Shivamogga - Ranebennur railway project: What is the instruction given by the CM? ಶಿವಮೊಗ್ಗ – ರಾಣೆಬೆನ್ನೂರು ರೈಲ್ವೆ ಯೋಜನೆ : ಸಿಎಂ ನೀಡಿದ ಸೂಚನೆಯೇನು?

shimoga railway news | ಶಿವಮೊಗ್ಗ – ರಾಣೆಬೆನ್ನೂರು ರೈಲ್ವೆ ಯೋಜನೆ : ಸಿಎಂ ನೀಡಿದ ಸೂಚನೆಯೇನು?

ಬೆಂಗಳೂರು (bengaluru), ಡಿಸೆಂಬರ್ 29: ರೈಲ್ವೆ ಕಾಮಗಾರಿಗಳಿಗೆ ಬಾಕಿಯಿರುವ ಭೂಮಿ ಸ್ವಾದೀನ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ.

ಡಿಸೆಂಬರ್ 29 ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಮೂಲಸೌಕರ್ಯ ಅಭಿವೃದ್ದಿ ಯೋಜನೆ ಹಾಗೂ ರೈಲ್ವೆ ಯೋಜನೆಗಳ ಭೂ ಸ್ವಾದೀನ ಪ್ರಕ್ರಿಯೆ ಕುರಿತಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ತಿಳಿಸಿದ್ದಾರೆ.

ಶಿವಮೊಗ್ಗ – ರಾಣೆಬೆನ್ನೂರು, ಕುಡಚಿ – ಬಾಗಲಕೋಟೆ, ತುಮಕೂರು – ದಾವಣಗೆರೆ, ಬೇಲೂರು – ಹಾಸನ, ಧಾರವಾಡ – ಬೆಳಗಾವಿ ರೈಲ್ವೆ ಮಾರ್ಗಗಳ ಕಾಮಗಾರಿ ನಿಗದಿತ ಅವಧಿಯೊಳಗೆ ಕೈಗೊಳ್ಳಲು ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದು ಸೂಚಿಸಿದ್ದಾರೆ.

ಭೂ ಸ್ವಾದೀನ : ರಾಜ್ಯದಲ್ಲಿ ಅನುಮೋದನೆಗೊಂಡಿರುವ ಎಲ್ಲ ರೈಲ್ವೆ ಯೋಜನೆಗಳಿಗೆ ಒಟ್ಟು 16,554 ಎಕರೆ ಭೂಮಿ ಅವಶ್ಯಕತೆಯಿದೆ. ಇದರ ಪೈಕಿ ಶೇ. 84 ರಷ್ಟು ಭೂಮಿ ಸ್ವಾದೀನ ಪಡಿಸಿಕೊಳ್ಳಲಾಗಿದೆ. ಇನ್ನೂ ಅಂದಾಜು 2685 ಎಕರೆಗಳಷ್ಟು ಭೂ ಸ್ವಾದೀನವಾಗಬೇಕಾಗಿದೆ.

ಹಾಗೆಯೇ ರಾಜ್ಯದಲ್ಲಿ ಪ್ರಗತಿಯಲ್ಲಿರುವ ವಿವಿಧ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ನಿರ್ಮಾಣ ಕಾಮಗಾರಿಗಳಿಗೆ 2581.67 ಕೋಟಿ ರೂ., ಭೂ ಸ್ವಾದೀನ ಪ್ರಕ್ರಿಯೆಗೆ 2950 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಗಿದೆ.

Bengaluru, December 29: CM Siddaramaiah has instructed officials to complete the pending land acquisition processes for railway works on priority.

He has directed that all necessary processes should be expedited to complete the work on the Shivamogga-Ranebennur, Kudachi-Bagalkot, Tumkur-Davanagere, Belur-Hassan, and Dharwad-Belgaum railway lines within the stipulated time frame.

shimoga APMC vegetable prices | Details of vegetable prices for December 29 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 29 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 29 ರ ತರಕಾರಿ ಬೆಲೆಗಳ ವಿವರ