
ಪ್ರತ್ಯೇಕ ಘಟನೆಗಳಲ್ಲಿ ಅಡಕೆ ಕಳ್ಳ ಸೇರಿದಂತೆ ದೇವಾಲಯಗಳಲ್ಲಿ ಕಳವು ಮಾಡುತ್ತಿದ್ದವರು ಅರೆಸ್ಟ್!
ತೀರ್ಥಹಳ್ಳಿ (thirthahalli), ಜು. 26: ಎರಡು ಪ್ರತ್ಯೇಕ ಘಟನೆಗಳಲ್ಲಿ ತೀರ್ಥಹಳ್ಳಿ ತಾಲೂಕು ಮಾಳೂರು ಠಾಣೆ ಪೊಲೀಸರು (malur police station) ಅಡಕೆ ಕಳವು ಮಾಡಿದ್ದವ ಹಾಗೂ ದೇವಾಲಯಗಳಲ್ಲಿ ಚಿನ್ನಾಭರಣ ಮತ್ತೀತರ ವಸ್ತುಗಳನ್ನು ಅಪಹರಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಅಡಕೆ ಕಳವು : ಅಡಕೆ ಕಳವು (supari theft) ಮಾಡಿದ್ದ ಆರೋಪದ ಮೇರೆಗೆ ಶಿಕಾರಿಪುರ ತಾಲೂಕು (shikaripur taluk) ಹರಗುವಳ್ಳಿ ಗ್ರಾಮದ ನಿವಾಸಿ ಹನುಮಂತಪ್ಪ ಜಿ ವೈ (24) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ಧಾರೆ.
ಆರೋಪಿಯು 20-5-2024 ರ ರಾತ್ರಿ ಕರಕುಚ್ಚಿ ಗ್ರಾಮದ ದೇವದಾಸ್ ಎಂಬುವರ ಮನೆಯ ಕೊಟ್ಟಿಗೆಯಲ್ಲಿಟ್ಟಿದ್ದ 80 ಸಾವಿರ ರೂ. ಮೌಲ್ಯದ 4 ಕ್ವಿಂಟಾಲ್ ಸಿಪ್ಪೆಗೋಟು ಅಡಕೆ (supari) ಅಪಹರಿಸಿದ್ದ. ಆರೋಪಿಯಿಂದ 3 ಕ್ವಿಂಟಾಲ್ 95 ಕೆಜಿ ಅಡಕೆಯನ್ನು ಪೊಲೀಸರು (police) ವಶಕ್ಕೆ ಪಡೆದುಕೊಂಡಿದ್ದಾರೆ.
ದೇವಾಲಯಗಳಲ್ಲಿ ಕಳವು : ದೇವಾಲಯಗಳಲ್ಲಿ (temples) ಕಳವು ಮಾಡಿದ್ದ ಆರೋಪದ ಮೇರೆಗೆ ಭದ್ರಾವತಿಯ (bhadravati) ಹೊಸ ಬುಳ್ಳಾಪುರದ ನಿವಾಸಿಗಳಾದ ಅರುಣ್ ಕುಮಾರ್ ಯಾನೆ ಲಾಲಾ (28) ಹಾಗೂ ಅಕಾಶ ಎ ಯಾನೆ ಚೋಟು (24) ಎಂಬುವರನ್ನು ಬಂಧಿಸಲಾಗಿದೆ (Arrested).
ಚಿಡುವ ಗ್ರಾಮದ ವೀರಾಂಜನೇಯ ದೇವಾಲಯದಲ್ಲಿ ಕಳವು ನಡೆದಿತ್ತು. 75 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಅಪಹರಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತೀರ್ಥಹಳ್ಳಿ ತಾಲೂಕಿನ ಮತ್ತೆರೆಡು ದೇವಾಲಯಗಳಲ್ಲಿ ಕಳವು ಮಾಡಿದ್ದ ಸಂಗತಿ ಬಾಯ್ಬಿಟ್ಟಿದ್ದಾರೆ.
ಡಿವೈಎಸ್ಪಿ (dysp) ಗಜಾನನ ವಾಮನ ಸುತಾರ, ಇನ್ಸ್’ಪೆಕ್ಟರ್ (inspector) ಶ್ರೀಧರ್ ಕೆ ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ (sub inspector) ಕುಮಾರ್ ಕೂರಗುಂದ, ಶಿವಾನಂದ ದರೇನವರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸುರಕ್ಷಿತ, ರಾಜಶೇಖರ ಶೆಟ್ಟಿಗಾರ್, ಮಂಜುನಾಥ್, ಲೋಕೇಶ್, ಸಂತೋಷ, ಪುನೀತ, ಚೇತನ, ಅಭಿಲಾಷ ಅವರು ಈ ಎರಡು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.