shimoga | Shimoga : Health inspector passed away ಶಿವಮೊಗ್ಗ : ಆರೋಗ್ಯ ನಿರೀಕ್ಷಣಾಧಿಕಾರಿ ವಿಧಿವಶ

shimoga | ಶಿವಮೊಗ್ಗ : ಆರೋಗ್ಯ ನಿರೀಕ್ಷಣಾಧಿಕಾರಿ ವಿಧಿವಶ

ಶಿವಮೊಗ್ಗ (shivamogga), ಸೆ. 11: ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ, ಶಿವಮೊಗ್ಗ ವಿದ್ಯಾನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ದಿಲೀಪ್ ರೆಡ್ಡಿ (37) ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದ ಘಟನೆ ಸೆ. 11 ರ ಬುಧವಾರ ಸಂಜೆ ನಡೆದಿದೆ.

ಮೃತರು ತಾಯಿ, ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ದಿಲೀಪ್ ರೆಡ್ಡಿ ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದಿಲೀಪ್ ರೆಡ್ಡಿ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವು ಅವರ ಹುಟ್ಟೂರಾದ ಚನ್ನಗಿರಿ ತಾಲೂಕು ಮರಡಿ ಗ್ರಾಮದಲ್ಲಿ ಸೆ. 12 ರ ಗುರುವಾರ ಮಧ್ಯಾಹ್ನ ನೆರವೇರಲಿದೆ ಎಂದು ಅವರ ಸಹೋದ್ಯೋಗಿಗಳು  ಮಾಹಿತಿ ನೀಡಿದ್ದಾರೆ.

ದಿಲೀಪ್ ರೆಡ್ಡಿ ಅವರ ಅಕಾಲಿಕ ನಿಧನಕ್ಕೆ ಆರೋಗ್ಯ ಇಲಾಖೆ ಅಧಿಕಾರಿ, ನೌಕರರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

shimoga | Shimoga : An unknown youth died! ಶಿವಮೊಗ್ಗ : ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಯುವಕ ಸಾವು! Previous post vijayanagara | ವಿಜಯನಗರ – ತುಂಗಾಭದ್ರ ನದಿಯಲ್ಲಿ ಕೊಲೆಗೀಡಾದ ಯುವಕನ ಶವ ಪತ್ತೆ
Sagara | Sagar - Sigandur Bridge Inauguration When? What did the MP say? ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಸಂಸದರು ಹೇಳಿದ್ದೇನು? Next post ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಸಂಸದರು ಹೇಳಿದ್ದೇನು?