
2100 ನೆ ಇಸ್ವಿವರೆಗೂ ವಿಶ್ವದ ಜನಸಂಖ್ಯೆಯಲ್ಲಿ ಭಾರತವೇ ನಂ 1!
ನವದೆಹಲಿ, ಜು. 13: ಪ್ರಸ್ತುತ ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ (largest population in the world) ಹೊಂದಿರುವ ರಾಷ್ಟ್ರ ಭಾರತವಾಗಿದೆ (india). ವಿಶ್ವಸಂಸ್ಥೆ ಮಾಹಿತಿ ಪ್ರಕಾರ, ಮುಂದಿನ 2100 ನೇ ಇಸ್ವಿಯವರೆಗೂ ಭಾರತವೇ ಪ್ರಥಮ ಸ್ಥಾನದಲ್ಲಿ ಮುಂದುವರಿಯಲಿದೆ. ವಿಶ್ವದ (world) ಇತರೆ ಯಾವ ರಾಷ್ಟ್ರಗಳು ಭಾರತವನ್ನು ಹಿಂದಿಕ್ಕಲು ಆಗುವುದಿಲ್ಲ..!
ವಿಶ್ವಸಂಸ್ಥೆಯ (united nation) ಜನಸಂಖ್ಯೆ ವಿಭಾಗದ ಆರ್ಥಿಕ, ಸಾಮಾಜಿಕ ವ್ಯವಹಾರಗಳ ಇಲಾಖೆ ಪ್ರಕಟಿಸಿರುವ ವಿಶ್ವ ಜನಸಂಖ್ಯೆ ಮುನ್ನೋಟ – 2024 ರಲ್ಲಿ ಈ ವಿಷಯ ಪ್ರಕಟಿಸಲಾಗಿದೆ. ಸದ್ಯ ಭಾರತದ ಜನಸಂಖ್ಯೆ (population) 145 ಕೋಟಿಯಿದೆ. 2060 ನೇ ಇಸ್ವಿಗೆ 170 ಕೋಟಿಗೆ ಏರಿಕೆಯಾಗಲಿದೆ (increase). ಬಳಿಕ ಶೇ. 12 ರಷ್ಟು ಇಳಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2100 ನೇ ಇಸ್ವಿವರೆಗೂ ಭೂಮಿಯ ಮೇಲೆ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಭಾರತವೇ ಇರಲಿದೆ. ಕಳೆದ ವರ್ಷದವರೆಗೂ ಚೀನಾ (china) ದೇಶವೇ, ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿತ್ತು. ಸದ್ಯ ಆ ರಾಷ್ಟ್ರದ ಜನಸಂಖ್ಯೆ 141 ಕೋಟಿಯಿದೆ.
ವಿಶ್ವಸಂಸ್ಥೆ ಮುನ್ನೋಟದ (united nations outlook_) ಮಾಹಿತಿ ಪ್ರಕಾರ, ಚೀನಾ ದೇಶದ ಜನಸಂಖ್ಯೆಯು ಮುಂದಿನ 2054 ರ ವೇಳೆಗೆ 121 ಕೋಟಿಗೆ ಕುಸಿತವಾಗಲಿದೆ (decrease). 2100 ನೇ ಇಸ್ವಿಗೆ 63. 3 ಕೋಟಿಗೆ ಜಾರಲಿದೆ ಎಂದು ತಿಳಿಸಿದೆ. ಮುಂದಿನ ದಶಕಗಳಲ್ಲಿ ಜನಸಂಖ್ಯೆಯ ವಿಷಯದಲ್ಲಿ ಭಾರತ ಹಾಗೂ ಚೀನಾ ದೇಶದ ನಡುವೆ ಅಜಗಜಾಂತರ ವ್ಯತ್ಯಾಸವಾಗಲಿದೆ!’
ಪ್ರಸ್ತುತ ವಿಶ್ವದ ಜನಸಂಖ್ಯೆ 820 ಕೋಟಿಯಿದೆ. ಮುಂದಿನ 50 ರಿಂದ 60 ವರ್ಷಗಳಲ್ಲಿ ಅಂದರೆ ಸರಿಸುಮಾರು 2080 ನೇ ಇಸ್ವಿ ವೇಳೆಗೆ 1030 ಕೋಟಿ ಆಗಲಿದೆ. ತದನಂತರ ಜನಸಂಖ್ಯೆಯಲ್ಲಿ ಕುಸಿತ ಕಂಡುಬರಲಿದೆ ಎಂದು ವಿಶ್ವಸಂಸ್ಥೆಯ ಮುನ್ನೋಟದ ವರದಿಯಲ್ಲಿ ಉಲ್ಲೇಖಿಸಲಾಗಿದೆ.