shikaripura | BREAKING NEWS | ದುರಸ್ತಿ ವೇಳೆ ವಿದ್ಯುತ್ ಶಾಕ್ : ಶಿಕಾರಿಪುರದಲ್ಲಿ ಲೈನ್’ಮ್ಯಾನ್ ಸಾವು!

⚡ Electric Shock During Repair: Lineman Dies in Shikaripura! ದುರಸ್ತಿ ವೇಳೆ ವಿದ್ಯುತ್ ಶಾಕ್ : ಶಿಕಾರಿಪುರದಲ್ಲಿ ಲೈನ್’ಮ್ಯಾನ್ ಸಾವು!

ಶಿಕಾರಿಪುರ (SHIKARIPURA), ಮಾರ್ಚ್ 29: ವಿದ್ಯುತ್ ಲೈನ್ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಲೈನ್’ಮ್ಯಾನ್ ಓರ್ವರು ಮೃತಪಟ್ಟ ಘಟನೆ ಶಿಕಾರಿಪುರ ಪಟ್ಟಣದಲ್ಲಿ ಮಾರ್ಚ್ 29 ರಂದು ನಡೆದಿದೆ.

ಹರೀಶ್ (45) ಮೃತಪಟ್ಟ ಲೈನ್’ಮ್ಯಾನ್ ಎಂದು ಗುರುತಿಸಲಾಗಿದೆ. ಇವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕೆಇಬಿಯ ಸ್ಟೇಷನ್ ಎದುರು ಲೈನ್ ಸರಿ ಮಾಡುವಾಗ ಕರೆಂಟ್ ಶಾಕ್ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಮೊದಲು ಹರೀಶ್ ಅವರು ಧರ್ಮಸ್ಥಳ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೆ ಅವರು ಶಿಕಾರಿಪುರಕ್ಕೆ ವರ್ಗಾವಣೆಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಘಟನಾ ಸ್ಥಳಕ್ಕೆ ಶಿಕಾರಿಪುರ ಪಟ್ಟಣ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

⚡   Electric Shock During Repair: Lineman Dies in Shikaripura!

Shikaripura, March 29: A tragic incident occurred in Shikaripura town on March 29, when a MESCOM lineman lost his life after being accidentally electrocuted while repairing an electric line.

The deceased has been identified as Harish (45). He is survived by his wife and two daughters.

Reports say that while fixing a line in front of the KEB station in Shikaripura, Harish was electrocuted and died on the spot.

Previously, Harish had been serving in the Dharmasthala region. Just three months ago, he was transferred to Shikaripura.

Police from Shikaripura Town Station visited the site and conducted an inspection. More details about the incident are yet to emerge.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *