
telangana | ರೀಲ್ಸ್ ಹುಚ್ಚಾಟ : ಬಾಯಲ್ಲಿ ಹಾವು ಕಚ್ಚಿಕೊಂಡು ವೀಡಿಯೋ – ಯುವಕ ಸಾವು!
ತೆಲಂಗಾಣ, ಸೆ. 7: ರೀಲ್ಸ್ (reels) ಮಾಡುವ ಉದ್ದೇಶದಿಂದ ನಾಗರಹಾವಿನ ತಲೆಯನ್ನ ಬಾಯಲ್ಲಿ ಕಚ್ಚಿ ಹಿಡಿದಿದ್ದ ಯುವಕನೋರ್ವ, ಹಾವು ಕಡಿತದಿಂದ ಮೃತಪಟ್ಟ ಘಟನೆ ತೆಲಂಗಾಣದ ಕಾಮರೆಡ್ಡಿ (kamareddy) ಜಿಲ್ಲೆಯ ಬನ್ಸವಾಡ ಮಂಡಲದ ದೇಸಾಯಿಪೇಟ್ ಗ್ರಾಮದಲ್ಲಿ ಸೆ. 6 ರಂದು ನಡೆದಿದೆ.
ಗ್ರಾಮದ ಹಾವಡಿಗನೋರ್ವನ ಪುತ್ರ ಶಿವರಾಜ್ (20) ಎಂಬಾತನೇ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಗ್ರಾಮದ ಕಾಲೋನಿಯೊಂದರಲ್ಲಿ ಸುಮಾರು 6 ಅಡಿ ಉದ್ದದ ನಾಗರಹಾವು (cobra) ಕಾಣಿಸಿಕೊಂಡಿತ್ತು. ಇದನ್ನು ಶಿವರಾಜ್ ಸುರಕ್ಷಿತವಾಗಿ ಹಿಡಿದಿದ್ದ.
ನಂತರ ಇದನ್ನು ಗ್ರಾಮದ ಹೊರವಲಯದಲ್ಲಿ ಬಿಡಲು ಕೊಂಡೊಯ್ದ ವೇಳೆ, ರೀಲ್ಸ್ ಮಾಡುವ ಉದ್ದೇಶದಿಂದ ಬಾಯಲ್ಲಿ ಹಾವನ್ನು ಕಚ್ಚಿ ಹಿಡಿದಿದ್ದ. ಇದನ್ನು ಮತ್ತೋರ್ವರು ಮೊಬೈಲ್ ಫೋನ್ (mobile phone) ನಲ್ಲಿ ಸೆರೆ ಹಿಡಿಯುತ್ತಿದ್ದರು (video).
ನಂತರ ಹಾವನ್ನು (snake) ಬಿಡಲಾಗಿತ್ತು. ಮಧ್ಯಾಹ್ನದ ವೇಳೆ ಶಿವರಾಜ್ ಆರೋಗ್ಯದಲ್ಲಿ ಏರುಪೇರಾಗಿ, ಕುಸಿದು ಬಿದ್ದಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಶಿವರಾಜ್ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.
ಶಿವರಾಜ್ ಹಾವನ್ನು ಬಾಯಲ್ಲಿ ಕಚ್ಚಿ ಹಿಡಿದ ವೇಳೆ, ಆತನಿಗೆ ಹಾವು ಕಚ್ಚಿದೆ (snake bite). ಆದರೆ ಇದು ಆತನ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಲಾಗಿದೆ. telangana kamareddy snake bite news