ಸೆಲ್ಫಿ ತೆಗೆದುಕೊಳ್ಳಲು ಹೋಗಿ 60 ಅಡಿ ಆಳದ ಕಂದಕಕ್ಕೆ ಬಿದ್ದ ಯುವತಿ!
ಸತಾರ (ಮಹಾರಾಷ್ಟ್ರ,): ಸೆಲ್ಫಿ (selfie) ತೆಗೆದುಕೊಳ್ಳುವ ವೇಳೆ, ಯುವತಿಯೋರ್ವಳು ಸುಮಾರು 60 ಅಡಿ ಆಳದ ಕಂದಕಕ್ಕೆ (deep gorge) ಬಿದ್ದ ಘಟನೆ, ಮಹಾರಾಷ್ಟ್ರ (maharashtra) ರಾಜ್ಯದ ಸತಾರ ಜಿಲ್ಲೆಯ ಬೋರೆನ್ ಘಾಟ್ (borne ghat) ಪ್ರವಾಸಿ ತಾಣದ ಬಳಿ ಆಗಸ್ಟ್ 3 ರ ಶನಿವಾರದಂದು ನಡೆದಿದೆ.
ಪುಣೆಯ (pune) ತಂಡವೊಂದು ಜಲಪಾತಕ್ಕೆ (water falls) ಭೇಟಿ ನೀಡಿತ್ತು. ಈ ವೇಳೆ ಪುಣೆಯ ವಾರ್ಸಿಯ ನಿವಾಸಿ ನರ್ಸೀನ್ ಅರ್ಮಿನ್ (29) ಎಂಬ ಯುವತಿ ಸಮೀಪದ ಸ್ಥಳವೊಂದರಲ್ಲಿ ಮೊಬೈಲ್ ಫೋನ್ ಮೂಲಕ ಸೆಲ್ಫಿ (while takinga a selfie) ತೆಗೆದುಕೊಳ್ಳುತ್ತಿದ್ದರು. ಈ ವೇಳ ಸ್ಥಳದಲ್ಲಿ ಭಾರೀ ಮಳೆಯಾಗುತ್ತಿತ್ತು (heavy rainfall).
ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿದ ಯುವತಿ ಸುಮಾರು 60 ಅಡಿ ಆಳದ ಕಂದಕಕ್ಕೆ (60 feet gorge) ಜಾರಿ ಬಿದ್ದಿದ್ದಾಳೆ ಎನ್ನಲಾಗಿದೆ. ತಕ್ಷಣವೇ ಸ್ಥಳದಲ್ಲಿದ್ದ ಹೋಂ ಗಾರ್ಡ್ ಸಿಬ್ಬಂದಿಯೋರ್ವರು (home guard) ಹಾಗೂ ಇತರೆ ಪ್ರವಾಸಿಗರು (tourists) ಕಂದಕಕ್ಕೆ ಬಿದ್ದ ಯುವತಿಯನ್ನು ರಕ್ಷಿಸಿದ್ದಾರೆ. ಆಸ್ಪತ್ರೆಗೆ (hospital) ದಾಖಲಿಸಿದ್ದಾರೆ.
ಸದರಿ ಯುವತಿಯ ರಕ್ಷಣಾ ಕಾರ್ಯದ ವೀಡಿಯೋ (rescue video), ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (social media) ಸಾಕಷ್ಟು ವೈರಲ್ (viral) ಆಗಿದೆ.
