Street lights on the national highway between Shimoga - Bhadravati! ಶಿವಮೊಗ್ಗ – ಭದ್ರಾವತಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಲಾರಂಭಿಸಿದ ಬೀದಿ ದೀಪಗಳು!

ಶಿವಮೊಗ್ಗ – ಭದ್ರಾವತಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಲಾರಂಭಿಸಿದ ಬೀದಿ ದೀಪಗಳು!

ಶಿವಮೊಗ್ಗs (shivamogga), ಆ. 17: ಶಿವಮೊಗ್ಗ- ಭದ್ರಾವತಿ ನಡುವಿನ (shimoga – bhadravati) ಪಾಲಿಕೆ ವ್ಯಾಪ್ತಿಯ ಮಲವಗೊಪ್ಪದ ರಾಷ್ಟ್ರೀಯ ಹೆದ್ದಾರಿಯಲ್ಲಿ (national highway) ಹಾಳಾಗಿದ್ದ ಬೀದಿ ದೀಪಗಳನ್ನು, ಸಮಹಾನಗರ ಪಾಲಿಕೆ ಆಡಳಿತ ಇತ್ತೀಚೆಗೆ ದುರಸ್ತಿಗೊಳಿಸಿದೆ.

ಮಲವಗೊಪ್ಪದ ಬಳಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ, ಬೀದಿ ದೀಪಗಳು (street lights) ಹಾಳಾಗಿದ್ದವು. ಇದರಿಂದ ಹೆದ್ದಾರಿಯಲ್ಲಿ ಸಂಜೆ ವೇಳೆ ಕಾರ್ಗತ್ತಲು ಆವರಿಸುತ್ತಿತ್ತು. ಜನ – ವಾಹನ ಸಂಚಾರ ದುಸ್ತರವಾಗಿ ಪರಣಮಿಸಿತ್ತು.

ಕತ್ತಲೆ (dark) ಕಾರಣದಿಂದ, ಸಣ್ಣಪುಟ್ಟ ಅಪಘಾತಗಳು (accidents) ಕೂಡ ಹೆದ್ದಾರಿಯಲ್ಲಿ ಸಂಭವಿಸಿದ್ದವು. ಕಳೆದ ಸರಿಸುಮಾರು ಒಂದೂವರೆ ತಿಂಗಳಿನಿಂದ ಅವ್ಯವಸ್ಥೆಯಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಾಗಲಿ (national highway), ಪಾಲಿಕೆ ಆಡಳಿತವಾಗಲಿ (corporation) ಬೀದಿ ದೀಪಗಳ ದುರಸ್ತಿಗೆ ಕ್ರಮಕೈಗೊಂಡಿರಲಿಲ್ಲ.

ಈ ಕುರಿತಂತೆ ‘ಉದಯ ಸಾಕ್ಷಿ ‘ ( www.udayasaakshi.com ) ನ್ಯೂಸ್ ವೆಬ್’ಸೈಟ್, ಯೂಟ್ಯೂಬ್ ( @UdayaSaakshi ) ಚಾನಲ್ ನಲ್ಲಿ ಸುದ್ದಿ ಬಿತ್ತರವಾಗಿತ್ತು. ಸುದ್ದಿ ಪ್ರಕಟಗೊಂಡ ಬೆನ್ನಲ್ಲೆ ಪಾಲಿಕೆ ಆಡಳಿತವು (shimoga corporation) ಬೀದಿ ದೀಪಗಳ ದುರಸ್ತಿಗೊಳಿಸಿದೆ. ಇದರಿಂದ ಸಂಜೆ ವೇಳೆ ಜನ – ವಾಹನ ಸಂಚಾರಕ್ಕೆ ಅನುಕೂಲವಾಗಿದೆ ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ.

*** ಮಲವಗೊಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ (national highway) ನಡೆಸಲಾಗುತ್ತಿದೆ. ಈ ವೇಳೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಮಾಡದ ಕಾರಣದಿಂದ, ಹೆದ್ದಾರಿಯಲ್ಲಿನ ಬೀದಿ ದೀಪಗಳ (street lights) ವೈಯರ್ ಗಳು ದುರಸ್ತಿಗೀಡಾಗುತ್ತಿವೆ. ಇದರಿಂದ ಹೆದ್ದಾರಿಯಲ್ಲಿ ಬೀದಿ ದೀಪಗಳು ಹಾಳಾಗಲು ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಕಾಮಗಾರಿ ನಿರ್ವಹಿಸಲು ಪಾಲಿಕೆ ಆಡಳಿತ ಸೂಕ್ತ ನಿರ್ದೇಶನ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

Monsoon rain forecast to continue in the malnad : 72 mm rainfall in Savehakklu! ಮಲೆನಾಡಿನಲ್ಲಿ ಮುಂಗಾರು ಮಳೆ ಮುಂದುವರಿಕೆ ಮುನ್ಸೂಚನೆ : ಸಾವೇಹಕ್ಲುವಿನಲ್ಲಿ 72 ಮಿ.ಮೀ. ವರ್ಷಧಾರೆ! Previous post ಮಲೆನಾಡಿನಲ್ಲಿ ಮುಂಗಾರು ಮಳೆ ಮುಂದುವರಿಕೆ ಮುನ್ಸೂಚನೆ : ಸಾವೇಹಕ್ಲುವಿನಲ್ಲಿ 72 ಮಿ.ಮೀ. ವರ್ಷಧಾರೆ!
Governor's permission for prosecution against CM: What next? ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ : ಮುಂದೇನು? Next post ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ : ಮುಂದೇನು?