shimoga | holehonnuru | ಅತ್ಯಾಚಾರ ಪ್ರಕರಣ : 31 ವರ್ಷದ ವ್ಯಕ್ತಿಗೆ 14 ವರ್ಷ ಶಿಕ್ಷೆ – 2. 26 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್!

shimoga | holehonnuru | Rape case: 31-year-old man sentenced to 14 years - Rs.2.26 lakhs fined! ಅತ್ಯಾಚಾರ ಪ್ರಕರಣ : 31 ವರ್ಷದ ವ್ಯಕ್ತಿಗೆ 14 ವರ್ಷ ಕಠಿಣ ಜೈಲು ಶಿಕ್ಷೆ - 2. 26 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್!

ಶಿವಮೊಗ್ಗ (shivamogga), ಸೆ. 14: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ (sexual harassment) ಎಸಗಿದ ವ್ಯಕ್ತಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ – 1 ನ್ಯಾಯಾಧೀಶರು 13-9-2024 ರಂದು ತೀರ್ಪು ನೀಡಿದ್ದಾರೆ.

ಶಿವಮೊಗ್ಗ ತಾಲೂಕಿನ 31 ವರ್ಷದ ವ್ಯಕ್ತಿಯೇ ಶಿಕ್ಷೆಗೊಳಗಾದವನೆಂದು (convicted) ಗುರುತಿಸಲಾಗಿದೆ. ಶಿಕ್ಷೆಯ ಜೊತೆಗೆ 2. 26 ಲಕ್ಷ ರೂ. ದಂಡ (fine) ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ, 1 ವರ್ಷ ಹೆಚ್ಚುವರಿಯಾಗಿ ಸಾದಾ ಕಾರಾಗೃಹ ಶಿಕ್ಷೆ (simple imprisonment) ಅನುಭವಿಸುವಂತೆ  ಆದೇಶದಲ್ಲಿ ತಿಳಿಸಲಾಗಿದೆ.

ನೊಂದ ಮಹಿಳೆಗೆ ಪರಿಹಾರ ರೂಪದಲ್ಲಿ 2 ಲಕ್ಷ ರೂ. ನೀಡುವಂತೆ ನ್ಯಾಯಾಧೀಶರಾದ (judge) ಜೆ. ಎಸ್. ಮೋಹನ್ ಅವರು ತೀರ್ಪಿನಲ್ಲಿ (judgement) ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಧರ್ ಹೆಚ್. ಆರ್ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : 2022 ನೇ ಸಾಲಿನಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯು, 32 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ (rape case) ಎಸಗಿದ್ದ. ಈ ಸಂಬಂಧ ನೊಂದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ, ಐಪಿಸಿ ಕಲಂ 376 ರ ಅಡಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ (holehonnuru police station) ಪ್ರಕರಣ ದಾಖಲಾಗಿತ್ತು.

ಇನ್ಸ್’ಪೆಕ್ಟರ್ (inspector) ಲಕ್ಷ್ಮೀಪತಿ ಆರ್ ಎಲ್ ಅವರು ಪ್ರಕರಣದ ತನಿಖೆ (enquiry) ನಡೆಸಿದ್ದರು. ನ್ಯಾಯಾಲಯಕ್ಕೆ ಆರೋಪಪಟ್ಟಿ (chargesheet) ದಾಖಲಿಸಿದ್ದರು.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →