ಭದ್ರಾವತಿ ಗ್ರಾಪಂ ಅಧ್ಯಕ್ಷನ ಮನೆಯಲ್ಲಿ ಪತ್ತೆಯಾಗಿದ್ದು 1.33 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು! : ಶಿವಮೊಗ್ಗ ಲೋಕಾಯುಕ್ತ ಮಾಹಿತಿ
ಶಿವಮೊಗ್ಗ, ಜು. 22: ಭದ್ರಾವತಿ (bhadravati) ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ (antharagange grama panchayat) ನಾಗೇಶ್ ಬಿ ಅವರ ಮನೆ ಹಾಗೂ ಅವರಿಗೆ ಸೇರಿದ ಇತರೆ ಸ್ಥಳಗಳ ಮೇಲೆ ನಡೆದ ದಾಳಿಯ ವೇಳೆ 1,33,87,826 ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸರು (shimoga Lokayukta police information) ತಿಳಿಸಿದ್ದಾರೆ.
ಈ ಸಂಬಂಧ ಸೋಮವಾರ ಶಿವಮೊಗ್ಗ ಲೋಕಾಯುಕ್ತ ಸಂಸ್ಥೆ ಪ್ರಕಟಣೆ ಬಿಡುಗಡೆ ಮಾಡಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ (asset acquisition in excess of income) ಮಾಡಿರುವ ದೂರಿನ ಆಧಾರದ ಮೇಲೆ, 19/7/2024 ರಂದು ನಾಗೇಶ್ ಬಿ ಅವರಿಗೆ ಸೇರಿದ 5 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ (simultaneous raid) ನಡೆಸಲಾಗಿತ್ತು ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.
ಈ ವೇಳೆ 2 ಖಾಲಿ ನಿವೇಶನಗಳು, 2 ಮನೆಗಳು, ಅಂದಾಜು 12. 80 ಲಕ್ಷ ರೂ. ಮೌಲ್ಯದ 5. 14 ಎಕರೆ ಕೃಷಿ ಜಮೀನು, 1. 76 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ವಸ್ತುಗಳು, 7 ಲಕ್ಷ ರೂ. ಮೌಲ್ಯದ ವಾಹನಗಳು, 5,71,640 ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾಗೂ ನಗದು ಹಣ ಪತ್ತೆಯಾಗಿದ್ದು ಒಟ್ಟಾರೆ 1,33,87,876 ರೂ. ಮೌಲ್ಯದ ಅಕ್ರಮ ಸಂಪತ್ತು ಮಾಡಿರುವುದು ತನಿಖೆ ವೇಳೆ ಕಂಡುಬಂದಿದೆ ಎಂದು ಲೋಕಾಯುಕ್ತ (lokayukta ) ಸಂಸ್ಥೆ ಮಾಹಿತಿ ನೀಡಿದೆ.
ಅವರ ಮನೆಯಲ್ಲಿ ಪತ್ತೆಯಾದ 5 ಲಕ್ಷ ನಗದನ್ನು ತನಿಖೆ ಸಂಬಂಧ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ (shimoga lokayukta sp) ಮಂಜುನಾಥ್ ಚೌಧರಿ ಎಂ.ಹೆಚ್. ಅವರು ದಾಖಲಿಸಿದ್ದು, ಲೋಕಾಯುಕ್ತ ಇನ್ಸ್’ಪೆಕ್ಟರ್ (lokayukta inspector) ವೀರ ಬಸಪ್ಪ ಎಲ್. ಕುಸಲಾಪುರ ಅವರು ತನಿಖೆ ಮುಂದುವರಿಸಿದ್ದಾರೆ.
ದಾಳಿಯ ವೇಳೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ (shimoga lokayukta police station) ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಚಿತ್ರದುರ್ಗ (chitradurga), ಉಡುಪಿ (udupi), ಮಂಗಳೂರು (mangaluru) ವಿಭಾಗದ ಲೋಕಾಯುಕ್ತ ಅಧಿಕಾರಿ – ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ ಎಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಪ್ರಕಟಣೆ ತಿಳಿಸಿದೆ.
