shimoga news | ಶಿವಮೊಗ್ಗ : ಗ್ಯಾಸ್ ಸಿಲಿಂಡರ್ ಸ್ಪೋಟ – ಮನೆ ಸಂಪೂರ್ಣ ಜಖಂ!
ಶಿವಮೊಗ್ಗ (shivamogga), ಡಿಸೆಂಬರ್ 25: ಅಡುಗೆ ಮಾಡಲು ಬಳಸುವ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಇಡೀ ಮನೆ ಸಂಪೂರ್ಣ ಜಖಂ ಆಗಿರುವ ಘಟನೆ, ಶಿವಮೊಗ್ಗದ ಸಿದ್ದೇಶ್ವರ ನಗರ 4 ನೇ ಕ್ರಾಸ್ ನಲ್ಲಿ ಡಿಸೆಂಬರ್ 25 ರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಧರ್ಮಪ್ಪ ಎಂಬುವರು ಬಾಡಿಗೆಗಿದ್ದ ಮನೆಯಲ್ಲಿ ಘಟನೆ ನಡೆದಿದೆ. ಅದೃಷ್ಟಾವಶಾತ್ ಘಟನೆ ನಡೆದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಇದರಿಂದ ಸಂಭಾವ್ಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸಿಲಿಂಡರ್ ಸ್ಪೋಟದಿಂದ ಇಡೀ ಮನೆ ಸಂಪೂರ್ಣ ಜಖಂಗೊಂಡಿದೆ. ಬೆಂಕಿ ಹೊತ್ತಿಕೊಂಡ ಪರಿಣಾಮ, ಮನೆಯಲ್ಲಿದ್ದ ವಸ್ತುಗಳೆಲ್ಲ ಹಾನಿಯಾಗಿವೆ. ಶೀಟ್ ನ ಮೇಲ್ಛಾವಣಿ ಕಿತ್ತು ಹೋಗಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಹಾಗೆಯೇ ಸ್ಫೋಟದ ರಭಸಕ್ಕೆ ಪಕ್ಕದ ಮನೆಗೂ ಹಾನಿಯಾಗಿದೆ. ಸಿಲಿಂಡರ್ ಸ್ಫೋಟದಿಂದ ಹೊತ್ತಿಕೊಂಡಿದ್ದ ಬೆಂಕಿ ನಂದಿಸುವ ವೇಳೆ, ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದೆ.ಅಗ್ನಿಶಾಮಕ ದಳದ ಎ.ಎಫ್.ಎಸ್.ಟಿ.ಓ ಹುಸೇನ್, ಎಲ್.ಎಫ್ ಲೋಹಿತ್, ಎಫ್.ಡಿ ಶರತ್, ಎಫ್.ಎಂ ವೆಂಕಟೇಶ್, ಸಾಗರ್ ರವರು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಘಟನೆ ನಡೆದ ವೇಳೆ ಮನೆಯಲ್ಲಿ ಯಾರು ಇಲ್ಲದಿದ್ದ ಕಾರಣದಿಂದ, ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ್ದ ಹೇಗೆಂಬುವುದರ ನಿಖರ ಕಾರಣಗಳು ತಿಳಿದುಬಂದಿಲ್ಲ.
ಚೂರು ಚೂರಾದ ಸಿಲಿಂಡರ್..!
*** ಸ್ಫೋಟದ ರಭಸಕ್ಕೆ ಇಡೀ ಗ್ಯಾಸ್ ಸಿಲಿಂಡರ್ ಚೂರು ಚೂರಾಗಿ ಎಲ್ಲೆಂದರಲ್ಲಿ ಅದರ ಪೀಸ್ ಗಳು ಬಿದ್ದಿವೆ. ಸಿಲಿಂಡರ್ ಮೇಲ್ಭಾಗದ ರಿಂಗ್ ಕಬ್ಬಿಣವು, ಪಕ್ಕದ ಬೀದಿಯಲ್ಲಿ ಹಾರಿ ಹೋಗಿ ಬಿದ್ದಿರುವುದು ಸ್ಫೋಟದ ತೀವ್ರತೆಗೆ ಸಾಕ್ಷಿಯಾಗಿದೆ! ಕಿವಿಗಡಚಿಕ್ಕುವ ಸ್ಫೋಟದ ಶಬ್ದವು ಸುತ್ತಮುತ್ತಲಿನ ನಿವಾಸಿಗಳನ್ನು ಬೆಚ್ಚಿ ಬೀಳುವಂತೆ ಮಾಡಿತ್ತು ಎಂದು ಸ್ಥಳೀಯರು ತಿಳಿಸುತ್ತಾರೆ.
Shivamogga, December 25: An incident in which an entire house was completely damaged due to the explosion of a gas cylinder used for cooking took place at 4th Cross, Siddeshwara Nagar, Shivamogga, around 11 am on December 25.
