Further increase in Bhadra Dam inflow due to heavy rain : Holiday announcement for schools and colleges of Hosnagar Sagar Tirthahalli taluk on 26th! ಭಾರೀ ಮಳೆಗೆ ಭದ್ರಾ ಡ್ಯಾಂ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ : ಜು. 26 ರಂದು ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕಿನ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ!

ಭಾರೀ ಮಳೆಗೆ ಭದ್ರಾ ಡ್ಯಾಂ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ : ಜು. 26 ರಂದು ಹೊಸನಗರ, ಸಾಗರ, ತೀರ್ಥಹಳ್ಳಿ  ತಾಲೂಕಿನ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ!

ಶಿವಮೊಗ್ಗ (shivamogga), ಜು. 26: ಮಲೆನಾಡಿನಲ್ಲಿ (malnad) ಕಳೆದೆರೆಡು ದಿನಗಳಿಂದ ಭಾರೀ ಮಳೆ (heavy rainfall) ಮುಂದುವರಿದಿದೆ. ಮತ್ತೆ ಕೆರೆಕಟ್ಟೆ, ನದಿಗಳು ಉಕ್ಕಿ ಹರಿಯುತ್ತಿವೆ. ಮತ್ತೊಂದೆಡೆ, ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ.

ಶುಕ್ರವಾರ ಬೆಳಿಗ್ಗೆಯ ಮಾಹಿತಿಯಂತೆ, ಮಧ್ಯ ಕರ್ನಾಟಕದ ಪ್ರಮುಖ ಜಲಾಶಯವಾದ ಭದ್ರಾ ಡ್ಯಾಂನ (bhadra dam) ಒಳಹರಿವು 35,318 ಕ್ಯೂಸೆಕ್ ಗೆ ಏರಿಕೆಯಾಗಿದೆ. 202 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಗುರುವಾರ ಡ್ಯಾಂನ ಒಳಹರಿವು (inflow) 26,044 ಕ್ಯೂಸೆಕ್ ಇತ್ತು.

ಡ್ಯಾಂನ ನೀರಿನ ಮಟ್ಟ (bhadra dam water level) 174 ಅಡಿ 3 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 155. 3 ಅಡಿಯಿತ್ತು. ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಡ್ಯಾಂನಲ್ಲಿ ಸರಿಸುಮಾರು 19 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.

ಜಲಾನಯನ ಪ್ರದೇಶ (catchment areas) ವ್ಯಾಪ್ತಿಯಲ್ಲಿ ಶುಕ್ರವಾರ ಕೂಡ ಭಾರೀ ಮಳೆ (heavy to heavy rainfall) ಮುಂದುವರಿದಿದೆ. ಇದರಿಂದ ಡ್ಯಾಂನ (dam) ಒಳಹರಿವಿನಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಇದೇ ರೀತಿ ಮಳೆ ಮುಂದುವರಿದರೆ ಶೀಘ್ರದಲ್ಲಿಯೇ ಭದ್ರಾ ಜಲಾಶಯ ಗರಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ.

ರಜೆ ಘೋಷಣೆ : ಶಿವಮೊಗ್ಗ ಜಿಲ್ಲೆಯ ಹೊಸನಗರ (hosanagara), ಸಾಗರ (sagar) ಹಾಗೂ ತೀರ್ಥಹಳ್ಳಿ (thirthahalli) ತಾಲೂಕಿನಾದ್ಯಂತ ಮಳೆಯ ಆರ್ಭಟ ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜು. 26 ರ ಶುಕ್ರವಾರ ಈ ಮೂರು ತಾಲೂಕಿನಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ ಘೊಷಣೆ (Holiday declaration for schools and colleges) ಮಾಡಿ ಅಲ್ಲಿನ ತಾಲೂಕು ಆಡಳಿತಗಳು ಆದೇಶ ಹೊರಡಿಸಿವೆ.

Dead body found at Shimoga KSRTC bus station! ಶಿವಮೊಗ್ಗ ಸರ್ಕಾರಿ ಬಸ್ ನಿಲ್ದಾಣದಲ್ಲಿ ಶವ ಪತ್ತೆ! Previous post ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಶವ ಪತ್ತೆ!
In separate incidents, those who were robbing temples, including the thief, were arrested! ಪ್ರತ್ಯೇಕ ಘಟನೆಗಳಲ್ಲಿ ಅಡಕೆ ಕಳ್ಳ ಸೇರಿದಂತೆ ದೇವಾಲಯಗಳಲ್ಲಿ ದೋಚುತ್ತಿದ್ದವರು ಅರೆಸ್ಟ್! Next post ಪ್ರತ್ಯೇಕ ಘಟನೆಗಳಲ್ಲಿ ಅಡಕೆ ಕಳ್ಳ ಸೇರಿದಂತೆ ದೇವಾಲಯಗಳಲ್ಲಿ ಕಳವು ಮಾಡುತ್ತಿದ್ದವರು ಅರೆಸ್ಟ್!