
ಮಲೆನಾಡಿನಲ್ಲಿ ಮುಂಗಾರು ಮಳೆ ಮುಂದುವರಿಕೆ ಮುನ್ಸೂಚನೆ : ಸಾವೇಹಕ್ಲುವಿನಲ್ಲಿ 72 ಮಿ.ಮೀ. ವರ್ಷಧಾರೆ!
ಶಿವಮೊಗ್ಗ (shivamogga), ಆ. 17: ಮಲೆನಾಡಿನಲ್ಲಿ (malnad) ಇಳಿಕೆಯಾಗಿದ್ದ ಮಳೆ (rain) ಮತ್ತೆ ಚುರುಕುಗೊಂಡಿದೆ. ಈ ನಡುವೆ ಹವಾಮಾನ ಇಲಾಖೆಯು ಮುಂದಿನ ಕೆಲ ದಿನಗಳವರೆಗೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಮಳೆ (monsoon rain) ಮುಂದುವರಿಕೆಯ ಮುನ್ಸೂಚನೆ ನೀಡಿದೆ.
ಶನಿವಾರ ಬೆಳಿಗ್ಗೆಯ ಮಾಹಿತಿಯಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸನಗರ ತಾಲೂಕಿನ ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳಲ್ಲಿ ಬಿದ್ದ ಮಳೆ ವಿವರ (rainfall details) ಈ ಮುಂದಿನಂತಿದೆ.
ಸಾವೇಹಕ್ಲುವಿನಲ್ಲಿ (savehakklu) 76 ಮಿಲಿ ಮೀಟರ್, ಚಕ್ರಾ (chakra) 36 ಮಿ.ಮೀ., ಮಾಣಿ (mani) 16 ಮಿ.ಮೀ., ಮಾಸ್ತಿಕಟ್ಟೆ (masthikatte) 14 ಮಿ.ಮೀ., ಯಡೂರು (yadur) 8 ಮಿ.ಮೀ., ಹಾಗೂ ಹುಲಿಕಲ್ (hulikallu) ನಲ್ಲಿ 14 ಮಿ.ಮೀ. ವರ್ಷಧಾರೆಯಾಗಿದೆ.
ಡ್ಯಾಂ ವಿವರ : ಶನಿವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ (linganamakki dam) ಒಳಹರಿವು 9249 ಕ್ಯೂಸೆಕ್ ಗೆ ಏರಿಕೆಯಾಗಿದೆ.
ಜಲಾಶಯದ ನೀರಿನ ಮಟ್ಟ (dam water level) 1816. 90 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 0. 05 ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1790. 35 ಅಡಿ ನೀರು ಸಂಗ್ರಹವಾಗಿತ್ತು.
ತುಂಗಾ ಜಲಾಶಯದ (tunga dam) ಒಳಹರಿವು 12,500 ಕ್ಯೂಸೆಕ್ ಇದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ಹೊರ ಹರಿಸಲಾಗುತ್ತಿದೆ (out flow).
ಉಳಿದಂತೆ ಭದ್ರಾ ಜಲಾಶಯದs (bhadra dam) ಒಳಹರಿವು (inflow) 5665 ಕ್ಯೂಸೆಕ್ ಇದ್ದು, 6811 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 180. 1 (ಗರಿಷ್ಠ ಮಟ್ಟ : 186) ಅಡಿಯಿದೆ.