bhadravati | Father and son drown in Bhadra Dam backwater! bhadravati | ಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ತಂದೆ – ಮಗ ಸಾವು!

ಶಿವಮೊಗ್ಗ : ತುಂಗಾ ನದಿಯಲ್ಲಿ ಈಜಲು ಹೋದ ಕಾಲೇಜು ವಿದ್ಯಾರ್ಥಿ ನೀರುಪಾಲು!

ಶಿವಮೊಗ್ಗ (Shivamogga), ಡಿಸೆಂಬರ್ 22:  ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯೋರ್ವ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಗರದ ಹೊರವಲಯ ಪಿಳ್ಳಂಗೆರೆ ಗ್ರಾಮದ ಸಮೀಪ ಡಿಸೆಂಬರ್ 21 ರಂದು ನಡೆದಿದೆ. 

ಶಿವಮೊಗ್ಗ ನಗರದ ಕಾಮಾಕ್ಷಿ ಬೀದಿ ನಿವಾಸಿ ಪ್ರೇಮ್ ಕುಮಾರ್ (17) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರೇಮ್ ಕುಮಾರ್ ಸ್ನೇಹಿತರೊಂದಿಗೆ ನಿನ್ನೆ ಮಧ್ಯಾಹ್ನ ಪಿಳ್ಳಂಗಿರಿ ದೇವಸ್ಥಾನಕ್ಕೆ ತೆರಳಿದ್ದು, ದೇವರ ದರ್ಶನದ ಬಳಿಕ ಸಮೀಪದಲ್ಲಿರುವ ತುಂಗಾ ನದಿಯಲ್ಲಿ ಈಜಲು ಇಳಿದಿದ್ದಾರೆ. 

ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ ಪ್ರೇಮ್ ಕುಮಾರ್ ಈಜಲಾಗದೆ ನೀರಿನಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕ ದಳದ ತಂಡ ನೀರಿನಿಂದ ಶವ ಹೊರ ತೆಗೆದಿದೆ. ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga: A college student who went swimming in the Tunga River drowned! ಶಿವಮೊಗ್ಗ : ತುಂಗಾ ನದಿಯಲ್ಲಿ ಈಜಲು ಹೋದ ಕಾಲೇಜು ವಿದ್ಯಾರ್ಥಿ ನೀರುಪಾಲು!

| Shivamogga, December 22: A college student who had gone for a swim in the Tunga River drowned and died in the water. The incident took place on December 21 near Pillangere village on the outskirts of the city.

Power outages in various parts of Shivamogga city on December 11th! ಶಿವಮೊಗ್ಗ ನಗರದ ವಿವಿಧೆಡೆ ಡಿಸೆಂಬರ್ 11 ರಂದು ವಿದ್ಯುತ್ ವ್ಯತ್ಯಯ! Previous post shimoga | power cut news | ರಸ್ತೆ ಅಗಲೀಕರಣ ಕಾಮಗಾರಿ : ಶಿವಮೊಗ್ಗ ತಾಲೂಕಿನ ವಿವಿಧೆಡೆ ಡಿಸೆಂಬರ್ 24 ರಂದು ವಿದ್ಯುತ್ ವ್ಯತ್ಯಯ!