನೀರಿನಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕ ದಳದ ತಂಡ ನೀರಿನಿಂದ ಶವ ಹೊರ ತೆಗೆದಿದೆ. ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga: A college student who went swimming in the Tunga River drowned! ಶಿವಮೊಗ್ಗ : ತುಂಗಾ ನದಿಯಲ್ಲಿ ಈಜಲು ಹೋದ ಕಾಲೇಜು ವಿದ್ಯಾರ್ಥಿ ನೀರುಪಾಲು!

| Shivamogga, December 22: A college student who had gone for a swim in the Tunga River drowned and died in the water. The incident took place on December 21 near Pillangere village on the outskirts of the city.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →