shimoga news | ಶಿವಮೊಗ್ಗ : ಮದುವೆಯಾಗಿ ಕೈ ಕೊಟ್ಟವನಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!

Shivamogga : R.S. Parameshwarappa sentenced to 2 years in jail for bribery!ಶಿವಮೊಗ್ಗ : ಲಂಚ ಪಡೆದ ಆರ್.ಎಸ್. ಪರಮೇಶ್ವರಪ್ಪಗೆ 2 ವರ್ಷ ಜೈಲು ಶಿಕ್ಷೆ!

ಶಿವಮೊಗ್ಗ (shivamogga), ನವೆಂಬರ್ 27: ಅನ್ಯ ಜಾತಿಯ ಯುವತಿಯನ್ನು ಮದುವೆಯಾಗಿ, ನಂತರ ತನ್ನ ಮನೆಗೆ ಕರೆದೊಯ್ಯದೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ವ್ಯಕ್ತಿಯೋರ್ವನಿಗೆ, 4 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಶಿಕಾರಿಪುರ ತಾಲೂಕು ಹಿತ್ತಲ ಗ್ರಾಮದ ಗೌಡರ ಬೀದಿ ನಿವಾಸಿ ಚಿದಾನಂದ (43) ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ 1.05 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 1 ವರ್ಷ 2 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾಯಾಧೀಶರಾದ ಪ್ರೀತಿ ಕೆ ಪಿ ಅವರು 25/11/2025 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ ಓ ಪುಷ್ಪಾ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : ಶಿಕ್ಷೆಗೊಳಗಾದ ವ್ಯಕ್ತಿಯು, 14/5/2020 ರಂದು ಶಿವಮೊಗ್ಗದ ಗುಡ್ಡೇಕಲ್ ದೇವಾಲಯದಲ್ಲಿ ತಾಲೂಕಿನ ಗ್ರಾಮವೊಂದರ ಯುವತಿಯೋರ್ವಳನ್ನು ವಿವಾಹವಾಗಿದ್ದ. ನಂತರ 21/12/2020 ರಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೊಂದಾವಣೆ ಮಾಡಿಸಿದ್ದ.

ಯುವತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿರಲಿಲ್ಲ.  3/1/2023 ರಂದು ಯುವತಿಯ ಮನೆಗೆ ಆಗಮಿಸಿ ತನ್ನ ಮನೆಗೆ ಕರೆದೊಯ್ಯುವುದಿಲ್ಲ ಎಂದು ಹೇಳಿ ಯುವತಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಈ ಕುರಿತಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Shivamogga, November 27: The 2nd Additional District and Sessions Court of Shivamogga has sentenced a man to 4 years rigorous imprisonment for marrying a young woman of a different caste and then, without taking her to his house, harassing her and threatening her life.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →