shimoga news | ಶಿವಮೊಗ್ಗ : ಮನೆಯಿಂದ ಹೊರ ತೆರಳಿದ ವಿವಾಹಿತ ಯುವಕ ನಿಗೂಢ ಕಣ್ಮರೆ!

Shivamogga: A married young man who left home mysteriously disappears! ಶಿವಮೊಗ್ಗ : ಮನೆಯಿಂದ ಹೊರ ತೆರಳಿದ ವಿವಾಹಿತ ಯುವಕ ನಿಗೂಢ ಕಣ್ಮರೆ!

ಶಿವಮೊಗ್ಗ (shivamogga), ಡಿಸೆಂಬರ್ 22: ಮನೆಯಿಂದ ಹೊರತೆರಳಿದ ವಿವಾಹಿತ ಯುವಕನೋರ್ವ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ, ಶಿವಮೊಗ್ಗ ನಗರದ ಭಾರತಿ ನಗರ 1 ನೇ ಕ್ರಾಸ್ ನಲ್ಲಿ ನಡೆದಿದೆ.

ಸಚಿನ್ (27) ನಾಪತ್ತೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಹೊಳೆಹೊನ್ನೂರಿನಲ್ಲಿ ಫರ್ಟಿಲೈಜರ್ ಅಂಗಡಿ ಇಟ್ಟುಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಡಿಸೆಂಬರ್ 22 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಸೆಂಬರ್ 14 ರಂದು ಸಂಜೆ 7. 30 ರ ಸುಮಾರಿಗೆ ಮನೆಯಿಂದ ಹೊರ ಹೋಗಿ ಬರುವುದಾಗಿ ಸಚಿನ್ ಕುಟುಂಬದವರಿಗೆ ಹೇಳಿ ಹೋಗಿದ್ದರು. ಆದರೆ ನಂತರ ಮನೆಗೆ ಹಿಂದಿರುಗದೆ ಕಣ್ಮರೆಯಾಗಿದ್ದಾರೆ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ.

ಚಹರೆ : ನಾಪತ್ತೆಯಾದ ಸಚಿನ್ ಅವರು 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ದಪ್ಪ ಗಡ್ಡ – ಮೀಸೆ ಬಿಟ್ಟಿರುತ್ತಾರೆ. ಮನೆಯಿಂದ ಹೋಗುವಾಗ ಕೇಸರಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ.

ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08182 – 261414, ಮೊಬೈಲ್ ಸಂಖ್ಯೆ : 96203 – 48689 ಗೆ ಸಂಪರ್ಕಿಸಬಹುದಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Shivamogga, December 22: A married young man who had left home and mysteriously disappeared has taken place at Bharathi Nagar 1st Cross in Shivamogga city.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

One Comment on “shimoga news | ಶಿವಮೊಗ್ಗ : ಮನೆಯಿಂದ ಹೊರ ತೆರಳಿದ ವಿವಾಹಿತ ಯುವಕ ನಿಗೂಢ ಕಣ್ಮರೆ!”

Comments are closed.