Dead body found at Shimoga KSRTC bus station! ಶಿವಮೊಗ್ಗ ಸರ್ಕಾರಿ ಬಸ್ ನಿಲ್ದಾಣದಲ್ಲಿ ಶವ ಪತ್ತೆ!

ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಶವ ಪತ್ತೆ!

ಶಿವಮೊಗ್ಗ (shivamogga), ಜು. 25: ಶಿವಮೊಗ್ಗ ನಗರದ ಸರ್ಕಾರಿ ಬಸ್ ನಿಲ್ದಾಣದ (ksrtc bus stand) ಪುರುಷರ ವಿಶ್ರಾಂತಿ ಕೊಠಡಿಯಲ್ಲಿ, ಅನಾಮಧೇಯ ವ್ಯಕ್ತಿಯೋರ್ವರು ಮಲಗ್ಗಿದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಮೃತರ ಹೆಸರು, ವಿಳಾಸ ಸೇರಿದಂತೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಮೃತ ದೇಹವನ್ನು (dead body) ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ (govt meggan hospital) ಶವಾಗಾರದಲ್ಲಿರಿಸಲಾಗಿದೆ (mortuary) ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೃತರಿಗೆ ಸುಮಾರು 45 ರಿಂದ 50 ವರ್ಷವಿದೆ. 05.06 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಬಲ ಕಿಬ್ಬೊಟ್ಟೆಯ ಮೇಲೆ ರಾಗಿ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. 

ಮೈಮೇಲೆ ಕಪ್ಪುಬಿಳಿ ಬಣ್ಣದ  ತುಂಬು ತೋಳಿನ ಶರ್ಟ್, ಕಂದು ಬಣ್ಣದ ಅರ್ಧ ತೋಳಿನ ಟೀಶರ್ಟ್, ಕಂದು ಬಣ್ಣದ ಚುಕ್ಕಿಗಳಿರುವ ಲುಂಗಿ ಧರಿಸಿರುತ್ತಾರೆ. 

ಮೃತರ ವಾರಸ್ಸುದಾರರು ಇದ್ದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ (shimoga doddapete police station) ದೂ.ಸಂ.:08182-261414/ 9916882544 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

Police exhumed the body of a young woman who was buried in the canal in the presence of the killer..! ಹಂತಕನ ಸಮ್ಮುಖದಲ್ಲಿಯೇ ಕಾಲುವೆಯಲ್ಲಿ ಹೂತ್ತಿದ್ದ ಯುವತಿಯ ಶವ ಹೊರತೆಗೆದ ಪೊಲೀಸರು..! Previous post ಹಂತಕನ ಸಮ್ಮುಖದಲ್ಲಿಯೇ ಕಾಲುವೆಯಲ್ಲಿ ಹೂತ್ತಿದ್ದ ಯುವತಿಯ ಶವ ಹೊರತೆಗೆದ ಪೊಲೀಸರು..!
Further increase in Bhadra Dam inflow due to heavy rain : Holiday announcement for schools and colleges of Hosnagar Sagar Tirthahalli taluk on 26th! ಭಾರೀ ಮಳೆಗೆ ಭದ್ರಾ ಡ್ಯಾಂ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ : ಜು. 26 ರಂದು ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕಿನ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ! Next post ಭಾರೀ ಮಳೆಗೆ ಭದ್ರಾ ಡ್ಯಾಂ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ : ಜು. 26 ರಂದು ಹೊಸನಗರ, ಸಾಗರ, ತೀರ್ಥಹಳ್ಳಿ  ತಾಲೂಕಿನ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ!